ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತಂಡಕ್ಕೆ ಹೊಸ ಮುಖ್ಯ ಕೋಚ್ ಅನ್ನು ಆಯ್ಕೆ ಮಾಡಿದೆ. ಸಂಜಯ್ ಬಂಗಾರ್ ಬದಲಿಗೆ ಆರ್’ಸಿಬಿ ಆಂಡಿ ಫ್ಲವರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದೆ.
Royal Challengers Bangalore: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಈಗಾಗಲೇ ಐಪಿಎಲ್ 2024 ಗಾಗಿ ತಯಾರಿ ಆರಂಭಿಸಿದೆ. RCB ತನ್ನ ತಂಡದಿಂದ 2 ಅನುಭವಿಗಳನ್ನು ಕೈಬಿಡಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಪ್ರಮುಖ ಫ್ರಾಂಚೈಸಿ ಕ್ರಿಕೆಟ್ ತಂಡವಾಗಿದೆ. 2008 ರಲ್ಲಿ ಸ್ಥಾಪಿತವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತವಾಗಿ ಐಪಿಎಲ್ ನ ಭಾಗವಾಗಿದೆ, ತಮ್ಮ ರೋಮಾಂಚಕ ಪ್ರದರ್ಶನಗಳೊಂದಿಗೆ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ. ವಿವಿಧ ಮುಖ್ಯ ಕೋಚ್ಗಳ ನೇತೃತ್ವದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಲವು ವೈಭವದ ಕ್ಷಣಗಳು ಮತ್ತು ಹೋರಾಟಗಳಿಗೆ ಸಾಕ್ಷಿಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ಗಳ ಅಧಿಕಾರಾವಧಿ ಮತ್ತು ಅವರ ಮಾರ್ಗದರ್ಶನದಲ್ಲಿ ತಂಡದ ಪ್ರದರ್ಶನವನ್ನು ಇಲ್ಲಿ ನೋಡೋಣ ಬನ್ನಿ..
Yuzvendra Chahal on RCB: ಯುಜ್ವೇಂದ್ರ ಚಹಾಲ್ ತಮ್ಮ ವೃತ್ತಿ ಜೀವನದಲ್ಲಿ 8 ವರ್ಷಗಳ ಕಾಲ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿದ್ದರು. ಆ ಬಳಿಕ ಫ್ರಾಂಚೈಸಿ ಆರ್ಸಿಬಿಯಿಂದ ಅವರನ್ನು ರಿಲೀಸ್ ಮಾಡಿದ್ದು, ಈ ಬಗ್ಗೆ ಬೇಸರ ಹೊರಹಾಕಿದ್ದಾರೆ.
Virat Kohli vs Naveen ul haq: ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನ ನವೀನ್-ಉಲ್-ಹಕ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಪಂದ್ಯ ಮುಗಿದ ನಂತರ ಇಬ್ಬರೂ ಆಟಗಾರರು ಕೈಕುಲುಕುತ್ತಿದ್ದರು. ಆಗ ನವೀನ್ ವಿರಾಟ್ ಮುಖಾಮುಖಿಯಾದರು. ಇದಾದ ನಂತರ ಲಕ್ನೋದ ಮೆಂಟರ್ ಗೌತಮ್ ಗಂಭೀರ್ ಕೂಡ ಈ ಜಗಳಕ್ಕೆ ಮಧ್ಯಪ್ರವೇಶ ಮಾಡಿದರು
Virat Kohli : ಕಿಂಗ್ ಅಂತಾನೇ ಕರೆಸಿಕೊಳ್ಳೊ ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ಮುಟ್ಟಿದ್ದೆಲ್ಲವು ಚಿನ್ನವಾಗುತ್ತಿದೆ. ಐಪಿಲ್ನಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿ ಟೀಕೆಗಳಿಗೆ ಸರಿಯಾಗಿ ಉತ್ತರ ನೀಡಿದ್ದ ಟೀಮ್ ಇಂಡಿಯಾದ ಮಾಜಿ ನಾಯಕ ಇವರು. ಇದೀಗ ತಮ್ಮ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯಲ್ಲಿ ದಾಖಲೆ ಬರೆದಿದ್ದಾರೆ.
RCB fans on Shubman gill : ವಿರಾಟ್ ಅಭಿಮಾನಿಗಳು ಗಿಲ್ ಅವರನ್ನು ಮೆಚ್ಚುತ್ತಾರೆ. ಅವರ ಆಟವನ್ನು ಗೌರವಿಸುತ್ತಾರೆ ಎನ್ನುವು ಎಲ್ಲರಿಗೂ ತಿಳಿದಿದೆ. ಅಲ್ಲದೆ ಸೋತರು ಸಹ ಇನ್ನೊಬ್ಬರು ನಿಂದಿಸುವ ಸಭಾವವನ್ನು ಆರ್ಸಿಬಿ ಅಭಿಮಾನಿಗಳು ಎಂದಿಗೂ ಮಾಡಿಲ್ಲ. ಹೆಚ್ಚಾಗಿ ಸೋಲು ಹೊಸತಲ್ಲ. ಆದ್ರೆ ಇದೆ ಸಮಯವನ್ನು ಬಳಸಿಕೊಂಡು ಕೆಲ ಕಿಡಿಗೇಡಿಗಳು ಮಾಡುತ್ತಿರುವ ಇಂತಹ ಕೆಲಸದಿಂದಾಗಿ ವಿರಾಟ್ ಮತ್ತು ಆರ್ಸಿಬಿ ಅಭಿಮಾನಿಗಳು ಅವಮಾನ ಎದುರಿಸಬೇಕಾಗಿದೆ.
RCB vs GT, IPL 2023: ಐಪಿಎಲ್ ನ 16ನೇ ಸೀಸನ್ ನಲ್ಲಿಯೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರಾಸೆ ಅನುಭವಿಸಿದ್ದು, ಐಪಿಎಲ್ ಟ್ರೋಫಿ ಗೆಲ್ಲುವ ಕನಸು ನನಸಾಗಲಿಲ್ಲ. ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 6 ವಿಕೆಟ್ ಗಳಿಂದ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಆಸೆ ಭಗ್ನಗೊಂಡಿದೆ.
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನ್ನು ಅನುಭವಿಸಿದೆ.ಆ ಮೂಲಕ ಪ್ಲೇ ಆಫ್ ಗೆ ಸಾಗುವ ಆರ್ಸಿಬಿ ಕನಸು ಭಗ್ನವಾಗಿದೆ.
ಟಾಸ್ ಗೆದ್ದು ಗುಜರಾತ್ ಟೈಟಾನ್ಸ್ ತಂಡವು ಮೊದಲು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಬ್ಯಾಟಿಂಗ್ ಅವಕಾಶ ನೀಡಿತು. ಈ ಅವಕಾಶ ವನ್ನು ಸದುಪಯೋಗಪಡಿಸಿಕೊಂಡ ಬೆಂಗಳೂರು ತಂಡವು ನಾಯಕ ಫ್ಯಾಪ್ ದುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಅವರ ಸ್ಪೋಟಕ ಬ್ಯಾಟಿಂಗ್ ನಿಂದಾಗಿ ಮೊದಲ ವಿಕೆಟ್ 67 ರನ್ ಗಳಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿದೆ.
SRH vs RCB Match big Turning Point: ಅದೊಂದು ಎಸೆತ ಟರ್ನಿಂಗ್ ಪಾಂಯಿಂಟ್ ಥರ ಕೆಲಸ ಮಾಡಿತ್ತು. ಇದಾದ ಬಳಿಕ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್, ಸನ್ ರೈಸರ್ಸ್ ಹೈದರಾಬಾದ್ ಬೌಲರ್ ಗಳ ವಿರುದ್ಧ ಸ್ಪೋಟಕ ಬ್ಯಾಟಿಂಗ್ ಮಾಡಿದ್ದರು.
Tata IPL 2023: ನಗರದ ದೇರಳಕಟ್ಟೆ ಕೋಣಾಜೆ ವಿಶ್ವವಿದ್ಯಾಲಯ ರಸ್ತೆಯಲ್ಲಿರುವ ಕಣಚೂರು ಮೆಡಿಕಲ್ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿರುವ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ನಲ್ಲಿ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ಪಂದ್ಯಗಳ ನೇರಪ್ರಸಾರ ವೀಕ್ಷಣೆಯನ್ನು ಅಭಿಮಾನಿಗಳಿಗೆ ಆಹ್ವಾನ ನೀಡಿದೆ.
RCB Playoff: ಇಂಗ್ಲೆಂಡ್ ಬ್ಯಾಟ್ಸ್ಮನ್ ಲಿವಿಂಗ್ ಸ್ಟೋನ್ ಐದು ಬೌಂಡರಿ ಮತ್ತು ಒಂಬತ್ತು ಸಿಕ್ಸರ್ಗಳ ಸಹಾಯದಿಂದ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಆದರೆ ತಂಡಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಸೋಲಿನ ನಂತರ ಪಂಜಾಬ್ 13 ಪಂದ್ಯಗಳಲ್ಲಿ ಕೇವಲ 12 ಅಂಕಗಳನ್ನು ಪಡೆದಿದೆ. ಕೊನೆಯ ಪಂದ್ಯವನ್ನು ಗೆದ್ದ ನಂತರ ಡೆಲ್ಲಿ 14 ಅಂಕಗಳನ್ನು ಗಳಿಸಿದೆ.
12 ಅಂಕಗಳೊಂದಿಗೆ, ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಐಪಿಎಲ್ ಪಾಯಿಂಟ್ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ ಮತ್ತು ಪ್ಲೇಆಫ್ ಸ್ಥಾನಕ್ಕಾಗಿ ಅವರ ಪ್ರಯತ್ನ ಇನ್ನೂ ಮುಂದುವರೆದಿದೆ.
IPL 2023, DC vs RCB: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದರು. ಈ ಇನ್ನಿಂಗ್ಸ್ನ ನಂತರವೂ ವಿರಾಟ್ ಟೀಕೆಗೆ ಗುರಿಯಾಗಿದ್ದಾರೆ.
Virat Kohli Sourav Ganguly Controversy: ಪಂದ್ಯದ ನಂತರ, ಇಬ್ಬರೂ ಹಸ್ತಲಾಘವ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿದೆ. ಮೇ 6ರಂದು ಮತ್ತೊಮ್ಮೆ ಈ ಎರಡು ತಂಡಗಳ ನಡುವೆ ಪಂದ್ಯ ನಡೆದಿದ್ದು, ಈ ಸಂದರ್ಭದಲ್ಲಿ ದಿಗ್ಗಜರು ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. ಆದರೆ ಈ ಬಾರಿ ಇಬ್ಬರೂ ಮಾಡಿದ್ದು ನೀವೆಲ್ಲರೂ ನೋಡಿದ್ರೆ ಖುಷಿ ಪಡುವುದು ಗ್ಯಾರಂಟಿ
ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಫರ್ಮ್ 'ಡಿಪೋರ್ಟೆಸ್ & ಫೈನಾಂಜಾಸ್ ಸಮೀಕ್ಷೆಯಲ್ಲಿ ಆರ್ಸಿಬಿ ತಂಡವು ತಾಂಜಾನಿಯಾದ ಸಿಂಬಾ ಸ್ಪೋರ್ಟ್ಸ್ ಕ್ಲಬ್ ಅನ್ನು 53.8% ಮತಗಳೊಂದಿಗೆ ಸೋಲಿಸುವ ಮೂಲಕ 'ಟ್ವಿಟರ್ ವಿಶ್ವಕಪ್ 2023 ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಟ್ವಿಟ್ಟರ್ನಲ್ಲಿ ನಡೆದ ಸಮೀಕ್ಷೆಯ ಪ್ರಕಾರ, RCB ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾ ತಂಡವಾಗಿದೆ.ತಾಂಜಾನಿಯಾದ ಸಿಂಬಾ ಸ್ಪೋರ್ಟ್ಸ್ ಕ್ಲಬ್ ಅನ್ನು 53.8% ಮತಗಳೊಂದಿಗೆ ಸೋಲಿಸಿ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಈಗ ಆರ್ಸಿಬಿ ಯಶಸ್ವಿಯಾಗಿದೆ.ಸಿಂಬಾ ಸ್ಪೋರ್ಟ್ಸ್ ಕ್ಲಬ್ ಕರಿಯಾಕೂ, ಡಾರ್ ಎಸ್ ಸಲಾಮ್ ತಾಂಜಾನಿಯಾ ಮೂಲದ ಫುಟ್ಬಾಲ್ ಕ್ಲಬ್ ಆಗಿದೆ.
Rashmika Mandanna: ರಶ್ಮಿಕಾ ಮಂದಣ್ಣ ತಮ್ಮ ನೆಚ್ಚಿನ ಐಪಿಎಲ್ ಬ್ಯಾಟ್ಸ್ಮನ್ ಮತ್ತು ತಂಡ ಯಾವುದೆಂದು ಬಹಿರಂಗಪಡಿಸಿದ್ದಾರೆ. ಭಾರತದಲ್ಲಿ ಐಪಿಎಲ್ ಫೀವರ್ ಮಧ್ಯೆ ರಶ್ಮಿಕಾ ಮಂದಣ್ಣ ಅವರ ಈ ಮಾತುಗಳು ಅಭಿಮಾನಿಗಳಲ್ಲಿ ಜೋಷ್ ಹುಟ್ಟುಹಾಕಿದೆ.
Royal Challengers Bangalore : ನೆನ್ನೆ (ಸೋಮವಾರ) ಏಕನಾ ಸ್ಟೇಡಿಯಂ ಎಲ್ಎಸ್ ಜಿ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ರೋಚಕ ಗೆಲುವು ಸಾಧಿಸಿದೆ. ಹಳೆಯ ಸೇಡಿಗೆ ಉತ್ತರ ನೀಡಿದ ಬೆಂಗಳೂರು ಬಾಯ್ಸ್ ರಾಹುಲ್ ಪಡೆಯನ್ನು ಅವರ ತವರು ನೆಲದಲ್ಲಿ ಸೋಲಿಸಿದೆ. ಈ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖಭಂಗ ಅನುಭವಿಸಿದ ಆರ್ಸಿಬಿ ಸೇಡು ತೀರಿಸಿಕೊಂಡಿದೆ.
ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಲಕ್ನೋ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬೆಂಗಳೂರು ತಂಡವು ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ 31 ಹಾಗೂ ಫ್ಯಾಫ್ ದುಪ್ಲೆಸಿಸ್ 44 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರನು ಕೂಡ 20 ರ ಗಡಿ ದಾಟಲಿಲ್ಲ ಇದರ ಪರಿಣಾಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂತಿಮವಾಗಿ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ ಕೇವಲ 126 ಗಳನ್ನು ಗಳಿಸಿತು.ಇದಕ್ಕೆ ಉತ್ತರವಾಗಿ ಲಕ್ನೋ ತಂಡವು 20 ಓವರ್ ಗಳಲ್ಲಿ 108 ರನ್ ಗಳಿಗೆ ಸರ್ವಪತನವನ್ನು ಕಂಡಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.