ರೈಲ್ವೆ ಇಲಾಖೆಯಲ್ಲಿ 9,000 ಹುದ್ದೆಗಳಿಗೆ ನೇಮಕಾತಿ, ಮಹಿಳೆಯರಿಗೆ 50% ಮೀಸಲಾತಿ

ಶೀಘ್ರದಲ್ಲೇ ರೈಲ್ವೆ ಇಲಾಖೆಯಲ್ಲಿ ಒಟ್ಟು 9000 ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದರು.

Last Updated : Jul 1, 2019, 10:41 AM IST
ರೈಲ್ವೆ ಇಲಾಖೆಯಲ್ಲಿ 9,000 ಹುದ್ದೆಗಳಿಗೆ ನೇಮಕಾತಿ, ಮಹಿಳೆಯರಿಗೆ 50% ಮೀಸಲಾತಿ title=

ನವದೆಹಲಿ: ಉದ್ಯೋಗ ಹುಡುಕುತ್ತಿರುವ ಮಹಿಳೆಯರಿಗೆ ಇದು ಒಳ್ಳೆಯ ಸುದ್ದಿ. ಭಾರತೀಯ ರೈಲ್ವೆ ಶೀಘ್ರದಲ್ಲೇ  4500 ಹುದ್ದೆಗಳಲ್ಲಿ ಮಹಿಳೆಯರಿಗೆ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ನಲ್ಲಿ ನೇಮಕಾತಿಗಳನ್ನು ಮಾಡಿಕೊಳ್ಳಲಿದೆ. 

ವಾಸ್ತವವಾಗಿ, ಶೀಘ್ರದಲ್ಲೇ ರೈಲ್ವೆ ಇಲಾಖೆಯಲ್ಲಿ ಒಟ್ಟು 9000 ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದರು. ಆದರೆ ಆರ್‌ಪಿಎಫ್‌ನಲ್ಲಿ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಇರುವುದರಿಂದ ಅವರಿಗೆ ಶೇಕಡಾ 50ರಷ್ಟು ಮೀಸಲಾತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯಸಭೆಯಲ್ಲಿ ಶುಕ್ರವಾರ ಮಾತನಾಡಿದ ಗೋಯಲ್, ಆರ್‌ಪಿಎಫ್ನಲ್ಲಿ ಪ್ರಸ್ತುತ 2.25 ರಷ್ಟು ಮಹಿಳೆಯರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಮಹಿಳೆಯರನ್ನು ನೇಮಕ ಮಾಡಿಕೊಳ್ಳಬೇಕೆಂದು ಪ್ರಧಾನಿ ವಿಶೇಷ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗಾಗಿ ಶೇ.  50 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಗೋಯಲ್, "ರೈಲ್ವೆಯಲ್ಲಿ ಸುಮಾರು 9,000 ಕಾನ್‌ಸ್ಟೆಬಲ್‌ಗಳು ಮತ್ತು ಸಬ್ ಇನ್ಸ್‌ಪೆಕ್ಟರ್‌ಗಳ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು. ಇದರಲ್ಲಿ 50% ಮಹಿಳೆಯರನ್ನು ತೆಗೆದುಕೊಳ್ಳಲಾಗುವುದು. ಇದು ಮಹಿಳೆಯರ ಸಬಲೀಕರಣವನ್ನು ಖಚಿತಪಡಿಸುತ್ತದೆ, ಜೊತೆಗೆ ರೈಲ್ವೆ ಸಂರಕ್ಷಣಾ ಪಡೆಯಲ್ಲಿ ಅವರ ಪ್ರಾತಿನಿಧ್ಯ ಹೆಚ್ಚಾಗುತ್ತದೆ" ಎಂದಿದ್ದಾರೆ.
 

Trending News