ಸಿಐಡಿ ತನಿಖೆ ಎನ್ನುವುದು ಕಾಟಾಚಾರದ ತನಿಖೆ. ಇಂತಹ ತನಿಖೆ ಮಾಡಲು ಕುಟುಂಬದವರು ಅಥವಾ ವಿರೋಧ ಪಕ್ಷದವರು ಕೇಳಬೇಕು. ಆದರೆ ಯಾರೂ ಕೇಳದೆ ಸರ್ಕಾರವೇ ಪ್ರಕರಣ ಮುಚ್ಚಿಹಾಕಲು ತನಿಖೆ ಮಾಡಿಸುತ್ತಿದೆ. ದಲಿತರ 187 ಕೋಟಿ ರೂ. ಹಣ ಗುಳುಂ ಆದರೂ ಒಬ್ಬರನ್ನೂ ಬಂಧಿಸಿಲ್ಲ. ಅದೇ ಸಣ್ಣ ವಿಚಾರಗಳಿಗೆ ಮನೆಗೆ ಹೋಗಿ ಬಂಧಿಸುತ್ತಾರೆ. ಆರೋಪಿಗಳನ್ನು ಬಂಧಿಸಿದರೆ ಮುಖ್ಯಮಂತ್ರಿ ಮೇಲೆಯೇ ಆರೋಪ ಬರುತ್ತದೆ ಎಂಬ ಭಯವಿದೆ. ಅದಕ್ಕಾಗಿ ಸರಿಯಾಗಿ ತನಿಖೆ ಮಾಡಿಸುತ್ತಿಲ್ಲ ಎಂದು ದೂರಿದರು.
2 ಗ್ರಾಮಗಳಿಗೆ ಒಂದೇ ಮತಗಟ್ಟೆ ಸ್ಥಾಪನೆಯಿಂದ ವಿಳಂಬ
ಹುಲ್ಲಹಳ್ಳಿ, ಚಿನ್ನಯ್ಯನಪಾಳ್ಯ ಗ್ರಾಮಗಳಿಗೆ ಒಂದೇ ಮತಗಟ್ಟೆ
ಎರಡೂ ಗ್ರಾಮಗಳಲ್ಲಿ ಒಟ್ಟು 1794 ಮತದಾರರು ಇದ್ದಾರೆ
ಕಳೆದ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಸಮಸ್ಯೆ
Lok Sabha Election 2024: ಸೋಮಣ್ಣನವರು ಉತ್ತಮ ಸಂಸದನಾಗಿ ಕೆಲಸ ಮಾಡುವುದಾಗಿ ಹೇಳುತ್ತಾರೆ.ಆದರೆ ಅವರು ವಸತಿ ಸಚಿವರಾಗಿದ್ದಾಗ ತುಮಕೂರಿಗೆ ಎಷ್ಟು ಮನೆಗಳನ್ನು ನೀಡಿದಿರಿ ಎಂದು ಇಲ್ಲಿನ ಜನರಿಗೆ ದಾಖಲಾತಿ ನೀಡಿ.ನಿಮ್ಮ ಅವಧಿಯಲ್ಲಿ ಒಂದೂ ಮನೆಯನ್ನು ಕಟ್ಟಲಿಲ್ಲವೇಕೆ? ಎಂಬ ನಮ್ಮ ಪ್ರಶ್ನೆಗೆ ಅವರ ಬಳಿ ಅಂದು ಉತ್ತರವಿರಲಿಲ್ಲ.ಆದ್ದರಿಂದ ವಸತಿ ಸಚಿವರಾಗಿ ವಿಫಲವಾಗಿರುವ ಸೋಮಣ್ಣನವರ ಉತ್ತಮವಾಗಿ ಕೆಲಸ ಮಾಡುತ್ತೇನೆ ಎನ್ನುವ ಮಾತು ಸಂಪೂರ್ಣ ಸುಳ್ಳು ಎಂದರು.
Lok Sabha Election 2024: ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಚುನಾವಣೆ ಎದುರಿಸುತ್ತಿದೆ. ಬಿಜೆಪಿಯವರು 28ಕ್ಕೆ 28 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿಕೊಳ್ಳುತ್ತಿದ್ದು, ಜೆಡಿಎಸ್ ಕೂಡ ಅದಕ್ಕೆ ಧ್ವನಿಗೂಡಿಸುತ್ತಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜಕೀಯ ಕಾರಣಕ್ಕಾಗಿ ಪೂರ್ವಾಗ್ರಹಪೀಡಿತರಾಗಿ ಕೊಟ್ಟಿರುವ ಪಠ್ಯ ಪರಿಷ್ಕರಣೆ ಕುರಿತ ಹೇಳಿಕೆ ಅಸಹಿಷ್ಣು ಭಾವನೆಯಿಂದ ಕೂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಟೀಕಿಸಿದರು.
ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲಿ ಈ ಗ್ಯಾರಂಟಿಗಳಿಗೆ ತನ್ನ ಅನುಮೋದನೆ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಗ್ಯಾರನ್ತಿಗಲ್ ಈಡೇರಿಕೆಗೆ ಸಾರ್ವಜನಿಕರು ಪಟ್ಟು ಹಿಡಿಯುವುದನ್ನು ಗಮನಿಸಬಹುದು.
ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯದಂತೆ ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕರುನಾಡಿನಲ್ಲಿ ಮೋದಿ ಮೋಡಿ ಮಾಡುತ್ತೆ ಎಂದುಕೊಂಡಿದ್ದ ಕಮಲ ಬಾಡಿ ಹೋಗಿದೆ. ಇದೆಲ್ಲದರ ಜೊತೆಗೆ ಕೆಲ ಅಚ್ಚರಿಯ ರಾಜಕೀಯ ಬೆಳವಣಿಗೆಗಳು ಕೂಡ ರಾಜ್ಯದ ಜನರಿಗೆ ಶಾಕ್ ನೀಡಿವೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ.
ಕೊನೆಗೂ ಜಯನಗರ ಕೇತ್ರದ ಚುನಾವಣಾ ಫಲಿತಾಂಶ ಪಕ್ರಟ. ಮರು ಎಣಿಕೆಯಲ್ಲಿ ಸೌಮ್ಯರೆಡ್ಡಿ ವಿರುದ್ಧ ಗೆದ್ದ ಬಿಜೆಪಿ ಅಭ್ಯರ್ಥಿ. ಸಿ.ಕೆ.ರಾಮಮೂರ್ತಿ, ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ 57797 ಮತ. ಕಾಂಗ್ರೆಸ್ನ ಪಕ್ಷದ ಅಭ್ಯರ್ಥಿ ಸೌಮ್ಯರೆಡ್ಡಿ 57781 ಮತ. 16 ಮತಗಳ ಅಂತರದಿಂದ ಬಿಜೆಪಿಯ ರಾಮಮೂರ್ತಿ ಗೆಲುವು. ಮಧ್ಯರಾತ್ರಿ ಜಯನಗರ ಕ್ಷೇತ್ರದ ಫಲಿತಾಂಶಕ್ಕೆ ತೆರೆ.
ಆಡಳಿತ ವಿರೋಧಿ ಅಲೆಯಲ್ಲಿ ಗೆದ್ದು ಬಂದ ಕಾಂಗ್ರೆಸ್. ಕಾಂಗ್ರೆಸ್ ಜನಮಾನಸದಲ್ಲಿ ಅಭೂತಪೂರ್ವ ಗೆಲವು. ಚುನಾವಣೆ ಕೊನೇ ಕ್ಷಣದಲ್ಲಿ ಸದ್ದು ಮಾಡಿದ್ದ ಭಜರಂಗಬಲಿ. ಫಲಿತಾಂಶದಲ್ಲಿ ಭಜರಂಗಿ ಆದದ್ದು ಕಾಂಗ್ರೆಸ್, ಬಲಿ ಆದದ್ದು ಬಿಜೆಪಿ. ಕಳೆದ 34 ವರ್ಷಗಳಲ್ಲೇ ಕಾಂಗ್ರೆಸ್ ಪ್ರಚಂಡ ಗೆಲುವು. ರಾಜ್ಯದಲ್ಲಿ ಮತ್ತೆ ಗೆಲ್ಲುವ ಬಿಜೆಪಿ ಕನಸು ಭಗ್ನ. ಜೆಡಿಎಸ್ ಪಕ್ಷಕ್ಕೆ ಎರಡು ದಶಕಗಳಲ್ಲೇ ಅತಿ ಕಡಿಮೆ ಸ್ಥಾನ.
ನಂದಿನಿ ಪೇಡ ತಿನ್ನುವ ಮೂಲಕ ಕಾಂಗ್ರೆಸ್ ನಾಯಕರು ಸಂಭ್ರಮಾಚರಣೆ ಮಾಡಿದ್ದಾರೆ. ಕಾಂಗ್ರೆಸ್ ಭರ್ಜರಿ ಗೆಲುವಿನ ಹಿನ್ನೆಲೆ ನಂದಿನಿ ಪೇಡಾ ಸವಿಯುವ ಮೂಲಕ ಕಾಂಗ್ರೆಸ್ ನಾಯಕರು ಸಂಭ್ರಮಾಚರಣೆ ಮಾಡಿದ್ರು. ಕರ್ನಾಟಕದ ಚುನಾವಣೆಯಲ್ಲಿ ನಂದಿನಿ-ಅಮೂಲ್ ವಿವಾದ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ನಂದಿನಿ ಪೇಡಾವನ್ನು ಮಲ್ಲಿಕಾರ್ಜುನ ಖರ್ಗೆ ತಿನ್ನಿಸಿ ಸಂಭ್ರಮಿಸಿದ್ರು.
ಬಿಜೆಪಿಗೆ ರಾಷ್ಟ್ರೀಯ ನಾಯಕರ ಪ್ರಚಾರ, ಬಿಜೆಪಿ ಹಿರಿಯ ನಾಯಕರನ್ನ ಕಡೆಗಣಿಸಿ ಚುನಾವಣೆ ಪ್ರಚಾರ. ಅಭ್ಯರ್ಥಿ ಆಯ್ಕೆ.. ಪ್ರಚಾರ ಎಲ್ಲಾ ಹೈಕಮಾಂಡ್ ತೀರ್ಮಾನ. ಬಿಎಸ್ವೈ ಸೇರಿದಂತೆ ಹಿರಿಯ ನಾಯಕರನ್ನ ನೆಗ್ಲೆಟ್ ಮಾಡಿದ್ದು ಬಿಜೆಪಿ ಸೋಲಿಗೆ ಕಾರಣ ಆಯ್ತಾ..?
Davangere District Assembly Election Result 2023: ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ತನ್ನ ಪ್ರಾಬಲ್ಯತೆಯನ್ನು ಕಳೆದುಕೊಂಡಿದೆ. ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಹರಿಹರ, ಚನ್ನಗಿರಿ, ಮಾಯಕೊಂಡ ಹಾಗೂ ಹೊನ್ನಾಳಿ ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾರ ಈ ಬಾರಿ ಸರ್ಪೈಸ್ ಫಲಿತಾಂಶ ನೀಡಿದ್ದಾನೆ.
Karnataka Assembly Election: ಕರ್ನಾಟಕ ವಿಧಾನಸಭಾ ಚುನಾವಣೆಯ ಆರಂಭಿಕ ಟ್ರೆಂಡ್ಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಈ ಮುನ್ನಡೆಯ ಬಳಿಕ ಇದೀಗ ವಿವಿಧ ಪಕ್ಷಗಳ ನಾಯಕರುಗಳಿಂದ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಈ ಕುರಿತು ತಮ್ಮ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಶಿವಸೇನೆಯ ಉದ್ಧವ್ ಬಣದ ಮುಖಂಡ ಸಂಜಯ್ ರಾವುತ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ ಮತ್ತು ಕರ್ನಾಟಕದಲ್ಲಿ ಈ ಬಾರಿ ನಡೆದಿದ್ದು 2024 ರಲ್ಲೂ ಪುನರಾವರ್ತನೆಯಾಗಲಿದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.