Chris Gayle in IPL 2023 Mini Auction: ಬಿರುಸಿನ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಗೇಲ್ ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಅವರು ಈ ಲೀಗ್ನಲ್ಲಿ ಮೂರು ವಿಭಿನ್ನ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಇದೀಗ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಈ ವೆಸ್ಟ್ ಇಂಡಿಯನ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ.
IPL auction: IPL-2023 ರ ಕಿರು ಹರಾಜಿನ ಸಮಯದಲ್ಲಿ, ಒಟ್ಟು 87 ಸ್ಲಾಟ್ಗಳಿಗೆ 405 ಆಟಗಾರರ ಮೇಲೆ ಬಿಡ್ಡಿಂಗ್ ಮಾಡಲಾಗುತ್ತದೆ. ರಾಷ್ಟ್ರೀಯ ತಂಡಕ್ಕಾಗಿ ಆಡಿದ ಅನುಭವಿ ಕ್ರಿಕೆಟಿಗರನ್ನು ಹೊರತುಪಡಿಸಿ, ಎಲ್ಲಾ 10 ಫ್ರಾಂಚೈಸಿಗಳ ನಡುವೆ ಒಪ್ಪಂದಕ್ಕೆ ಸ್ಪರ್ಧಿಸುವ ಕೆಲವು ಅನ್ಕ್ಯಾಪ್ಡ್ ಭಾರತೀಯ ಆಟಗಾರರೂ ಇದ್ದಾರೆ.
Dwayne Bravo Retirement : ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಮಾಜಿ ಆಟಗಾರ ಡ್ವೇನ್ ಬ್ರಾವೋ ಅವರನ್ನು ಫ್ರಾಂಚೈಸಿಗೆ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ. 4 ಬಾರಿ ಐಪಿಎಲ್ ವಿಜೇತ ಫ್ರಾಂಚೈಸ್ ತಮ್ಮ ಅಧಿಕೃತ ವೆಬ್ಸೈಟ್ ಮೂಲಕ ಸುದ್ದಿಯನ್ನು ಖಚಿತಪಡಿಸಿದೆ.
ಹೊಸ ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಲು ಪ್ರಾರಂಭಿಸಿದ್ದಾರೆ. ಈ ಬಾರಿಯ ಮಿನಿ ಹರಾಜಿನಲ್ಲಿ ಸ್ಫೋಟಕ ಆಲ್ರೌಂಡರ್ ಸೇರಿದಂತೆ ಹಲವು ಹೊಸ ಮುಖಗಳು ಕಾಣಿಸಿಕೊಳ್ಳಲಿವೆ. ಹೊಸ ಮುಖದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..
ಪಂಜಾಬ್ ತಂಡ ತನ್ನ ನಾಯಕನನ್ನು ಬದಲಾಯಿಸಲು ನಿರ್ಧರಿಸಿದ್ದು ಮಾತ್ರವಲ್ಲದೆ ಉಳಿಸಿಕೊಂಡಿರುವ ಆಟಗಾರರ ಮೂಲಕ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಮಿನಿ ಹರಾಜಿಗೂ ಮುನ್ನವೇ ಕ್ರಿಕೆಟ್ ಮೈದಾನದಲ್ಲಿ ತ್ರಿಶತಕ ಸಿಡಿಸಿದ ಆಟಗಾರನನ್ನು ಟೀಂನಿಂದ ಕೈಬಿಡಲಾಗಿದೆ.
IPL 2023 Retention: ಸನ್ರೈಸರ್ಸ್ ಹೈದರಾಬಾದ್ ತಂಡದಿಂದ ಕೇನ್ ವಿಲಿಯಮ್ಸನ್, ಪಂಜಾಬ್ ಕಿಂಗ್ಸ್ ತಂಡದಿಂದ ಕರ್ನಾಟಕದ ಮಯಾಂಕ್ ಅಗರ್ವಾಲ್, ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಡ್ವೇನ್ ಬ್ರಾವೋಗೆ ಗೇಟ್ ಪಾಸ್ ನೀಡಿದೆ. ಇನ್ನೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಶರ್ಫಾನೆ ರುದರ್ಫೋರ್ಡ್ ರಿಲೀಸ್ ಆಗಿದ್ದಾರೆ.
Kieron Pollard retires from IPL : ಫ್ರಾಂಚೈಸಿಗಳ ಪಟ್ಟಿ ಹೊರಬೀಳುವ ಮುನ್ನವೇ ಅನುಭವಿ ಆಟಗಾರ ಕೀರನ್ ಪೊಲಾರ್ಡ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಐಪಿಎಲ್ನ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್ನ ಅತಿದೊಡ್ಡ ಮ್ಯಾಚ್ ವಿನ್ನರ್ಗಳಲ್ಲಿ ಒಬ್ಬರಾಗಿದ್ದಾರೆ.
MS Dhoni: ಐಸಿಸಿ ಪಂದ್ಯಗಳಲ್ಲಿ ಭಾರತದ ವೈಫಲ್ಯಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಚಿಂತಿಸುತ್ತಿವೆ. 2023ರಲ್ಲಿ ಏಕದಿನ ವಿಶ್ವಕಪ್ ಮತ್ತು 2024ರಲ್ಲಿ ಟಿ20 ವಿಶ್ವಕಪ್ ಇದೆ. ಈ ಮೆಗಾ ಟೂರ್ನಿಗಳಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಲು ಬಿಸಿಸಿಐ ಈಗಾಗಲೇ ಪ್ರಯತ್ನ ಆರಂಭಿಸಿದೆ ಎಂದು ವರದಿಯಾಗಿದೆ.
ಕ್ರಿಕೆಟಿಗರು ಐಪಿಎಲ್ನಲ್ಲಿ ಆಡುವ ಮೂಲಕ ಹಣ ಮತ್ತು ಖ್ಯಾತಿ ಎರಡನ್ನೂ ಪಡೆಯುತ್ತಾರೆ. ಐಪಿಎಲ್ 2023 ರ ಮಿನಿ ಹರಾಜು ಈ ವರ್ಷದ ಡಿಸೆಂಬರ್ನಲ್ಲಿ ನಡೆಯಲಿದೆ, ಆದರೆ ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶಾದಾಯಕ ಸುದ್ದಿಯೊಂದು ಹೊರಬಿದ್ದಿದೆ. ಸ್ಟಾರ್ ಆಟಗಾರನೊಬ್ಬ ಐಪಿಎಲ್ ಗೆ ಗುಡ್ ಬೈ ಹೇಳಿದ್ದಾನೆ.
India exit from T20 World Cup: ಐಸಿಸಿ ಟಿ20 ವಿಶ್ವಕಪ್ ಗೆಲ್ಲಲು ಭಾರತೀಯ ಕ್ರಿಕೆಟ್ ತಂಡವನ್ನು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ರೋಹಿತ್ ಶರ್ಮಾ ನೇತೃತ್ವದ ತಂಡವು ಗುಂಪು ಸುತ್ತಿನಲ್ಲಿ 5 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು ಅಗ್ರಸ್ಥಾನದಲ್ಲಿರುವಾಗಲೇ ಸೆಮಿಫೈನಲ್ಗೆ ಲಗ್ಗೆ ಇಟ್ಟಿತು. ಆದರೆ, ಅಡಿಲೇಡ್ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳಿಂದ ಮುಖಭಂಗ ಅನುಭವಿಸಿತ್ತು.
IPL Biggest Sporting League: ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರು “ಹೊಸ ಯೋಜನೆಯೊಂದಿಗೆ ಮುಂದುವರಿಯುವುದು ಸಮಯ ಬಂದಿದೆ. ಹೀಗಿರುವಾಗತ್ತು ಐಪಿಎಲ್ ವಿಶ್ವದ ಅತಿದೊಡ್ಡ ಲೀಗ್ ಆಗಲು ಬೇರೆ ಯಾವುದೇ ಕಾರಣದ ಅಗತ್ಯವಿಲ್ಲ” ಎಂದು ಹೇಳಿದರು. ಐಪಿಎಲ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಯೋಜನೆ ಏನು ಎಂದು ಅರುಣ್ ಧುಮಾಲ್ ಅವರನ್ನು ಕೇಳಿದಾಗ, 'ಐಪಿಎಲ್ ಈಗಿರುವುದಕ್ಕಿಂತ ದೊಡ್ಡದಾಗಿರುತ್ತದೆ ಮತ್ತು ಇದು ವಿಶ್ವದ ನಂಬರ್ 1 ಕ್ರೀಡಾ ಲೀಗ್ ಆಗಲಿದೆ' ಎಂದರು.
ಎಲ್ಲಾ ಕ್ರಿಕೆಟ್ ಅಭಿಮಾನಿಗಳು IPL 2023 ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ವರದಿ ಪ್ರಕಾರ, ಮಿನಿ ಹರಾಜಿನ ತಯಾರಿ ಈಗಾಗಲೇ ಪ್ರಾರಂಭವಾಗಿದೆ. ಮುಂದಿನ ಋತುವಿನ ಹರಾಜು ಡಿಸೆಂಬರ್ 16 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಇದೀಗ ದೇಶೀ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರುತುರಾಜ್ ಅಬ್ಬರಿಸಿದ್ದಾರೆ. ಕೇವಲ 59 ಎಸೆತಗಳಲ್ಲಿ ಅವರು 11 ಬೌಂಡರಿ, 5 ಸಿಕ್ಸರ್ ಬಾರಿಸುವ ಮೂಲಕ 112 ರನ್ ಗಳಿಸಿದ್ದಾರೆ. ಈ ಮೂಲಕ ಅವರ ಶತಕದ ಆಧಾರದ ಮೇಲೆ ಮಹಾರಾಷ್ಟ್ರ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 185 ರನ್ ಕಲೆ ಹಾಕಿದೆ
ಬಿಸಿಸಿಐ ಮೊದಲು ಈ ನಿಯಮವನ್ನು ದೇಶೀಯ ಕ್ರಿಕೆಟ್ನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಿದೆ. ಇದರೊಂದಿಗೆ, ಯಾವುದೇ ಪಂದ್ಯದ ಸಮಯದಲ್ಲಿ 11 ಅಲ್ಲ 15 ಆಟಗಾರರು ಪ್ಲೇಯಿಂಗ್ ಗೆ ಅರ್ಹರಾಗಿರುತ್ತಾರೆ. ಅಕ್ಟೋಬರ್ 11 ರಿಂದ ಪ್ರಾರಂಭವಾಗುವ ಸೈಯದ್ ಮುಷ್ತಾಕ್ ಅಲಿ ಟಿ 20 ಟ್ರೋಫಿ ಪಂದ್ಯಾವಳಿಯಿಂದ ಭಾರತೀಯ ಮಂಡಳಿಯು 'ಇಂಪ್ಯಾಕ್ಟ್ ಪ್ಲೇಯರ್' ನಿಯಮವನ್ನು ಪರಿಚಯಿಸಬಹುದು.
ಕ್ರಿಕೆಟ್ ದಕ್ಷಿಣ ಆಫ್ರಿಕಾದ ಹೊಚ್ಚ ಹೊಸ ಟಿ-20 ಲೀಗ್ ಐಪಿಎಲ್ ಮಾಲೀಕರಿಂದ ಕೆಲವು ಬೆಂಬಲವನ್ನು ಪಡೆದುಕೊಂಡಿದೆ. ಒಂದು ವೇಳೆ ಕ್ರಿಕ್ಬಜ್ನ ಈ ವರದಿಯು ನಿಜವಾಗಿದ್ದರೆ, ಒಂಬತ್ತು ಐಪಿಎಲ್ ಫ್ರಾಂಚೈಸಿ ಮಾಲೀಕರಲ್ಲಿ ಆರು ಮಂದಿ ತಮ್ಮ ತಂಡಗಳನ್ನು ಫೆಬ್ರವರಿ-ಮಾರ್ಚ್ 2023 ರಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಹೊಂದಿರುತ್ತಾರೆ.
IPL media rights: ಐಪಿಎಲ್ ಮೀಡಿಯಾ ರೈಟ್ ಗಳು ಒಟ್ಟು 48,390 ಕೋಟಿ ರೂ.ಗಳಿಗೆ ಮಾರಾಟವಾಗಿವೆ. ವಿಶ್ವದಲ್ಲಿಯೇ ಅತಿ ಹೆಚ್ಚು ವೀಕ್ಷಣೆಗೆ ಒಳಗಾಗುವ ಲೀಗ್ ಪಂದ್ಯಾವಳಿ ಎಂದರೆ ಆದ ಐಪಿಎಲ್. ಈ ಲೀಗ್ ನಲ್ಲಿ ಆಟವಾಡಿ ಹಲವು ದಿಗ್ಗಜ ಆಟಗಾರರು ತಮ್ಮ ವೃತ್ತಿಜೀವನ ಕಂಡುಕೊಂಡಿದ್ದಾರೆ. ಪ್ರತಿಯೋರ್ವ ಕ್ರಿಕೆಟ್ ಆಟಗಾರ ಐಪಿಎಲ್ ನಲ್ಲಿ ಆಡುವ ಕನಸು ಕಾಣುತ್ತಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.