ಇಂದಿನಿಂದ ಮುಂಬೈ ಸ್ಥಳೀಯ ಎಸಿ ರೈಲಿನ ಪ್ರಯಾಣ ದುಬಾರಿ

ಈಗ ಕನಿಷ್ಠ ಶುಲ್ಕ 65 ರೂಪಾಯಿ ಮತ್ತು ಗರಿಷ್ಠ ಶುಲ್ಕ 220 ರೂ. ಆಗಲಿದೆ. ಇದು ಮೊದಲಿಗೆ 60 ರೂಪಾಯಿ ಮತ್ತು 205 ರೂ. ಇತ್ತು.

Last Updated : Jun 3, 2019, 01:47 PM IST
ಇಂದಿನಿಂದ ಮುಂಬೈ ಸ್ಥಳೀಯ ಎಸಿ ರೈಲಿನ ಪ್ರಯಾಣ ದುಬಾರಿ title=
Pic Courtesy: PTI

ನವದೆಹಲಿ: ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದು ಶಾಕಿಂಗ್ ನ್ಯೂಸ್ ಆಗಿದ್ದು, ಮುಂಬೈ ಲೋಕಲ್ ರೈಲಿನಲ್ಲಿ ಎಸಿ ಕೋಚ್ ನಲ್ಲಿ ಪ್ರಯಾಣಿಸುವವರಿಗೆ ಇಂದಿನಿಂದ ಪ್ರಯಾಣ ದುಬಾರಿಯಾಗಲಿದೆ. ಪಶ್ಚಿಮ ರೈಲ್ವೇ ಸ್ಥಳೀಯ ಎಸಿ ರೈಲಿನ ದರವನ್ನು ಇಂದಿನಿಂದ ಹೆಚ್ಚಿಸಿದೆ.

ಪಶ್ಚಿಮ ರೈಲ್ವೇ, ಈಗ ಮುಂಬೈ ಸ್ಥಳೀಯ ರೈಲುಗಳಲ್ಲಿ ಎಸಿ ಕೋಚ್ ಗಳಿಗೆ ಕನಿಷ್ಠ ಶುಲ್ಕ 65 ರೂಪಾಯಿ ಮತ್ತು ಗರಿಷ್ಠ ಶುಲ್ಕ 220 ರೂ. ದರವನ್ನು ನಿಗದಿಗೊಳಿಸಿದೆ. ಇದು ಮೊದಲಿಗೆ 60 ರೂಪಾಯಿ ಮತ್ತು 205 ರೂ. ಇತ್ತು. 

ವಿರಾರ್ ನಿಂದ ಚರ್ಚ್ ಗೇಟ್ ನಡುವೆ ಲೋಕಲ್ ಎಸಿ ಟ್ರೈನ್ ದರವನ್ನು ರೈಲ್ವೇ ಇಲಾಖೆ ಹೆಚ್ಚಿಸಿದೆ. ಈ ರೈಲು 2017 ರಲ್ಲಿ ಪ್ರಾರಂಭಗೊಂಡಿತು. ಅಲ್ಲಿಂದೀಚೆಗೆ, ಪ್ರಸ್ತಾಪದ ಅಡಿಯಲ್ಲಿ ದರವನ್ನು ಏರಿಕೆ ಮಾಡಿರಲಿಲ್ಲ. ಇದೀಗ ಈ ರಿಯಾಯಿತಿ ಮುಕ್ತಾಯಗೊಳ್ಳಲಿದ್ದು, ಸ್ಥಳೀಯ ಎಸಿ ರೈಲಿನ ಸಂಚಾರ ಶನಿವಾರ ಮತ್ತು ಭಾನುವಾರದಂದು ಕಾರ್ಯನಿರ್ವಹಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಿಯಾಯಿತಿ ಅಂತ್ಯದ ನಂತರ, ಸ್ಥಳೀಯ ಎಸಿ ರೈಲಿನ ದರ ಪ್ರಥಮ ದರ್ಜೆ(ಫಸ್ಟ್ ಕ್ಲಾಸ್ ಎಸಿ) 1.3 ಪಟ್ಟು ಹೆಚ್ಚಾಗಿದೆ. ಈಗ ಸಾಪ್ತಾಹಿಕ ಪಾಸ್ಗೆ ನೀವು 25 ರಿಂದ 80 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. 15 ದಿನಗಳ ಪಾಸ್ ಗಳಿಗಾಗಿ 35 ರಿಂದ 125 ರೂ. ಹೆಚ್ಚು ಪಾವತಿಸಬೇಕಾಗುತ್ತದೆ. ಇದೇ ವೇಳೆ ತಿಂಗಳ ಪಾಸ್ ಪಡೆಯಲು 50 ರೂ. ನಿಂದ 165 ರೂ. ಹೆಚ್ಚಾಗಿದೆ.

ಎಸಿ ಲೋಕಲ್ನ ಬಾಡಿಗೆ ಪ್ರಥಮ ದರ್ಜೆಯ ಫೇರ್ನಿಂದ 1.3 ಪಟ್ಟು ಹೆಚ್ಚಾಗಿದೆ. ಈಗ ಸಾಪ್ತಾಹಿಕ ಪಾಸ್ಗೆ ನೀವು 25 ರಿಂದ 80 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ, 15 ಪೈಸೆ 35 ರಿಂದ 125 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ, ಆದರೆ ಒಂದು ತಿಂಗಳು ನೀವು 50 ರೂಪಾಯಿಗಳಿಗೆ 165 ಪಾವತಿಸಬೇಕಾಗುತ್ತದೆ.

ಪಶ್ಚಿಮ ರೈಲ್ವೆಯ ಪ್ರಕಾರ, ಈವರೆಗೆ 58 ಲಕ್ಷ ಪ್ರಯಾಣಿಕರು ಸ್ಥಳೀಯ ಎಸಿ ರೈಲಿನಲ್ಲಿ ಪ್ರಯಾನಿಸುತ್ತಿದ್ದಾರೆ. ಫ್ರೀಕ್ವೆನ್ಸಿ ಹೆಚ್ಚಾಗಬೇಕೆಂಬುದು ಪ್ರಯಾಣಿಕರ ಬೇಡಿಕೆಯಾಗಿದೆ ಎಂದು ರೈಲ್ವೆ ತಿಳಿಸಿದೆ. ಪ್ರಸ್ತುತ, ಚರ್ಚ್ ಗೇಟ್ ಮತ್ತು ವಿರಾರ್ ನಡುವೆ 12 ಸ್ಥಳೀಯ ಎಸಿ ರೈಲ್ವೆ ಚಾಲನೆಯಲ್ಲಿವೆ.

Trending News