RR vs RCB: ವಿರಾಟ್ ನಾಯಕತ್ವದಲ್ಲಿ RCBಗೆ ಸತತ ಗೆಲುವು: Points Tableನಲ್ಲಿ ಎಷ್ಟನೇ ಸ್ಥಾನಕ್ಕೇರಿದೆ ಗೊತ್ತಾ ರಾಯಲ್ಸ್ ಪಡೆ?

RR vs RCB Match Highlights: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌’ಸಿಬಿ ತಂಡ ನಿಗದಿತ 20 ಓವರ್‌’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಪ್ರತ್ಯುತ್ತರವಾಗಿ ಬ್ಯಾಟಿಂಗ್’ಗಿಳಿದ ರಾಜಸ್ಥಾನ ತಂಡ 20 ಓವರ್‌’ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 182 ರನ್ ಗಳಿಸಲಷ್ಟೇ ಶಕ್ತವಾಯಿತು.

Written by - Bhavishya Shetty | Last Updated : Apr 23, 2023, 10:06 PM IST
    • ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌’ಸಿಬಿ ತಂಡ
    • ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು
    • ಬೆಂಗಳೂರು ಪಡೆ 7 ರನ್’ಗಳ ರೋಚಕ ಗೆಲುವು ಸಾಧಿಸಿದೆ.
RR vs RCB: ವಿರಾಟ್ ನಾಯಕತ್ವದಲ್ಲಿ RCBಗೆ ಸತತ ಗೆಲುವು: Points Tableನಲ್ಲಿ ಎಷ್ಟನೇ ಸ್ಥಾನಕ್ಕೇರಿದೆ ಗೊತ್ತಾ ರಾಯಲ್ಸ್ ಪಡೆ?  title=
Royal Challengers Bangalore

RR vs RCB Match Highlights: ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ, ಏಪ್ರಿಲ್ 23 ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಬೆಂಗಳೂರು ಪಡೆ 7 ರನ್’ಗಳ ರೋಚಕ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌’ಸಿಬಿ ತಂಡ ನಿಗದಿತ 20 ಓವರ್‌’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಪ್ರತ್ಯುತ್ತರವಾಗಿ ಬ್ಯಾಟಿಂಗ್’ಗಿಳಿದ ರಾಜಸ್ಥಾನ ತಂಡ 20 ಓವರ್‌’ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 182 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದನ್ನೂ ಓದಿ: RCB vs RR: ವಿರಾಟ್ ಬಂದಿದ್ದೇ ತಡ; ಈ ಆಟಗಾರನಿಗೆ ತಂಡದಿಂದ ಗೇಟ್’ಪಾಸ್! ಸೂಪರ್ ಆಲ್’ರೌಂಡರ್’ಗೆ ಸ್ಥಾನ ಕೊಟ್ಟ ಕಿಂಗ್

ಈ ಋತುವಿನಲ್ಲಿ ಅತ್ಯುತ್ತಮ ಫಾರ್ಮ್‌’ನಲ್ಲಿರುವ ಆರ್‌’ಸಿಬಿಯ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಆರ್‌’ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ (0) ಮತ್ತು ಶಹಬಾಜ್ ಅಹ್ಮದ್ (2) ರನ್ ಗಳಿಸಿ ಪೆವಿಲಿಯನ್‌’ಗೆ ಮರಳಿದರು. ಇದಾದ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿದ ಮ್ಯಾಕ್ಸ್‌ ವೆಲ್ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 77 ರನ್ ಗಳಿಸಿದರು. ಮತ್ತೊಂದೆಡೆ ಡು ಪ್ಲೆಸಿಸ್ 8 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 62 ರನ್ ಗಳಿಸಿದರು. ದಿನೇಶ್ ಕಾರ್ತಿಕ್ ಕೂಡ 16 ರನ್ ಕೊಡುಗೆ ನೀಡಿದರು. ಆದರೆ, ಇದರ ಹೊರತಾಗಿ ತಂಡದ ಯಾವುದೇ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ.

ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಟ್ರೆಂಟ್ ಬೌಲ್ಟ್ ಬೌಲಿಂಗ್ ಮಾಡುವಾಗ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ಋತುವಿನಲ್ಲಿ ಮಾರಕವಾಗಿ ಬ್ಯಾಟಿಂಗ್ ಮಾಡುತ್ತಿರುವ ವಿರಾಟ್ ಕೊಹ್ಲಿಗೆ ಖಾತೆ ತೆರೆಯದೆ ಪೆವಿಲಿಯನ್ ಹಾದಿ ತೋರಿಸಿದರು. ಇದಾದ ಬಳಿಕ ಶಹಬಾಜ್ ಅಹ್ಮದ್ ಕೂಡ 2 ರನ್ ಗಳಿಸಿ ಔಟಾದರು. ಬೌಲ್ಟ್ 4 ಓವರ್’ಗಳಲ್ಲಿ 41 ರನ್ ನೀಡಿ 2 ವಿಕೆಟ್ ಪಡೆದರು. ಸಂದೀಪ್ ಶರ್ಮಾ ಕೂಡ 2 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮತ್ತೊಂದೆಡೆ ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಆರ್‌’ಸಿಬಿ ನೀಡಿದ 190 ರನ್‌’ಗಳ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್‌’ಗೆ ಜೋಸ್ ಬಟ್ಲರ್ (0) ರೂಪದಲ್ಲಿ ಮೊದಲ ಹೊಡೆತ ಬಿದ್ದಿತು. ಇದಾದ ನಂತರ ಯಶಸ್ವಿ ಜೈಸ್ವಾಲ್ ಮತ್ತು ದೇವದತ್ ಪಡಿಕ್ಕಲ್ ರಾಜಸ್ಥಾನದ ಇನ್ನಿಂಗ್ಸ್ ಅನ್ನು ನಿಭಾಯಿಸಲು ಪ್ರಯತ್ನಿಸಿದರು’ ಆದರೆ ಯಶಸ್ವಿ 47 ರನ್ ಗಳಿಸಿ ಹರ್ಷಲ್ ಪಟೇಲ್‌’ಗೆ ಬಲಿಯಾದರು. ಇದಾದ ಬಳಿಕ ಪಡಿಕ್ಕಲ್ 52 ರನ್‌’ಗಳಲ್ಲಿ ಡೇವಿಡ್ ವಿಲ್ಲಿ ಎಸೆತಕ್ಕೆ ಔಟ್ ಆದರು. ನಾಯಕ ಸಂಜು ಸ್ಯಾಮ್ಸನ್ ಕೂಡ 22 ರನ್ ಗಳಿಸಿ ಔಟಾದರು. ಯುವ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ 16 ಎಸೆತಗಳಲ್ಲಿ 34 ರನ್‌;ಗಳ ಅಜೇಯ ತ್ವರಿತ ಇನ್ನಿಂಗ್ಸ್ ಆಡಿದರು. ಆದರೆ ಅವರಿಂದಲೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಅಶ್ವಿನ್ 12 ರನ್ ಗಳಿಸಿದರು.

ಹರ್ಷಲ್ ಅವರಿಂದ ಅದ್ಭುತ ಬೌಲಿಂಗ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಗದ ಬೌಲರ್ ಹರ್ಷಲ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದರು. 4 ಓವರ್’ಗಳಲ್ಲಿ 32 ರನ್ ನೀಡಿ 3 ವಿಕೆಟ್ ಪಡೆದರು. ಇದಲ್ಲದೆ ಮೊಹಮ್ಮದ್ ಸಿರಾಜ್ ಮತ್ತು ಡೇವಿಡ್ ವಿಲ್ಲಿ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: Budh Asta 2023: ಈ 3 ರಾಶಿಯವರ ಕೀರ್ತಿ, ಗೌರವ ಹೆಚ್ಚಿಸಲಿದ್ದಾನೆ ಬುಧ; ಅಪಾರ ಧನಪ್ರಾಪ್ತಿ ಖಚಿತ!

ಈ ಗೆಲುವಿನ ಮೂಲಕ ಪಾಯಿಂಟ್ಸ್ ಟೇಬಲ್’ನಲ್ಲಿ ಆರ್’ಸಿಬಿ 5ನೇ ಸ್ಥಾನದಲ್ಲಿದೆ. ಏಳು ಪಂದ್ಯಗಳನ್ನಾಡಿರುವ ತಂಡ 4ರಲ್ಲಿ ಗೆದ್ದು, ಮೂರರಲ್ಲಿ ಸೋಲು ಕಂಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News