ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಸ್ವೀಟಿ.. ಅನುಷ್ಕಾ ಶೆಟ್ಟಿಯನ್ನು ಕಾಡುತ್ತಿರುವ ಸಮಸ್ಯೆ ಇದು!

Anushka Shetty disease: ಕೆಲ ದಿನಗಳಿಂದ ಸ್ಟಾರ್ ನಟರು ನಾನಾ ಕಾಯಿಲೆಗಳಿಂದ ಬಳಲುತ್ತಿರುವ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ಸಿನಿಪ್ರೇಮಿಗಳಿಗೆ ಶಾಕ್ ನೀಡುತ್ತಿದ್ದಾರೆ.

Written by - Chetana Devarmani | Last Updated : Jun 25, 2024, 10:39 AM IST
  • ಅನುಷ್ಕಾ ಶೆಟ್ಟಿಯನ್ನು ಕಾಡುತ್ತಿರುವ ವಿಚಿತ್ರ ಕಾಯಿಲೆ
  • ಸ್ವೀಟಿಗೆ ಬಾಧಿಸಿದ ಈ ನಿಗೂಢ ಕಾಯಿಲೆ ಯಾವುದು?
  • ಅನುಷ್ಕಾ ಶೆಟ್ಟಿಯನ್ನು ಕಾಡುತ್ತಿರುವ ಸಮಸ್ಯೆ ಏನು?
ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಸ್ವೀಟಿ.. ಅನುಷ್ಕಾ ಶೆಟ್ಟಿಯನ್ನು ಕಾಡುತ್ತಿರುವ ಸಮಸ್ಯೆ ಇದು! title=

Anushka Shetty Health News: ಕೆಲ ದಿನಗಳಿಂದ ಸ್ಟಾರ್ ನಟರು ನಾನಾ ಕಾಯಿಲೆಗಳಿಂದ ಬಳಲುತ್ತಿರುವ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ಸಿನಿಪ್ರೇಮಿಗಳಿಗೆ ಶಾಕ್ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಸೌತ್ ಸ್ಟಾರ್ ಹೀರೋಯಿನ್ ಅನುಷ್ಕಾ ಶೆಟ್ಟಿ ತಮ್ಮ ಆರೋಗ್ಯದ ಬಗ್ಗೆ ಶಾಕಿಂಗ್ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ತಾನು ಕೂಡ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಅನುಷ್ಕಾ ಹೇಳಿದ್ದಾರೆ. ತೆಲುಗು, ತಮಿಳು, ಹಿಂದಿ ಚಿತ್ರಗಳ ಮೂಲಕ ಉತ್ತಮ ಮನ್ನಣೆ ಗಳಿಸಿರುವ ಅನುಷ್ಕಾ ಶೆಟ್ಟಿ ಬಾಹುಬಲಿಗೂ ಮುನ್ನವೇ ಸಿಂಗಂ ಚಿತ್ರಗಳ ಮೂಲಕ ಜನಮನ್ನಣೆ ಗಳಿಸಿರುವ ಅನುಷ್ಕಾ ಶೆಟ್ಟಿ ತಮ್ಮ ಆರೋಗ್ಯದ ಬಗ್ಗೆ ಆಘಾತಕಾರಿ ಸುದ್ದಿಯನ್ನು ಬಹಿರಂಗಪಡಿಸಿದರು. 

ಇದನ್ನೂ ಓದಿ: ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್ ಗೆ ಟ್ವಿಸ್ಟ್ : ಪವಿತ್ರಾ ಗೌಡ ಖಾತೆಗೆ ಜಗದೀಶ್ ಅಕೌಂಟ್ ನಿಂದ ವರ್ಗಾವಣೆಯಾಗಿತ್ತು 2 ಕೋಟಿ ರೂಪಾಯಿ
 
ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಸ್ಟಾರ್ ಹೀರೋಯಿನ್ ಅನುಷ್ಕಾ ಶೆಟ್ಟಿ ಮಾತನಾಡಿದ್ದು, ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ತನಗೆ ನಗುವ ಕಾಯಿಲೆ ಇದೆ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ. ನಗುವುದೂ ಒಂದು ರೋಗ ಎಂದು ತಿಳಿದರೆ ಆಶ್ಚರ್ಯವಾಗಬಹುದು. ಆದರೆ ಯಾರಾದರೂ ಒಂದು ಅಥವಾ ಎರಡು ನಿಮಿಷಗಳ ಕಾಲ ನಗುತ್ತಾರೆ. ಆದರೆ ಅನುಷ್ಕಾ ಶೆಟ್ಟಿ ವಿಷಯದಲ್ಲಿ ಅದು ಹಾಗಲ್ಲ. ಒಮ್ಮೆ ನಗಲು ಶುರು ಮಾಡಿದರೆ 15-20 ನಿಮಿಷ ನಗುವುದನ್ನು ನಿಲ್ಲಿಸುವುದು ಅನುಷ್ಕಾ ಶೆಟ್ಟಿಗೆ ಬಲು ಕಷ್ಟ. ಯಾವುದೇ ಹಾಸ್ಯ ದೃಶ್ಯವನ್ನು ನೋಡುವಾಗ ಅಥವಾ ಚಿತ್ರೀಕರಣ ಮಾಡುವಾಗ.. ಅನುಷ್ಕಾ ಶೆಟ್ಟಿ ನಗಲು ಶುರು ಮಾಡಿದರೆ, ನೆಲದ ಮೇಲೆ ಮಲಗಿ ಕೂಡ ನಗುತ್ತಾರೆ. ಇದರಿಂದ ಹಲವು ಬಾರಿ ಶೂಟಿಂಗ್ ನಿಲ್ಲಿಸಬೇಕಾಯಿತು ಎಂದು ಸ್ವತಃ ಸ್ವೀಟಿಯೇ ಬಹಿರಂಗಪಡಿಸಿದ್ದಾರೆ.

ಅನುಷ್ಕಾ ಸ್ಯೂಡೋಬಲ್ಬಾರ್ ಎಫೆಕ್ಟ್ ಅಥವಾ PBA ನಿಂದ ಬಳಲುತ್ತಿದ್ದಾರೆ. ಇದು ಅಪರೂಪದ ನರವೈಜ್ಞಾನಿಕ ಕಾಯಿಲೆಯಾಗಿದೆ. ಈ ರೋಗವು ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಈ ಕಾಯಿಲೆಗೆ ತುತ್ತಾದ ವ್ಯಕ್ತಿಯು ಅನಿಯಂತ್ರಿತವಾಗಿ ನಗುತ್ತಾನೆ ಅಥವಾ ಅಳುತ್ತಾನೆ. ತಾನು ಯಾವ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಸ್ವತಃ ಅನುಷ್ಕಾಗೆ ಗೊತ್ತಿರಲಿಲ್ಲವಂತೆ. ಇದನ್ನೇ ಆಧಾರವಾಗಿಟ್ಟುಕೊಂಡು ಅನೇಕರು ಸ್ವೀಟಿ ಕೂಡ ಸೂಡೊಬುಲ್ಬಾರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅನುಷ್ಕಾ ಕೊನೆಯದಾಗಿ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅನುಷ್ಕಾ ಘಾಟಿ ಮತ್ತು ಕಥನಾರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಈ ನಟಿಗೂ ಅಶ್ಲೀಲ ಮೆಸೇಜ್‌, ವಿಡಿಯೋ ಕಳಿಸಿದ್ದನಂತೆ ರೇಣುಕಾಸ್ವಾಮಿ.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News