Umpireನ ಆ ನಿರ್ಧಾರದಿಂದ ಕೋಪಗೊಂಡ R Ashwin! ಪಂದ್ಯದ ಮಧ್ಯದಲ್ಲಿಯೇ ಜಗಳ ಶುರು ಮಾಡಿದ ಸ್ಟಾರ್ ಬೌಲರ್

R Ashwin Clash with Umpire: ಬ್ಯಾಟಿಂಗ್‌’ಗೆ ಆಗಮಿಸಿದ RCB ತಂಡವು ಇನ್ನಿಂಗ್ಸ್‌’ನ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿಯನ್ನು (0) ಟ್ರೆಂಟ್ ಬೌಲ್ಟ್ ಎಲ್ಬಿಡಬ್ಲ್ಯೂ ಔಟ್ ಮಾಡಿದಾಗ ಆರಂಭಿಕ ಹೊಡೆತವನ್ನು ಅನುಭವಿಸಿತು. ಇದಾದ ಬಳಿಕ ಫಾಫ್ ಡುಪ್ಲೆಸಿ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಅಮೋಘ ಪ್ರದರ್ಶನ ನೀಡಿ ತಂಡ ಉತ್ತಮ ಸ್ಕೋರ್ ತಲುಪಲು ನೆರವಾದರು

Written by - Bhavishya Shetty | Last Updated : Apr 23, 2023, 07:16 PM IST
    • ಆರ್‌’ಸಿಬಿ ಇನ್ನಿಂಗ್ಸ್‌ನಲ್ಲಿ ಸಂಜು 13ನೇ ಓವರ್‌’ಗೆ ಚೆಂಡನ್ನು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ನೀಡಿದರು.
    • ಮರುಪರಿಶೀಲಿಸಲು ರಿವ್ಯೂವ್ ತೆಗೆದುಕೊಳ್ಳುವಂತೆ ಸ್ಯಾಮ್ಸನ್’ಗೆ ಅಶ್ವಿನ್ ಮನವಿ ಮಾಡಿದರು.
    • ಆರ್‌’ಸಿಬಿ ನಿಗದಿತ 20 ಓವರ್‌’ಗಳಲ್ಲಿ 9 ವಿಕೆಟ್‌ಗೆ 189 ರನ್ ಗಳಿಸಿತು.
Umpireನ ಆ ನಿರ್ಧಾರದಿಂದ ಕೋಪಗೊಂಡ R Ashwin! ಪಂದ್ಯದ ಮಧ್ಯದಲ್ಲಿಯೇ ಜಗಳ ಶುರು ಮಾಡಿದ ಸ್ಟಾರ್ ಬೌಲರ್ title=
R Ashwin

R Ashwin Clash with Umpire: ಇಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೈದಾನದಲ್ಲಿಯೇ ಅಂಪೈರ್ ಜೊತೆ ಜಗಳ ಶುರುಮಾಡಿಕೊಂಡಿದ್ದಾರೆ. ಇದರಿಂದಾಗಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ಕೆಲಕಾಲ ಗೊಂದಲ ಉಂಟಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಆರ್‌’ಸಿಬಿಯನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆರ್‌’ಸಿಬಿ ನಿಗದಿತ 20 ಓವರ್‌’ಗಳಲ್ಲಿ 9 ವಿಕೆಟ್‌ಗೆ 189 ರನ್ ಗಳಿಸಿತು.

ಇದನ್ನೂ ಓದಿ: IPL 2023: ಸೋತರೂ ಇತಿಹಾಸ ಸೃಷ್ಟಿಸಿದ ಕೆಎಲ್ ರಾಹುಲ್! ದಿಗ್ಗಜರ ಮಣಿಸಿ ಈ ವಿಷಯದಲ್ಲಿ ನಂಬರ್-1 ಸ್ಥಾನಕ್ಕೇರಿದ ಕನ್ನಡಿಗ

ಬ್ಯಾಟಿಂಗ್‌’ಗೆ ಆಗಮಿಸಿದ RCB ತಂಡವು ಇನ್ನಿಂಗ್ಸ್‌’ನ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿಯನ್ನು (0) ಟ್ರೆಂಟ್ ಬೌಲ್ಟ್ ಎಲ್ಬಿಡಬ್ಲ್ಯೂ ಔಟ್ ಮಾಡಿದಾಗ ಆರಂಭಿಕ ಹೊಡೆತವನ್ನು ಅನುಭವಿಸಿತು. ಇದಾದ ಬಳಿಕ ಫಾಫ್ ಡುಪ್ಲೆಸಿ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಅಮೋಘ ಪ್ರದರ್ಶನ ನೀಡಿ ತಂಡ ಉತ್ತಮ ಸ್ಕೋರ್ ತಲುಪಲು ನೆರವಾದರು. ಫಾಫ್ ಡುಪ್ಲೆಸಿ 39 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌’ಗಳ ನೆರವಿನಿಂದ 62 ರನ್ ಗಳಿಸಿದರು. ಮ್ಯಾಕ್ಸ್‌ವೆಲ್ 44 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌’ಗಳಿಂದ 77 ರನ್ ಬಾರಿಸಿದರು. ಇವರಿಬ್ಬರು ಮೂರನೇ ವಿಕೆಟ್‌’ಗೆ 127 ರನ್‌’ಗಳ ಜೊತೆಯಾಟವಾಡಿದರು. ರಾಜಸ್ಥಾನ ಪರ ವೇಗಿ ಟ್ರೆಂಟ್ ಬೌಲ್ಟ್ ಮತ್ತು ಸಂದೀಪ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ಅಶ್ವಿನ್ ಮತ್ತು ಯುಜ್ವೇಂದ್ರ ಚಾಹಲ್ ಒಂದೊಂದು ವಿಕೆಟ್ ಪಡೆದರು.

ಆರ್‌’ಸಿಬಿ ಇನ್ನಿಂಗ್ಸ್‌’ನಲ್ಲಿ ವಿವಾದ!

ಆರ್‌’ಸಿಬಿ ಇನ್ನಿಂಗ್ಸ್‌ನಲ್ಲಿ ಸಂಜು 13ನೇ ಓವರ್‌’ಗೆ ಚೆಂಡನ್ನು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ನೀಡಿದರು. ಓವರ್‌’ನ ಮೂರನೇ ಎಸೆತದಲ್ಲಿ ಈ ಘಟನೆ ನಡೆದಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಮಾಡುತ್ತಿದ್ದರು. ಈ ಬಾಲ್ ಅನ್ನು ಅಂಪೈರ್ ವೈಡ್ ಎಂದು ಘೋಷಿಸಿದರು. ಜೊತೆಗೆ ಮ್ಯಾಕ್ಸ್‌ವೆಲ್ ರನ್ ಮಾಡುವ ಮೂಲಕ ಒಂದು ರನ್ ಪೂರ್ಣಗೊಳಿಸಿದರು. ಇದರಿಂದ ಅಶ್ವಿನ್ ಅಚ್ಚರಿಗೊಂಡಿದ್ದಾರೆ. ಚೆಂಡು ವೈಡ್ ಆಗಿಲ್ಲ ಎಂದು ಅವರು ಭಾವಿಸಿದರು. ಆಗ ಅಶ್ವಿನ್ ಈ ಬಗ್ಗೆ ಅಂಪೈರ್ ಜೊತೆ ವಾಗ್ವಾದ ಆರಂಭಿಸಿದರು. ಇದನ್ನು ಮರುಪರಿಶೀಲಿಸಲು ರಿವ್ಯೂವ್ ತೆಗೆದುಕೊಳ್ಳುವಂತೆ ಸ್ಯಾಮ್ಸನ್’ಗೆ ಅಶ್ವಿನ್ ಮನವಿ ಮಾಡಿದರು.

ಇದನ್ನೂ ಓದಿ: IPL 2023: ಆಯ್ಕೆಗಾರರಿಂದ ನಿರ್ಲಕ್ಷಿಸಲ್ಪಟ್ಟ ಆ ಆಟಗಾರ ಇಂದು ಲಸಿತ್ ಮಾಲಿಂಗ ದಾಖಲೆಯನ್ನೇ ಸರಿಗಟ್ಟಿದ!

ಈ ವೇಳೆ ಅಶ್ವಿನ್ ಅಂಪೈರ್ ಜೊತೆ ನಿರಂತರವಾಗಿ ಮಾತನಾಡುತ್ತಿದ್ದರು. ಆದರೆ ಥರ್ಡ್ ಅಂಪೈರ್ ನಿರ್ಣಯ ಕೈಗೊಂಡು ಬಾಲ್ ವೈಡ್ ಎಂದು ಘೋಷಿಸಲಾಯಿತು. ಚೆಂಡು ಮ್ಯಾಕ್ಸ್‌ವೆಲ್‌’ಗೆ ತಾಗಿರಲಿಲ್ಲ. ಇದನ್ನು ನೋಡಿದ ಅಶ್ವಿನ್ ಸ್ವಲ್ಪ ನಿರಾಸೆಯಾದರು. ಇನ್ನು ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿವೆ ಕೆಲವು ಬಳಕೆದಾರರು ಅಶ್ವಿನ್‌ ವರ್ತನೆಯನ್ನು ಟೀಕಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News