ಟೀಂ ಇಂಡಿಯಾಗೆ ಈ ಬೌಲರ್‌ ಸೇರ್ಪಡೆ ಸಾಧ್ಯತೆ: ಬೆಚ್ಚಿಬಿದ್ದ ದ.ಆಫ್ರಿಕಾ!

ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾರಂತೆಯೇ ಅರ್ಷದೀಪ್ ಅವರು ಸಹ ನಿಖರವಾದ ಯಾರ್ಕರ್ ಎಸೆತಗಳ ಮೂಲಕ ಬೌಲಿಂಗ್ ಮಾಡುವಲ್ಲಿ ಹೆಸರುವಾಸಿಯಾಗಿದ್ದಾರೆ. 

Written by - Bhavishya Shetty | Last Updated : Jun 11, 2022, 08:44 AM IST
  • ಭಾರತ- ದಕ್ಷಿಣ ಆಫ್ರಿಕಾ T20 ಸರಣಿ
  • ಎರಡನೇ ಪಂದ್ಯಕ್ಕೆ ಅರ್ಷದೀಪ್ ಸಿಂಗ್‌ ಸೇರ್ಪಡೆ ಸಾಧ್ಯತೆ
  • ಹೆಚ್ಚು ಯಾರ್ಕರ್ಗಳನ್ನುಅರ್ಷದೀಪ್‌ ಬೌಲ್ ಮಾಡಿದ್ದರು
ಟೀಂ ಇಂಡಿಯಾಗೆ ಈ ಬೌಲರ್‌ ಸೇರ್ಪಡೆ ಸಾಧ್ಯತೆ: ಬೆಚ್ಚಿಬಿದ್ದ ದ.ಆಫ್ರಿಕಾ!  title=
Arshdeep singh

ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ T20 ಸರಣಿಯಲ್ಲಿ ಮೊದಲ ಸೋಲು ಕಂಡಿದೆ. ಜೂನ್ 12 ರಂದು ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಲು ಕಸರತ್ತು ನಡೆಸುತ್ತಿದೆ. ಇನ್ನು ಟೀಂ ಇಂಡಿಯಾದ ಈ ಒಬ್ಬ ಆಟಗಾರನನ್ನು ಮುಂದಿನ ಪಂದ್ಯಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ. 

ಇದನ್ನು ಓದಿ: Pranitha Subhash: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಪ್ರಣಿತಾ ಸುಭಾಷ್

ಮೊದಲ ಟಿ20 ಪಂದ್ಯದಲ್ಲಿ ಭುವನೇಶ್ವರ್ ಕುಮಾರ್, ಅವೇಶ್ ಖಾನ್ ಮತ್ತು ಹರ್ಷಲ್ ಪಟೇಲ್ ವೇಗದ ಬೌಲರ್‌ಗಳಾಗಿ ಅವಕಾಶ ಪಡೆದಿದ್ದರು. ಆದರೆ ಮುಂಬರುವ ಎರಡನೇ ಟಿ20 ಪಂದ್ಯದಲ್ಲಿ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್‌ರನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿದೆ. ಅರ್ಷದೀಪ್ ಸಿಂಗ್ ಕೊನೆಯ ಓವರ್‌ನಲ್ಲಿ ಭರ್ಜರಿ ಬೌಲಿಂಗ್‌ ಮಾಡುತ್ತಾರೆ ಎಂಬುದು ಐಪಿಎಲ್‌ ಪಂದ್ಯದ ಸಂದರ್ಭದಲ್ಲಿ ಸಾಬೀತಾಗಿತ್ತು. 

ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾರಂತೆಯೇ ಅರ್ಷದೀಪ್ ಅವರು ಸಹ ನಿಖರವಾದ ಯಾರ್ಕರ್ ಎಸೆತಗಳ ಮೂಲಕ ಬೌಲಿಂಗ್ ಮಾಡುವಲ್ಲಿ ಹೆಸರುವಾಸಿಯಾಗಿದ್ದಾರೆ. ಐಪಿಎಲ್‌ ಸೀಸನ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರಿಗಿಂತ ಹೆಚ್ಚು ಯಾರ್ಕರ್ಗಳನ್ನುಅರ್ಷದೀಪ್‌  ಬೌಲ್ ಮಾಡಿದ್ದರು. ಈ ಎಲ್ಲಾ ಮಾನದಂಡಗಳನ್ನು ಅನುಸರಿಸಿ ಅರ್ಷದೀಪ್ ಸಿಂಗ್ ಅವರು ಮುಂದಿನ ಪಂದ್ಯಕ್ಕೆ ಸೇರುವ ಸಾಧ್ಯತೆಯಿದೆ. 

ಇದನ್ನು ಓದಿ: Horoscope Today: ಈ ರಾಶಿಯವರಿಗೆ ಧನಲಾಭದ ಜೊತೆಗೆ ಯಶಸ್ಸು ಸಿಗಲಿದೆ

ಅರ್ಷದೀಪ್ ಸಿಂಗ್ 2019ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಕಳೆದ ಕೆಲ ಸೀಸನ್‌ಗಳಲ್ಲಿ ಪಂಜಾಬ್ ಕಿಂಗ್ಸ್  ಪರವಾಗಿ ಆಡಿದ್ದ ಅರ್ಷದೀಪ್‌, ಬೌಲಿಂಗ್‌ನಲ್ಲಿ ಮೇಲುಗೈ ಸಾಧಿಸಿದ್ದರು. ಇನ್ನು ಈ ಬಾರಿಯ ಸೀಸನ್‌ನಲ್ಲಿ 14 ಪಂದ್ಯಗಳನ್ನು ಆಡಿರುವ ಅರ್ಷದೀಪ್‌ 7.70 ರ ಎಕಾನಮಿ ರೇಟ್‌ ಹೊಂದಿದ್ದಾರೆ. ಜೊತೆಗೆ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ಅರ್ಷದೀಪ್ ಐಪಿಎಲ್ 2022 ರ ಅತ್ಯುತ್ತಮ ಡೆತ್ ಓವರ್ ಬೌಲರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲದೆ,  ಐಪಿಎಲ್‌ನ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಪಡೆದ ಸಾಧನೆಯನ್ನೂ ಇವರು ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News