Indian Premier League 2023: ವ್ಯರ್ಥವಾದ ವಿರಾಟ್ ಅರ್ಧ ಶತಕ,ಆರ್ಸಿಬಿಗೆ 21 ರನ್ ಗಳ ಸೋಲು 

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 21 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿದೆ.

Written by - Zee Kannada News Desk | Last Updated : Apr 26, 2023, 11:45 PM IST
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಆರಂಭವನ್ನೇ ಕಂಡಿತ್ತು,
  • ಈ ಸಂದರ್ಭದಲ್ಲಿ ಫಾಫ್ ದುಪ್ಲೆಸಿಸ್ ತಂಡದ ಮೊತ್ತ 31 ಆಗಿದ್ದಾಗ ಸುಯಸ್ ಶರ್ಮಾಗೆ ವಿಕೆಟ್ ಒಪ್ಪಿಸಿದರು.
  • ನಂತರ ಬಂದ ಶಾಬಾಜ್ ಅಹಮದ್ 2, ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ 5 ರನ್ ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ತಂಡಕ್ಕೆ ನಿರಾಸೆ ಮೂಡಿಸಿದರು.
Indian Premier League 2023: ವ್ಯರ್ಥವಾದ ವಿರಾಟ್ ಅರ್ಧ ಶತಕ,ಆರ್ಸಿಬಿಗೆ 21 ರನ್ ಗಳ ಸೋಲು  title=

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 21 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿದೆ.

ಇದನ್ನೂ ಓದಿ: ನನ್ನ ಪ್ರಚಾರ ವ್ಯಕ್ತಿ ಪರ, ಪಕ್ಷದ ಪರವಲ್ಲ

ಟಾಸ್ ಗೆದ್ದು ಆರ್ಸಿಬಿ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಇದೆ ವೇಳೆ ಬ್ಯಾಟಿಂಗ್ ಅವಕಾಶ ಪಡೆದ ಕೊಲ್ಕತ್ತಾ ತಂಡವು ಆರಂಭಿಕ ಆಟಗಾರರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಐದು ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು.

ಕೊಲ್ಕತ್ತಾ ತಂಡದ ಪರವಾಗಿ ಜೇಸನ್ ರಾಯ್ ಕೇವಲ 29 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಐದು ಸಿಕ್ಸರ್ ಗಳ ನೆರವಿನಿಂದ 56 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು,ಜೊತೆಗೆ ಜಗದೀಶನ್ 27,ವೆಂಕಟೇಶ್ ಐಯ್ಯರ್ 31, ನಿತೀಶ್ ರಾಣಾ 48 ರನ್ ಗಳಿಸುವ ಮೂಲಕ ತಂಡವು ಬೃಹತ್ ಮೊತ್ತ ಗಳಿಸುವಲ್ಲಿ ನೆರವಾದರು.

ಇದನ್ನೂ ಓದಿ: "ಯಡಿಯೂರಪ್ಪ ಅವರ ಪುತ್ರರಿಗೆ ಟಿಕೆಟ್ ನೀಡುವುದು ಪರಿವಾರವಾದವಲ್ಲವೇ?"

ಇನ್ನೂ ಕೋಲ್ಕತ್ತಾ ನೀಡಿದ 201 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಆರಂಭವನ್ನೇ ಕಂಡಿತ್ತು, ಈ ಸಂದರ್ಭದಲ್ಲಿ ಫಾಫ್ ದುಪ್ಲೆಸಿಸ್ ತಂಡದ ಮೊತ್ತ 31 ಆಗಿದ್ದಾಗ ಸುಯಸ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಶಾಬಾಜ್ ಅಹಮದ್ 2, ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ 5 ರನ್ ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ತಂಡಕ್ಕೆ ನಿರಾಸೆ ಮೂಡಿಸಿದರು.

ಆದರೆ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯುವ ಸಂದರ್ಭದಲ್ಲಿಯೇ ವಿರಾಟ್ ಕೊಹ್ಲಿ ತಮ್ಮ ವೈಯಕ್ತಿಕ ಮೊತ್ತ 54 ರನ್ ಗಳಾಗಿದ್ದಾಗ ವಿಕೆಟ್ ಒಪ್ಪಿಸಿದರು. ಇದಾದ ನಂತರ ಆರ್ಬಿಸಿ ತಂಡವು ರನ್ ಗತಿಯಲ್ಲಿ ಲಯವನ್ನು ಕಂಡುಕೊಳ್ಳಲಿಲ್ಲ, ನಿರ್ಣಾಯಕ ಸಂದರ್ಭದಲ್ಲಿಯೇ ಕೆಳಕ್ರಮಾಂಕದ ಬ್ಯಾಟ್ಸ್ಮನ್ ಗಳು ಕೈಕೊಟ್ಟಿದ್ದರಿಂದಾಗಿ ಆರ್ಬಿಸಿ ಅಂತಿಮವಾಗಿ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಆಮೂಲಕ 21 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News