ಈ ರಾಷ್ಟ್ರದಲ್ಲಿ ನಡೆಯಲಿದೆ ʼಮಿನಿ ಐಪಿಎಲ್‌ʼ: ಭಾರತದ ಫ್ರಾಂಚೈಸಿಗಳಿಂದ ಬಿಡ್ಡಿಂಗ್‌

ಕ್ರಿಕೆಟ್ ದಕ್ಷಿಣ ಆಫ್ರಿಕಾದ ಹೊಚ್ಚ ಹೊಸ ಟಿ-20 ಲೀಗ್ ಐಪಿಎಲ್‌ ಮಾಲೀಕರಿಂದ ಕೆಲವು ಬೆಂಬಲವನ್ನು ಪಡೆದುಕೊಂಡಿದೆ. ಒಂದು ವೇಳೆ ಕ್ರಿಕ್‌ಬಜ್‌ನ ಈ ವರದಿಯು ನಿಜವಾಗಿದ್ದರೆ, ಒಂಬತ್ತು ಐಪಿಎಲ್ ಫ್ರಾಂಚೈಸಿ ಮಾಲೀಕರಲ್ಲಿ ಆರು ಮಂದಿ ತಮ್ಮ ತಂಡಗಳನ್ನು ಫೆಬ್ರವರಿ-ಮಾರ್ಚ್ 2023 ರಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಹೊಂದಿರುತ್ತಾರೆ. 

Written by - Bhavishya Shetty | Last Updated : Jul 19, 2022, 12:12 PM IST
  • ಕ್ರಿಕೆಟ್ ದಕ್ಷಿಣ ಆಫ್ರಿಕಾದ ಹೊಚ್ಚ ಹೊಸ ಟಿ-20 ಲೀಗ್
  • ಭಾರತದ ಐಪಿಎಲ್ ಫ್ರಾಂಚೈಸಿಗಳು ಬಿಡ್ಡಿಂಗ್‌ನಲ್ಲಿ ಭಾಗಿ
  • ಫೆಬ್ರವರಿ-ಮಾರ್ಚ್ 2023 ರಲ್ಲಿ ನಡೆಯಲಿರುವ ಪಂದ್ಯಾವಳಿ
ಈ ರಾಷ್ಟ್ರದಲ್ಲಿ ನಡೆಯಲಿದೆ ʼಮಿನಿ ಐಪಿಎಲ್‌ʼ: ಭಾರತದ ಫ್ರಾಂಚೈಸಿಗಳಿಂದ ಬಿಡ್ಡಿಂಗ್‌ title=
IPL

ಐಪಿಎಲ್ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆ ಪಡೆದ ಲೀಗ್ ಎನ್ನಬಹುದು. ಅನೇಕ ಕ್ರಿಕೆಟಿಗರು ಈ ಲೀಗ್‌ನಲ್ಲಿ ಆಡುವ ಮೂಲಕ ಹಣ ಮತ್ತು ಖ್ಯಾತಿಯನ್ನು ಗಳಿಸಿದ್ದಾರೆ. ಇದೀಗ ಕ್ರಿಕೆಟ್ ಸೌತ್ ಆಫ್ರಿಕಾ T20 ಲೀಗ್ ಅನ್ನು ಪ್ರಾರಂಭಿಸಲಿದ್ದು, ಅದರ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳನ್ನು ಖರೀದಿಸಲು ಉತ್ಸುಕವಾಗಿವೆ. ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್ ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಆರು ತಂಡಗಳ ಮಾಲೀಕತ್ವವನ್ನು ಪಡೆದುಕೊಂಡಿವೆ.

ಇದನ್ನೂ ಓದಿ: ನಿಮ್ಮ ಬಳಿ 50 ಪೈಸೆ ನಾಣ್ಯವಿದ್ದರೆ ರಾತ್ರೋರಾತ್ರಿ ಲಕ್ಷಾಧಿಪತಿಯಾಗಬಹುದು ..!

ಕ್ರಿಕೆಟ್ ದಕ್ಷಿಣ ಆಫ್ರಿಕಾದ ಹೊಚ್ಚ ಹೊಸ ಟಿ-20 ಲೀಗ್ ಐಪಿಎಲ್‌ ಮಾಲೀಕರಿಂದ ಕೆಲವು ಬೆಂಬಲವನ್ನು ಪಡೆದುಕೊಂಡಿದೆ. ಒಂದು ವೇಳೆ ಕ್ರಿಕ್‌ಬಜ್‌ನ ಈ ವರದಿಯು ನಿಜವಾಗಿದ್ದರೆ, ಒಂಬತ್ತು ಐಪಿಎಲ್ ಫ್ರಾಂಚೈಸಿ ಮಾಲೀಕರಲ್ಲಿ ಆರು ಮಂದಿ ತಮ್ಮ ತಂಡಗಳನ್ನು ಫೆಬ್ರವರಿ-ಮಾರ್ಚ್ 2023 ರಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಹೊಂದಿರುತ್ತಾರೆ. 

ಮುಂಬೈ ಇಂಡಿಯನ್ಸ್ ಕೇಪ್ ಟೌನ್‌ನಲ್ಲಿ ತಮ್ಮ ತಂಡವನ್ನು ರಚಿಸಲು ಸಿದ್ಧವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಜೋಹಾನ್ಸ್‌ಬರ್ಗ್, ಡೆಲ್ಲಿ ಕ್ಯಾಪಿಟಲ್ಸ್‌ನ ಸಹ-ಮಾಲೀಕರಾದ ಜಿಂದಾಲ್ ಅವರ ತಂಡವು ಸೆಂಚುರಿಯನ್ ಮತ್ತು ಪ್ರಿಟೋರಿಯಾದಲ್ಲಿ ತಂಡ ರಚಿಸಲಿದೆ. ಇನ್ನು ಪ್ರಿಟೋರಿಯಾ ಸೌತ್‌ ಆಫ್ರಿಕಾದ ರಾಜಧಾನಿಯಾಗಿದೆ. ಇನ್ನು ಬಿಡ್‌ ಗೆಲ್ಲುವ ವಿಜೇತರನ್ನು ತಿಂಗಳ ಕೊನೆಯಲ್ಲಿ ಘೋಷಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಆರ್‌ಬಿಐನ ಹೊಸ ಆದೇಶ- ಈ ಬ್ಯಾಂಕ್‌ನಿಂದ 15,000 ಕ್ಕಿಂತ ಹೆಚ್ಚು ಹಣ ಡ್ರಾ ಮಾಡಲು ಸಾಧ್ಯವಿಲ್ಲ

ವರದಿಗಳು ಹೇಳುವಂತೆ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಅತಿ ದೊಡ್ಡ ಹಣಕಾಸು ಬಿಡ್ ಅನ್ನು ಮಾಡಿದೆ. ಬಿಡ್‌ ಮೌಲ್ಯ ಸುಮಾರು 250 ಕೋಟಿಗಳಷ್ಟಿದೆ. ಐಪಿಎಲ್ ಮಾದರಿಯ ಪ್ರಕಾರ, ಪ್ರತಿ ಫ್ರಾಂಚೈಸಿಯು 10 ವರ್ಷಗಳವರೆಗೆ ಫ್ರಾಂಚೈಸಿ ಶುಲ್ಕದ ಶೇಕಡಾ 10 ರಷ್ಟು ಪಾವತಿಸಬೇಕಾಗುತ್ತದೆ. ಮುಂಬೈ ಇಂಡಿಯನ್ಸ್‌ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಡೆವಾಲ್ಡ್ ಬ್ರೆವಿಸ್ ಅನ್ನು ಆಯ್ಕೆ ಮಾಡಿದೆ. ಆದರೆ ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ತಂಡದ ನಾಯಕರಾಗಿದ್ದಾರೆ. ಕಳೆದ ವರ್ಷ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಖರೀದಿಸಿದ ಡರ್ಬನ್ ಫ್ರಾಂಚೈಸಿಯಲ್ಲಿ ಸಂಜೀವ್ ಗೋಯೆಂಕಾ ಆಸಕ್ತಿ ಹೊಂದಿದ್ದಾರೆಂದು ಹೇಳಲಾಗಿದೆ. ಈ ಮಧ್ಯೆ ಸನ್‌ರೈಸರ್ಸ್ ತಂಡವು ಪೋರ್ಟ್ ಎಲಿಜಬೆತ್‌ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಆದರೆ ರಾಜಸ್ಥಾನ್ ರಾಯಲ್ಸ್ ಪಾರ್ಲ್ ಫ್ರಾಂಚೈಸಿಯನ್ನು ತೆಗೆದುಕೊಳ್ಳುವ ಎಲ್ಲಾ ಸೂಚನೆ ಕಂಡುಬರುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News