ಈ ಘಟನೆಯಿಂದ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಏಕೆಂದರೆ ಸಾಮಾನ್ಯವಾಗಿ ರೈಲಿನಲ್ಲಿ ದೂರದೂರಿಗೆ ಪ್ರಯಾಣ ಮಾಡುವ ವೇಳೆ ಎಸಿ ಕೋಚ್ ಅನ್ನು ಬಹಳ ಅನುಕೂಲಕರ ಕೋಚ್ ಎಂದು ಪರಿಗಣಿಸಲಾಗುತ್ತದೆ. ಈ ವಿಡಿಯೋ ಹೊರಬಂದ ನಂತರ ಜನರು ಭಾರತೀಯ ರೈಲ್ವೆಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಜನರಲ್ ಬುಕಿಂಗ್ಗಾಗಿ ಐಆರ್ಸಿಟಿಸಿ ವೆಬ್ಸೈಟ್ ಬೆಳಿಗ್ಗೆ 8.00 ಕ್ಕೆ ತೆರೆಯುತ್ತದೆ. ಬೆಳಿಗ್ಗೆ 10 ಗಂಟೆಯ ನಂತರ ತತ್ಕಾಲ್ ಎಸಿ ಟಿಕೆಟ್ಗಾಗಿ ಮತ್ತು ನಾನ್ ಎಸಿ ಟಿಕೆಟ್ಗಾಗಿ ಬೆಳಿಗ್ಗೆ 11 ಗಂಟೆಗೆ ವೆಬ್ಸೈಟ್ ತೆರೆಯುತ್ತದೆ. 120 ದಿನಗಳ ಮೊದಲು ಯಾವುದೇ ಟಿಕೆಟ್ಗಳನ್ನು ಕಾಯ್ದಿರಿಸಲಾಗುವುದಿಲ್ಲ.
ಟ್ರೈನ್, ಬಸ್, ರೈಲ್ವೇ ನಿಲ್ದಾಣದಲ್ಲಿ ಹೆರಿಗೆಯಾಗಿರುವ ಬಗ್ಗೆ ನೀವು ಹಲವು ಸುದ್ದಿಗಳನ್ನು ನೋಡಿರಬಹುದು. ಇಂದೂ ಕೂಡ ಅಂತಹ ಒಂದು ಘಟನೆ ಬಗ್ಗೆ ನಾವು ತಿಳಿಸಲಿದ್ದೇವೆ. ಆದರೆ ಈ ಘಟನೆ ಸ್ವಲ್ಪ ವಿಭಿನ್ನವಾಗಿದೆ.
ಒರಿಸ್ಸಾದ ಬಾಲಸೋರ್ ಮತ್ತು ಸೊರೊ ರೈಲ್ವೆ ನಿಲ್ದಾಣಗಳ ನಡುವೆ ಭುವನೇಶ್ವರ್ ರಾಜಧಾನಿ ಎಕ್ಸ್ ಪ್ರೆಸ್ ಗೆ ಆಕಸ್ಮಿಕವಾಗಿ ಶನಿವಾರ ಬೆಂಕಿ ತಗುಲಿದೆ. ಆದರೆ ಅದೃಷ್ಟವಶಾತ್ ರೈಲಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಧಾನಿ ಮೋದಿ ಫೋಟೋವನ್ನು ಹೊಂದಿರುವ ಟೀಕೆಟ್ ನ್ನು ಪ್ರಯಾಣಿಕರಿಗೆ ನೀಡಿರುವುದಕ್ಕೆ ಈಗ ಇಬ್ಬರು ರೇಲ್ವೆ ಉದ್ಯೋಗಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.ಸಾರ್ವಜನಿಕ ಹಣದ ರಾಜಕೀಯ ಜಾಹೀರಾತು ಚುನಾವಣಾ ನೀತಿ ಸಂಹಿತೆ ನಿಯಮವನ್ನು ಉಲ್ಲಂಘಿಸುತ್ತದೆ.ಈ ಹಿನ್ನಲೆಯಲ್ಲಿ ಅವರನ್ನು ಈಗ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.
ರೈಲ್ವೆ ಟಿಕೆಟ್ ಕನ್ಫರ್ಮ್ ಆಗಿದ್ರೆ ಅದನ್ನು ಬೇರೆಯವರಿಗೆ ಟ್ರಾನ್ಸ್ ಫರ್ ಮಾಡಲು ಇಲಾಖೆ ಅವಕಾಶ ಕಲ್ಪಿಸಿದೆ. ಟಿಕೆಟ್ ವರ್ಗಾವಣೆ ಪ್ರಕ್ರಿಯೆಯು ಪ್ರಯಾಣದ ಕನಿಷ್ಟ 24 ಗಂಟೆಗಳ ಮುಂಚಿತವಾಗಿ ಪೂರ್ಣಗೊಳ್ಳಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.