IPL Mini Auction : ಟ್ರಿಪಲ್ ಶತಕ ಸಿಡಿಸಿದ ಈ ಬ್ಯಾಟ್ಸ್‌ಮನ್‌ಗೆ ಐಪಿಎಲ್ ತಂಡದಿಂದ 'ಔಟ್'

ಪಂಜಾಬ್ ತಂಡ ತನ್ನ ನಾಯಕನನ್ನು ಬದಲಾಯಿಸಲು ನಿರ್ಧರಿಸಿದ್ದು ಮಾತ್ರವಲ್ಲದೆ ಉಳಿಸಿಕೊಂಡಿರುವ ಆಟಗಾರರ ಮೂಲಕ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಮಿನಿ ಹರಾಜಿಗೂ ಮುನ್ನವೇ ಕ್ರಿಕೆಟ್ ಮೈದಾನದಲ್ಲಿ ತ್ರಿಶತಕ ಸಿಡಿಸಿದ ಆಟಗಾರನನ್ನು ಟೀಂನಿಂದ ಕೈಬಿಡಲಾಗಿದೆ.

Written by - Channabasava A Kashinakunti | Last Updated : Nov 16, 2022, 10:04 AM IST
  • ಪಂಜಾಬ್ ಕಿಂಗ್ಸ್ ಹೆಸರೂ ಸೇರ್ಪಡೆಯಾಗಿದೆ
  • ಪಂಜಾಬ್ ತಂಡದ ನಾಯಕ ಬದಲಾವಣೆ
  • ಪಂಜಾಬ್ ತಂಡದಿಂದ ಮಾಯಾಂಕ್ ಅಗರ್ವಾಲ್ ಔಟ್
IPL Mini Auction : ಟ್ರಿಪಲ್ ಶತಕ ಸಿಡಿಸಿದ ಈ ಬ್ಯಾಟ್ಸ್‌ಮನ್‌ಗೆ ಐಪಿಎಲ್ ತಂಡದಿಂದ 'ಔಟ್' title=

Mayank Agarwal in IPL Auction : ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂಬರುವ ಆವೃತ್ತಿಯ ಮೊದಲು, ಕೆಲವು ತಂಡಗಳು ಬದಲಾವಣೆಯ ಹಂತದ ಮೂಲಕ ಸಾಗುತ್ತಿವೆ. ಈ ಪಟ್ಟಿಗೆ ಪಂಜಾಬ್ ಕಿಂಗ್ಸ್ ಹೆಸರೂ ಸೇರ್ಪಡೆಯಾಗಿದೆ. ಪಂಜಾಬ್ ತಂಡ ತನ್ನ ನಾಯಕನನ್ನು ಬದಲಾಯಿಸಲು ನಿರ್ಧರಿಸಿದ್ದು ಮಾತ್ರವಲ್ಲದೆ ಉಳಿಸಿಕೊಂಡಿರುವ ಆಟಗಾರರ ಮೂಲಕ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಮಿನಿ ಹರಾಜಿಗೂ ಮುನ್ನವೇ ಕ್ರಿಕೆಟ್ ಮೈದಾನದಲ್ಲಿ ತ್ರಿಶತಕ ಸಿಡಿಸಿದ ಆಟಗಾರನನ್ನು ಟೀಂನಿಂದ ಕೈಬಿಡಲಾಗಿದೆ. ಅಷ್ಟೇ ಅಲ್ಲ ಈ ಬ್ಯಾಟ್ಸ್ ಮನ್ ಭಾರತ ಟೆಸ್ಟ್ ತಂಡದಲ್ಲಿ ದ್ವಿಶತಕ ಬಾರಿಸಿದವನು... ಹಾಗಿದ್ರೆ ಈ ಆಟಗಾರ ಯಾರು? ಕೈ ಬಿಡಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ..

ಪಂಜಾಬ್ ತಂಡದಿಂದ ಮಾಯಾಂಕ್ ಅಗರ್ವಾಲ್ ಔಟ್..

ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದ ಪಂಜಾಬ್ ಕಿಂಗ್ಸ್ ತಂಡ ಮುಂದಿನ ಐಪಿಎಲ್ ಸೀಸನ್ ಪ್ರವೇಶಿಸುವ ಮುನ್ನ ಭಾರಿ ಬದಲಾವಣೆ ಮಾಡಿದೆ. ಮಿನಿ ಹರಾಜಿಗೂ ಮುನ್ನ ಮಯಾಂಕ್ ಅಗರ್ವಾಲ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿ, ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಅವರಿಗೆ ತಂಡದ ನಾಯಕತ್ವವನ್ನು ಹಸ್ತಾಂತರಿಸಿದೆ. ಈಗ ಬಹುಶಃ ತಂಡವು ಅವರನ್ನು ಉಳಿಸಿಕೊಳ್ಳುತ್ತಿಲ್ಲ. ಮಂಗಳವಾರ ಸಂಜೆ ತಂಡ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದಾಗ ಅದರಲ್ಲಿ ಮಯಾಂಕ್ ಹೆಸರು ಸೇರ್ಪಡೆಯಾಗಿರಲಿಲ್ಲ. ಇದರ ಮೂಲಕ ತಂಡದಿಂದ ಅವರನ್ನು ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Team India : ಈ 23 ವರ್ಷದ ಸ್ಪೋಟಕ ಬೌಲರ್ ಭಾರತದ ಮುಂದಿನ ಜಹೀರ್ ಖಾನ್!

ಧವನ್‌ಗೆ ಆದೇಶ ಹಸ್ತಾಂತರ

ಪಂಜಾಬ್ ಕಿಂಗ್ಸ್ ತಂಡ ಈಗ ಮತ್ತೊಮ್ಮೆ ಹೊಸ ನಾಯಕನೊಂದಿಗೆ ಹೊಸ ಸೀಸನ್ ಪ್ರವೇಶಿಸಲಿದೆ. ಕ್ರಿಕೆಟ್ ಮೈದಾನದಲ್ಲಿ 'ಗಬ್ಬರ್' ಖ್ಯಾತಿಯ ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದಾರೆ. ಐಪಿಎಲ್ ಮಿನಿ ಹರಾಜಿಗೂ ಮುನ್ನ ತಮ್ಮ ಮಾಜಿ ನಾಯಕ ಮಯಾಂಕ್ ಸೇರಿದಂತೆ ಒಟ್ಟು 9 ಆಟಗಾರರನ್ನು ಬಿಡುಗಡೆ ಮಾಡಲು ತಂಡ ನಿರ್ಧರಿಸಿದ್ದು, 16 ಆಟಗಾರರನ್ನು ಉಳಿಸಿಕೊಂಡಿದೆ. ಈಗ ಈ ವರ್ಷದ ಕೊನೆಯಲ್ಲಿ (ಡಿಸೆಂಬರ್) ನಡೆಯಲಿರುವ ಮಿನಿ ಹರಾಜಿನಲ್ಲಿ ತಂಡವು 32.2 ಕೋಟಿ ಮೊತ್ತದೊಂದಿಗೆ ಪ್ರವೇಶಿಸಲಿದೆ. ಸದ್ಯ ತಂಡದಲ್ಲಿ ಒಟ್ಟು 16 ಆಟಗಾರರಿದ್ದು, ಈ ಪೈಕಿ ಐವರು ವಿದೇಶಿಗರು. ತಂಡದಲ್ಲಿ 9 ಆಟಗಾರರ ಸ್ಥಾನ ಉಳಿದಿದ್ದು, ಇದರಲ್ಲಿ 3 ವಿದೇಶಿಯರನ್ನು ಸೇರಿಸಿಕೊಳ್ಳಬಹುದು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತ್ರಿಶತಕ

ಬೆಂಗಳೂರಿನಲ್ಲಿ ಜನಿಸಿದ ಮಯಾಂಕ್ ಅಗರ್ವಾಲ್ ತಮ್ಮ ವೃತ್ತಿಜೀವನದಲ್ಲಿ 21 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ವೃತ್ತಿಜೀವನದಲ್ಲಿ ದ್ವಿಶತಕವನ್ನೂ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಔಟಾಗದೆ 304 ರನ್ ಗಳಿಸಿದ್ದಾರೆ. ಟೆಸ್ಟ್ ನಲ್ಲಿ 1488 ರನ್ ಹಾಗೂ ಏಕದಿನದಲ್ಲಿ 86 ರನ್ ಗಳಿಸಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಜೆರ್ಸಿಯಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.

ಉಳಿಸಿಕೊಂಡಿರುವ ಆಟಗಾರರು: ಶಿಖರ್ ಧವನ್, ಶಾರುಖ್ ಖಾನ್, ಜಾನಿ ಬೈರ್‌ಸ್ಟೋ, ಪ್ರಭಾಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ. ಜಿತೇಶ್ ಶರ್ಮಾ, ರಾಜ್ ವಾಬಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ, ಅರ್ಷ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಹಾರ್ ಮತ್ತು ಹರ್‌ಪ್ರೀತ್ ಬ್ರಾರ್.

ರಿಲೀಸ್ ಆದ ಆಟಗಾರರು: ಮಯಾಂಕ್ ಅಗರ್ವಾಲ್, ಓಡಿಯನ್ ಸ್ಮಿತ್, ವೈಭವ್ ಅರೋರಾ, ಬೆನ್ನಿ ಹೋವೆಲ್, ಇಶಾನ್ ಪೊರೆಲ್, ಅನ್ಶ್ ಪಟೇಲ್, ಪ್ರೇರಕ್ ಮಂಕಡ್, ಸಂದೀಪ್ ಶರ್ಮಾ ಮತ್ತು ಹೃತಿಕ್ ಚಟರ್ಜಿ.

ಇದನ್ನೂ ಓದಿ : IPL 2023 Retention: ಹೈದರಾಬಾದ್, ಚೆನ್ನೈ, ಪಂಜಾಬ್ ತಂಡದಿಂದ ಹೊರಬಿದ್ದ ಸ್ಟಾರ್ ಆಟಗಾರರು ಇವರೇ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News