MS Dhoni: ಧೋನಿಯನ್ನ ನೋಡಲು ಬೈಕನ್ನೇ ಮಾರಿ ಬಂದ ಅಭಿಮಾನಿ! ಯಾರು ಗೊತ್ತಾ ಈ ಕ್ರೇಜಿ ಫ್ಯಾನ್?

MS Dhoni Fans: ಉಭಯ ತಂಡಗಳು ಮುಖಾಮುಖಿ ಆಗುತ್ತಿದೆ ಎಂದು ತಿಳಿದರೆ ಸಾಕು ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಕೊಳ್ಳುತ್ತದೆ. ಇನ್ನು ಕಳೆದ ಏಪ್ರಿಲ್ 17ರಂದು ನಡೆದ ಸಿ ಎಸ್‌ ಕೆ vs ಆರ್‌ ಸಿ ಬಿ ಪಂದ್ಯದಲ್ಲೂ ಇಂತಹ ಅಭಿಮಾನದ ದೃಶ್ಯ ಕಂಡುಬಂದಿತ್ತು. ಓರ್ವ ಸಿಎಸ್’ಕೆ ಅಭಿಮಾನಿ ತನ್ನ ನೆಚ್ಚಿನ ಆಟಗಾರ ಧೋನಿಯನ್ನು ನೋಡಲು ಬೈಕ್’ನ್ನು ಮಾರಾಟ ಮಾಡಿ ಬಂದಿದ್ದನಂತೆ.

Written by - Bhavishya Shetty | Last Updated : Apr 20, 2023, 03:17 PM IST
    • ಏಪ್ರಿಲ್ 17 ರಂದು ಚೆನ್ನೈ ಮತ್ತು ಬೆಂಗಳೂರು ನಡುವೆ ಹೈವೋಲ್ಟೇಜ್ ಪಂದ್ಯ
    • ಐಪಿಎಲ್’ನಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವುದು ಸಿಎಸ್’ಕೆ ತಂಡ
    • ಈತನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
MS Dhoni: ಧೋನಿಯನ್ನ ನೋಡಲು ಬೈಕನ್ನೇ ಮಾರಿ ಬಂದ ಅಭಿಮಾನಿ! ಯಾರು ಗೊತ್ತಾ ಈ ಕ್ರೇಜಿ ಫ್ಯಾನ್? title=
MS Dhoni

MS Dhoni Fans: ಏಪ್ರಿಲ್ 17 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿ ಎಸ್‌ ಕೆ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿ ಬಿ) ನಡುವೆ ಹೈವೋಲ್ಟೇಜ್ ಪಂದ್ಯ ನಡೆದಿತ್ತು. ಐಪಿಎಲ್’ನಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವುದು ಸಿಎಸ್’ಕೆ ತಂಡ. ಇದಾದ ನಂತರದ ಸ್ಥಾನದಲ್ಲಿ ಆರ್‌ ಸಿ ಬಿ ಇದೆ.

ಇದನ್ನೂ ಓದಿ: ಈ ಏಳು ಅಂಶಗಳ ಬಗ್ಗೆ ಗಮನ ಹರಿಸಿದರೆ ಸಾಕು ! ಹೊಟ್ಟೆಯ ಕೊಬ್ಬು ಮಂಜಿನಂತೆ ಕರಗುವುದು 

ಉಭಯ ತಂಡಗಳು ಮುಖಾಮುಖಿ ಆಗುತ್ತಿದೆ ಎಂದು ತಿಳಿದರೆ ಸಾಕು ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಕೊಳ್ಳುತ್ತದೆ. ಇನ್ನು ಕಳೆದ ಏಪ್ರಿಲ್ 17ರಂದು ನಡೆದ ಸಿ ಎಸ್‌ ಕೆ vs ಆರ್‌ ಸಿ ಬಿ ಪಂದ್ಯದಲ್ಲೂ ಇಂತಹ ಅಭಿಮಾನದ ದೃಶ್ಯ ಕಂಡುಬಂದಿತ್ತು. ಓರ್ವ ಸಿಎಸ್’ಕೆ ಅಭಿಮಾನಿ ತನ್ನ ನೆಚ್ಚಿನ ಆಟಗಾರ ಧೋನಿಯನ್ನು ನೋಡಲು ಬೈಕ್’ನ್ನು ಮಾರಾಟ ಮಾಡಿ ಬಂದಿದ್ದನಂತೆ. ಈ ಬಗ್ಗೆ ಪ್ಲಕಾರ್ಡ್ ಹಿಡಿದು ಸ್ಟೇಡಿಯಂನಲ್ಲಿ ನಿಂತಿದ್ದ. ಈತನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಉಭಯ ತಂಡಗಳು ಘರ್ಜಿಸಿದ್ದವು. ಈ ಪಂದ್ಯದಲ್ಲಿ ಒಟ್ಟು 444 ರನ್ ಕಲೆ ಹಾಕಲಾಗಿದ್ದು, ಸುಮಾರು 33 ಸಿಕ್ಸರ್‌’ಗಳನ್ನು ಬಾರಿಸಲಾಗಿತ್ತು. ಎರಡೂ ತಂಡಗಳು ಸಖತ್ ಪೈಪೋಟಿ ನೀಡಿದ್ದು, 14 ವಿಕೆಟ್ ಉರುಳಿತ್ತು. ಇನ್ನು ಸಿಎಸ್’ಕೆ ಈ ಪಂದ್ಯವನ್ನು 8 ರನ್’ಗಳಿಂದ ಗೆದ್ದಿದೆ.

ಇದನ್ನೂ ಓದಿ: ಹೈಕೋರ್ಟ್‌ ಮೆಟ್ಟಿಲೇರಿದ ʼಐಶ್ವರ್ಯಾ ಪುತ್ರಿ..! ಬಚ್ಚನ್‌ ವಂಶ ಕುಡಿಗೆ ಆಗಿದ್ದೇನು..

ಧೋನಿ ಬ್ಯಾಟಿಂಗ್’ಗಾಗಿ ಕಾಯುತ್ತಿದ್ದ ಅಭಿಮಾನಿಗಳು ಕೊನೆಯ ಓವರ್’ನಲ್ಲಿ ಕ್ರೀಸ್’ಗೆ ಬಂದರು. ಅಷ್ಟರಲ್ಲಿ ಮೊಬೈಲ್ ಟಾರ್ಚ್ ಆನ್ ಮಾಡಿದ ಫ್ಯಾನ್ಸ್ “We Want Dhoni” ಎನ್ನುತ್ತಾ ಘೋಷಣೆ ಕೂಗಲು ಮುಂದಾದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News