ರೈಲ್ವೆ ಟಿಕೆಟ್ ಮೇಲೆ ಪ್ರಧಾನಿ ಮೋದಿ ಫೋಟೋ, ಇಬ್ಬರು ರೈಲ್ವೆ ಸಿಬ್ಬಂದಿ ಸಸ್ಪೆಂಡ್

ಪ್ರಧಾನಿ ಮೋದಿ ಫೋಟೋವನ್ನು ಹೊಂದಿರುವ ಟೀಕೆಟ್ ನ್ನು ಪ್ರಯಾಣಿಕರಿಗೆ ನೀಡಿರುವುದಕ್ಕೆ ಈಗ ಇಬ್ಬರು ರೇಲ್ವೆ ಉದ್ಯೋಗಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.ಸಾರ್ವಜನಿಕ ಹಣದ ರಾಜಕೀಯ ಜಾಹೀರಾತು ಚುನಾವಣಾ ನೀತಿ ಸಂಹಿತೆ ನಿಯಮವನ್ನು ಉಲ್ಲಂಘಿಸುತ್ತದೆ.ಈ ಹಿನ್ನಲೆಯಲ್ಲಿ ಅವರನ್ನು ಈಗ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.

Last Updated : Apr 16, 2019, 02:58 PM IST
ರೈಲ್ವೆ ಟಿಕೆಟ್ ಮೇಲೆ ಪ್ರಧಾನಿ ಮೋದಿ ಫೋಟೋ, ಇಬ್ಬರು ರೈಲ್ವೆ ಸಿಬ್ಬಂದಿ ಸಸ್ಪೆಂಡ್  title=
Photo courtesy: Twitter

ನವದೆಹಲಿ: ಪ್ರಧಾನಿ ಮೋದಿ ಫೋಟೋವನ್ನು ಹೊಂದಿರುವ ಟೀಕೆಟ್ ನ್ನು ಪ್ರಯಾಣಿಕರಿಗೆ ನೀಡಿರುವುದಕ್ಕೆ ಈಗ ಇಬ್ಬರು ರೇಲ್ವೆ ಉದ್ಯೋಗಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.ಸಾರ್ವಜನಿಕ ಹಣದ ರಾಜಕೀಯ ಜಾಹೀರಾತು ಚುನಾವಣಾ ನೀತಿ ಸಂಹಿತೆ ನಿಯಮವನ್ನು ಉಲ್ಲಂಘಿಸುತ್ತದೆ.ಈ ಹಿನ್ನಲೆಯಲ್ಲಿ ಅವರನ್ನು ಈಗ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.

ಈ ಘಟನೆ ಸೋಮವಾರ ಉತ್ತರ ಪ್ರದೇಶದ ಬರಾಬಂಕಿ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದು, ಎಡಿಎಂ ಪ್ರಕಾರ, ಶನಿವಾರದಂದು ಶಿಫ್ಟ್ ಬದಲಾದ ಸಂದರ್ಭದಲ್ಲಿ ಹಳೆಯ ರೋಲ್ ತಪ್ಪಾಗಿ ಬಳಸಲ್ಪಟ್ಟಿತು ಎನ್ನಲಾಗಿದೆ.ಈಗ ರೇಲ್ವೆ ನೌಕರರನ್ನು ಅಮಾನತುಗೊಳಿಸಿ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಎಡಿಎಂ ಹೇಳಿದ್ದಾರೆ.ಪ್ರಧಾನ್ ಮಂತ್ರಿ ಆವಾಸ್ ಯೋಜನೆ (PMAY) ಮತ್ತು ಪ್ರಧಾನಿ ಮೋದಿ ಅವರ ಛಾಯಾಚಿತ್ರವನ್ನು ನಗರ ಅಭಿವೃದ್ಧಿ ಸಚಿವಾಲಯದ ಜಾಹೀರಾತು ಅಭಿಯಾನದ ಭಾಗವಾಗಿ ಟಿಕೆಟ್ ಮೇಲೆ ಬಳಸಲಾಗಿದೆ.

ಲೋಕಸಭಾ ಚುನಾವಣೆಗಾಗಿ ಮತದಾನದ ದಿನಾಂಕವನ್ನು ಘೋಷಣೆ ಮಾಡಿದ ಸಂದರ್ಭದಲ್ಲಿ ನೀತಿ ಸಂಹಿತೆ ಮಾರ್ಚ್ 10 ರಿಂದ ಜಾರಿಗೆ ಬಂದಿತ್ತು.ಚುನಾವಣಾ ನೀತಿ ಸಂಹಿತೆ ಪ್ರಕಾರ ರಾಜಕೀಯ ಮುಖಂಡರ ಫೋಟೋಗಳು, ಅವರ ಹೆಸರುಗಳು, ಪಕ್ಷದ ಸಂಕೇತಗಳನ್ನು ಸಾರ್ವಜನಿಕ ಹಣದ ವೆಚ್ಚದಲ್ಲಿ ಪ್ರಚಾರ ಮಾಡಲಾಗುವುದಿಲ್ಲ. ನೀತಿ ಸಂಹಿತೆ ಜಾರಿಗೆ ಬಂದಾಗ ಅವರ ಹೆಸರುಗಳು, ಫೋಟೋಗಳು ಮತ್ತು ರಾಜಕೀಯ ಪಕ್ಷಗಳ ಹೆಸರುಗಳು, ಹಾಗೆಯೇ ಅವರ ಸಾಧನೆಗಳನ್ನು ಸರಕಾರಿ ಕಟ್ಟಡಗಳ ಮೇಲೆ ಪ್ರಕಟಿಸುವುದನ್ನು ನಿಷೇಧಿಸಿದೆ.

Trending News