ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು ಜೇಸನ್ ರಾಯ್ (56) ಅವರ ಭರ್ಜರಿ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 200 ರನ್ ಕಲೆಹಾಕಿತು. 201 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಸಫೋಟಕ ಆರಂಭ ಒದಗಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಕಿಂಗ್ ಕೊಹ್ಲಿ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 37 ಎಸೆತಗಳಲ್ಲಿ 6 ಫೋರ್ನೊಂದಿಗೆ 54 ರನ್ ಬಾರಿಸಿ ಔಟಾದರು.
ಕ್ಯಾಚ್ ಕೈ ಚೆಲ್ಲಿ ಮ್ಯಾಚ್ ಸೋತ RCB ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCBಗೆ ಸೋಲು KKR ವಿರುದ್ಧ ಮತ್ತೊಂದು ಹೀನಾಯ ಸೋಲು ಬ್ಯಾಟಿಂಗ್ನಲ್ಲಿ ಕೈ ಕೊಟ್ಟ ಡುಪ್ಲೆಸಿ, ಮಾಕ್ಸವೆಲ್ ಬೌಲಿಂಗ್ನಲ್ಲಿ ಕನ್ನಡಿಗ ವೈಶಾಕ್ ಮಿಂಚಿಂಗು
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 21 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿದೆ.
Virat Kohli Captaincy: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಪಿಎಲ್ 2023 ಪಂದ್ಯದಲ್ಲಿ RCB ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಕೋಲ್ಕತ್ತಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಏತನ್ಮಧ್ಯೆ, ಪ್ರಸಕ್ತ ಋತುವಿನಲ್ಲಿ ವಿರಾಟ್ ಕೊಹ್ಲಿ ಎಲ್ಲಿಯವರೆಗೆ RCB ಕ್ಯಾಪ್ಟನ್ ಆಗಿರ್ತಾರೆ ಎಂದು ಹೇಳಿದ್ದಾರೆ.
IPL 2023: ರಾಜಸ್ಥಾನ್ ರಾಯಲ್ಸ್ ವಿರುದ್ಧ 44 ಎಸೆತಗಳಲ್ಲಿ 77 ರನ್ ಗಳಿಸಿದ ಮ್ಯಾಚ್ ವಿನ್ನಿಂಗ್ ಆಟಗಾರ ಬೇರಾರೂ ಅಲ್ಲ ಅವರೇ ಗ್ಲೆನ್ ಮ್ಯಾಕ್ಸ್ವೆಲ್. ಮ್ಯಾಕ್ಸ್ವೆಲ್ ತಮ್ಮ ಇನ್ನಿಂಗ್ಸ್’ನಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್’ಗಳನ್ನು ಬಾರಿಸಿದ್ದಲ್ಲದೆ, ಫಾಫ್ ಡು ಪ್ಲೆಸಿಸ್ (39 ಎಸೆತಗಳಲ್ಲಿ 62 ರನ್) ಅವರೊಂದಿಗೆ ಮೂರನೇ ವಿಕೆಟ್’ಗೆ 127 ರನ್ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ಗೆಲುವಿಗೆ ಅಡಿಪಾಯ ಹಾಕಿದರು.
Virat Kohli-Anushka Sharma: ರಾಜಸ್ಥಾನ ರಾಯಲ್ಸ್ ಚೇಸಿಂಗ್’ನ 14ನೇ ಓವರ್’ನಲ್ಲಿ ಈ ಘಟನೆ ನಡೆದಿದೆ. ಹರ್ಷಲ್ ಪಟೇಲ್ ಬೌಲಿಂಗ್ ಮಾಡಿದಾಗ ನಿಧಾನಗತಿಯಲ್ಲಿ ದೊಡ್ಡ ಶಾಟ್ ಹೊಡೆಯಲಿ ಯಶಸ್ವಿ ಜೈಸ್ವಾಲ್ ಪ್ರಯತ್ನಿಸಿದರು. ಆದರೆ ಚೆಂಡು ಹೆಚ್ಚು ಎತ್ತರಕ್ಕೆ ಹೋಗದೆ, ಬೌಂಡರಿ ಬಳಿ ನಿಂತಿದ್ದ ಕೊಹ್ಲಿಯ ಕೈಗೆ ನೇರವಾಗಿ ಸಿಕ್ಕಿಬಿತ್ತು.
RR vs RCB Match Highlights: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್’ಸಿಬಿ ತಂಡ ನಿಗದಿತ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಪ್ರತ್ಯುತ್ತರವಾಗಿ ಬ್ಯಾಟಿಂಗ್’ಗಿಳಿದ ರಾಜಸ್ಥಾನ ತಂಡ 20 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಗಳಿಸಲಷ್ಟೇ ಶಕ್ತವಾಯಿತು.
R Ashwin Clash with Umpire: ಬ್ಯಾಟಿಂಗ್’ಗೆ ಆಗಮಿಸಿದ RCB ತಂಡವು ಇನ್ನಿಂಗ್ಸ್’ನ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿಯನ್ನು (0) ಟ್ರೆಂಟ್ ಬೌಲ್ಟ್ ಎಲ್ಬಿಡಬ್ಲ್ಯೂ ಔಟ್ ಮಾಡಿದಾಗ ಆರಂಭಿಕ ಹೊಡೆತವನ್ನು ಅನುಭವಿಸಿತು. ಇದಾದ ಬಳಿಕ ಫಾಫ್ ಡುಪ್ಲೆಸಿ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಅಮೋಘ ಪ್ರದರ್ಶನ ನೀಡಿ ತಂಡ ಉತ್ತಮ ಸ್ಕೋರ್ ತಲುಪಲು ನೆರವಾದರು
RCB vs RR Playing XI: ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯಕ್ಕಾಗಿ ಪ್ಲೇಯಿಂಗ್-11 ರಲ್ಲಿ ಬದಲಾವಣೆ ಮಾಡಿದ್ದಾರೆ. ಡೇವಿಡ್ ವಿಲ್ಲಿಗೆ ಅವಕಾಶ ನೀಡಿದ ಅವರು, ವೇಯ್ನ್ ಪಾರ್ನೆಲ್’ಗೆ ಗೇಟ್ ಪಾಸ್ ನೀಡಿದ್ದಾರೆ. ಕುತೂಹಲ ಎಂದರೆ, ರೀಸ್ ಟೋಪ್ಲೆ ಬದಲಿಗೆ ಪಾರ್ನೆಲ್’ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.
MS Dhoni Fans: ಉಭಯ ತಂಡಗಳು ಮುಖಾಮುಖಿ ಆಗುತ್ತಿದೆ ಎಂದು ತಿಳಿದರೆ ಸಾಕು ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಕೊಳ್ಳುತ್ತದೆ. ಇನ್ನು ಕಳೆದ ಏಪ್ರಿಲ್ 17ರಂದು ನಡೆದ ಸಿ ಎಸ್ ಕೆ vs ಆರ್ ಸಿ ಬಿ ಪಂದ್ಯದಲ್ಲೂ ಇಂತಹ ಅಭಿಮಾನದ ದೃಶ್ಯ ಕಂಡುಬಂದಿತ್ತು. ಓರ್ವ ಸಿಎಸ್’ಕೆ ಅಭಿಮಾನಿ ತನ್ನ ನೆಚ್ಚಿನ ಆಟಗಾರ ಧೋನಿಯನ್ನು ನೋಡಲು ಬೈಕ್’ನ್ನು ಮಾರಾಟ ಮಾಡಿ ಬಂದಿದ್ದನಂತೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಈ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಜಿಯೋ ಸಿನಿಮಾ ವೀಕ್ಷಕರ ವೀಕ್ಷಣೆಯ ದಾಖಲೆಯನ್ನು ಮುರಿದಿದೆ. ಪಂದ್ಯದ ವೇಳೆ ಸಂಖ್ಯೆ 2.4 ಕೋಟಿಗೂ ಅಧಿಕ ವೀಕ್ಷಕರಿಂದ ವೀಕ್ಷಣೆ ಪಡೆದಿದೆ. ಇದು ಪ್ರಸಕ್ತ ಐಪಿಎಲ್-2023ರ ಆವೃತ್ತಿಯ ಆನ್ಲೈನ್ ಲೈವ್ ಸ್ಟ್ರೀಮಿಂಗ್ ಫ್ಲಾಟ್ಫಾರ್ಮ್ ಜಿಯೋ ಸಿನಿಮಾದಲ್ಲಿ ಇದುವರೆಗಿನ ಅತಿ ಹೆಚ್ಚು ವೀಕ್ಷಕರ ವೀಕ್ಷಣೆಯಾಗಿದೆ.
RCB vs CSK: ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಕಲೆಹಾಕಿತು. ಇದಾದ ಬಳಿಕ ಗೆಲುವಿನ ಗುರಿ ತಲುಪಲು ಆರ್ಸಿಬಿ ತಂಡ ಮುನ್ನಡೆಯಿತು, ಆದರೆ 20 ಓವರ್’ನಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಲಷ್ಟೇ ಶಕ್ತವಾಯಿತು.
RCB vs CSK: ಹರ್ಷಲ್ ಪಟೇಲ್ ಚೆನ್ನೈನ ಬ್ಯಾಟಿಂಗ್ ಸಮಯದಲ್ಲಿ ಇನಿಂಗ್ಸ್’ನ ಕೊನೆಯ ಓವರ್ ಬೌಲ್ ಮಾಡಲು ಆಗಮಿಸಿದರು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಮೊದಲ ಎಸೆತದಲ್ಲಿ ಒಂದು ರನ್ ಕಲೆ ಹಾಕಿದರು. ಆ ಬಳಿಕ ಮೊಯಿಲ್ ಅವರಿಗೆ ಎಸೆದ ಎರಡನೇ ಬಾಲ್ ನೋ ಬಾಲ್ ಎಂದು ಘೋಷಿಸಲಾಯಿತು.
Virat Kohli vs Sourav Ganguly: ಆಟ ಮುಗಿದ ತಕ್ಷಣ ಎರಡೂ ತಂಡಗಳ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸಾಂಪ್ರದಾಯಿಕವಾಗಿ ಹ್ಯಾಂಡ್ಶೇಕ್ ಮಾಡಲು ಬಂದರು. ಆದರೆ ಆ ಸಂದರ್ಭದಲ್ಲಿ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಇದ್ದ ಕೊಹ್ಲಿ, ಡೆಲ್ಲಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಜೊತೆ ಇದ್ದ ಗಂಗೂಲಿಯವರನ್ನು ಗುರಾಯಿಸಿ ನೋಡಿ, ಹ್ಯಾಂಡ್ ಶೇಕ್ ಕೊಡದೆ ಮುಂದೆ ನಡೆದರು.
ಭಾರತದಲ್ಲಿ ಕ್ರಿಕೆಟ್ ಮತ್ತು ಕ್ರಿಕೆಟಿಗರ ಮೇಲಿನ ಉತ್ಸಾಹವು ಅಪ್ರತಿಮವಾಗಿದೆ ಮತ್ತು ಏಪ್ರಿಲ್ 12 ರಂದು ಬುಧವಾರದಂದು ಇಬ್ಬರು ಅಭಿಮಾನಿಗಳು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಅವರ ಕಾರನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
LSG Players Emotional Story: ಇತ್ತೀಚೆಗೆ ಆರ್ ಸಿ ಬಿ ವಿರುದ್ಧ ಕೊನೆಯ ಓವರ್’ನಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ್ದ ಈತ ತಂಡದ ಗೆಲುವಿಗೆ ಕೊಡುಗೆ ನೀಡಿದ್ದ. ಲಕ್ನೋ ಸೂಪರ್ ಜೈಂಟ್ಸ್ (ಎಲ್ ಎಸ್ ಜಿ) ಪರ ಆಡುತ್ತಿರುವ ನಿಕೋಲಸ್ ಪೂರನ್ ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.
RCB vs LSG: ಪಂದ್ಯದಲ್ಲಿ ಆರ್’ಸಿಬಿ ಪರ ಮೈದಾನಕ್ಕೆ ಬಂದ ಮೂವರು ಆಟಗಾರರು ಭರ್ಜರಿ ಆಟವಾಡಿದ್ದಾರೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್’ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ಮೂವರೂ ಸಹ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಸಿಕ್ಸ್, ಫೋರ್’ಗಳ ಅಬ್ಬರಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ನಡುಗಿದೆ. ಅಷ್ಟೇ ಅಲ್ಲ ಕೇವಲ 48 ಎಸೆತಕ್ಕೆ 108 ರನ್’ಗಳ ಭರ್ಜರಿ ಜೊತೆಯಾಟವನ್ನು ಮ್ಯಾಕ್ಸ್’ವೆಲ್ ಮತ್ತು ಡು ಪ್ಲೆಸಿಸ್ ಆಡಿದ್ದಾರೆ.
RCB vs LSG: ಕ್ರೀಸ್’ಗೆ ಬಂದ ಮೂವರು ಆಟಗಾರರು ಭರ್ಜರಿ ಆಟವಾಡಿದ್ದಾರೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್’ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ಮೂವರೂ ಸಹ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಸಿಕ್ಸ್, ಫೋರ್’ಗಳ ಅಬ್ಬರಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ನಡುಗಿದೆ. ಅಷ್ಟೇ ಅಲ್ಲ ಕೇವಲ 48 ಎಸೆತಕ್ಕೆ 108 ರನ್’ಗಳ ಭರ್ಜರಿ ಜೊತೆಯಾಟವನ್ನು ಮ್ಯಾಕ್ಸ್’ವೆಲ್ ಮತ್ತು ಡು ಪ್ಲೆಸಿಸ್ ಆಡಿದ್ದಾರೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ವಿರುದ್ಧ ನಡೆಯುವ ಪಂದ್ಯದ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಲಕ್ನೋ ತಂಡದ ನಾಯಕ ಕೆ.ಎಲ್ ರಾಹುಲ್ ಅರ್ಸಿಬಿ ವಿರುದ್ಧ ದೊಡ್ಡ ಇನಿಂಗ್ಸ್ ಆಡುವ ಗುರಿಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.