ಐಪಿಎಲ್ ಮಾಧ್ಯಮ ಹಕ್ಕುಗಳ ಹರಾಜಿನಲ್ಲಿ ಬಿಸಿಸಿಐ ಶ್ರೀಮಂತ: 100 ಕೋಟಿ ದಾಟಿದ 1 ಪಂದ್ಯದ ಮೌಲ್ಯ!

ಐಪಿಎಲ್ ಮಾಧ್ಯಮ ಹಕ್ಕು: ಟಿವಿ ಮತ್ತು ಡಿಜಿಟಲ್ ಮಾಧ್ಯಮ ಹಕ್ಕುಗಳಿಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಿಡ್ ಇತಿಹಾಸ ಸೃಷ್ಟಿಸಿದೆ.

Written by - Puttaraj K Alur | Last Updated : Jun 13, 2022, 02:41 PM IST
  • ಹೊಸ ಇತಿಹಾಸ ಸೃಷ್ಟಿಸಿದ ಇಂಡಿಯನ್ ಪ್ರೀಮಿಯರ್ ಲೀಗ್‌
  • 43,255 ಕೋಟಿ ರೂ. ತಲುಪಿದ 5 ವರ್ಷಗಳ ಮಾಧ್ಯಮ ಹಕ್ಕುಗಳ ಬಿಡ್
  • 100 ಕೋಟಿ ರೂ. ದಾಟಿದ ಒಂದು ಐಪಿಎಲ್ ಪಂದ್ಯದ ವೆಚ್ಚ
ಐಪಿಎಲ್ ಮಾಧ್ಯಮ ಹಕ್ಕುಗಳ ಹರಾಜಿನಲ್ಲಿ ಬಿಸಿಸಿಐ ಶ್ರೀಮಂತ: 100 ಕೋಟಿ ದಾಟಿದ 1 ಪಂದ್ಯದ ಮೌಲ್ಯ! title=
1 ಪಂದ್ಯದ ವೆಚ್ಚ 100 ಕೋಟಿ ಮೀರಿದೆ

ನವದೆಹಲಿ: ಐಪಿಎಲ್ ವಿಶ್ವದಲ್ಲೇ ಅತಿಹೆಚ್ಚು ವೀಕ್ಷಿಸುವ ಲೀಗ್ ಆಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಟಿವಿ ಮತ್ತು ಡಿಜಿಟಲ್ ಮಾಧ್ಯಮದ ಹಕ್ಕುಗಳಿಗಾಗಿ ಭಾರಿ ಬಿಡ್ಡಿಂಗ್ ಇತ್ತು. ಐಪಿಎಲ್ ಇದೀಗ ಹೊಸದೊಂದು ಇತಿಹಾಸ ಸೃಷ್ಟಿಸಿದೆ. ಮುಂದಿನ 5 ವರ್ಷಗಳ ಕಾಲ ಮಾಧ್ಯಮ ಹಕ್ಕುಗಳ ಬಿಡ್ 43,255 ಕೋಟಿ ರೂ.ಗೆ ತಲುಪಿದ್ದು, ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.

ಇದನ್ನೂ ಓದಿ: ಉದ್ಯೋಗ ಖಾತ್ರಿ ದಿನಗೂಲಿಗಿಂತಲೂ ಕಡಿಮೆ ಉತ್ತರ ಖಂಡದ ರಣಜಿ ಆಟಗಾರರ ಕೂಲಿ....!

ಐಪಿಎಲ್ ಮಾಧ್ಯಮ ಹಕ್ಕು ಹಲವು ಕೋಟಿಗೆ ಮಾರಾಟ

ಐಪಿಎಲ್ ಮಾಧ್ಯಮ ಹಕ್ಕುಗಳ ಬಗ್ಗೆ ದೊಡ್ಡ ಅಪ್‌ಡೇಟ್ ಸಿಕ್ಕಿದೆ. ಮಾಧ್ಯಮ ಹಕ್ಕುಗಳಿಗಾಗಿ ಪ್ಯಾಕೇಜ್- A ಮತ್ತು ಪ್ಯಾಕೇಜ್- Bಯನ್ನು ಮಾರಾಟ ಮಾಡಲಾಗಿದೆ. ಭಾರತದಲ್ಲಿ ಪ್ರಸಾರವಾಗುವ ಟಿವಿ ಮತ್ತು ಡಿಜಿಟಲ್ ಮಾಧ್ಯಮದ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ. ಐಪಿಎಲ್ 2023ರಿಂದ 2027ರವರೆಗೆ ಟಿವಿ ಹಕ್ಕುಗಳು 57.5 ಕೋಟಿ ರೂ.ಗಳಿಗೆ ಮತ್ತು ಡಿಜಿಟಲ್ ಹಕ್ಕುಗಳು 48 ಕೋಟಿ ರೂ.ಗೆ ಮಾರಾಟವಾಗಿವೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಈ ಬೌಲರ್‌ ಸೇರ್ಪಡೆ ಸಾಧ್ಯತೆ: ಬೆಚ್ಚಿಬಿದ್ದ ದ.ಆಫ್ರಿಕಾ!

1 ಪಂದ್ಯದ ವೆಚ್ಚ 100 ಕೋಟಿ ಮೀರಿದೆ

ಮಾಧ್ಯಮ ಹಕ್ಕುಗಳ ಪ್ಯಾಕೇಜ್-A ಮತ್ತು ಪ್ಯಾಕೇಜ್-B ಒಟ್ಟು 43,255 ಕೋಟಿ ರೂ.ಗಳಿಗೆ ಮಾರಾಟವಾಗಿದೆ. ಅಂದರೆ, ಈ ಬೆಲೆ 1 ಪಂದ್ಯಕ್ಕೆ 105.5 ಕೋಟಿ ರೂ.ಗೆ ತಲುಪಿದೆ. ಇದರ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ. ಈ ಹರಾಜಿನಲ್ಲಿ ಟಿವಿ ರೈಟ್ಸ್‌ನ ಮೂಲ ಬೆಲೆ 49 ಕೋಟಿ ರೂ. ಆಗಿದ್ದು, ಡಿಜಿಟಲ್ ರೈಟ್ಸ್‌ನ ಬೆಲೆ 33 ಕೋಟಿ ರೂ. ಆಗಿದೆ. ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಯಾರು ಖರೀದಿಸಿದ್ದಾರೆ ಅನ್ನೋದು ಇನ್ನಷ್ಟೇ ತಿಳಿದುಬರಬೇಕಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News