ಇನ್ನು ರೈಲಿನಲ್ಲಿ ಪ್ರಯಾಣಿಸುವಾಗ ಜಗತ್ತಿನ ಎಲ್ಲ ಮ್ಯಾಗಜಿನ್ ಗಳನ್ನು ಓದಬಹುದು !

ಇನ್ನು ಮುಂದೆ ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದಲ್ಲಿ ಜಗತ್ತಿನ ನ್ಯೂಸ್ ಪೇಪರ್ ಹಾಗೂ ಮ್ಯಾಗಜೀನ್ ಗಳನ್ನು ಓದಬಹುದು ಈ ಹೀಗೊಂದು ಸೌಲಭ್ಯ ಇನ್ನು ಮುಂದೆ ನಿಮಗೆ ಲಭ್ಯವಾಗಲಿದೆ.

Last Updated : Feb 6, 2019, 05:43 PM IST
ಇನ್ನು ರೈಲಿನಲ್ಲಿ ಪ್ರಯಾಣಿಸುವಾಗ ಜಗತ್ತಿನ ಎಲ್ಲ ಮ್ಯಾಗಜಿನ್ ಗಳನ್ನು ಓದಬಹುದು ! title=

ನವದೆಹಲಿ: ಇನ್ನು ಮುಂದೆ ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದಲ್ಲಿ ಜಗತ್ತಿನ ನ್ಯೂಸ್ ಪೇಪರ್ ಹಾಗೂ ಮ್ಯಾಗಜೀನ್ ಗಳನ್ನು ಓದಬಹುದು ಈ ಹೀಗೊಂದು ಸೌಲಭ್ಯ ಇನ್ನು ಮುಂದೆ ನಿಮಗೆ ಲಭ್ಯವಾಗಲಿದೆ.

ಈಗ ಭಾರತೀಯ ರೈಲ್ವೆ Magzter ನೊಂದಿಗೆ ಟೈ ಅಪ್ ಮಾಡಿಕೊಂಡಿದ್ದು, ಈ ಯೋಜನೆ ಅಡಿಯಲ್ಲಿ ಇನ್ನು ಮುಂದೆ ನಿಮಗೆ 5000 ಕ್ಕೂ ಅಧಿಕ ಬೆಸ್ಟ್ ಸೇಲ್ಲಿಂಗ್ ಮ್ಯಾಗಜೀನ್ ಹಾಗೂ ಆಯ್ದ ನ್ಯೂಸ್ ಪೇಪರ್ ಗಳು ನಿಮ್ಮ ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ ನಲ್ಲಿ ದೊರೆಯಲಿವೆ.ಈ ನ್ಯೂಸ್ ಪೇಪರ್ ಅಥವಾ ಮ್ಯಾಗಜೀನ್ ಗಳು 40 ವಿಭಾಗಗಳಲ್ಲಿ ಇರಲಿವೆ ಎಂದು ತಿಳಿದುಬಂದಿದೆ.

ಈಗ ಈ ಸೌಲಭ್ಯ irctc.Co.In ನಲ್ಲಿ ಲಭ್ಯವಿದೆ.ಇದಕ್ಕೆ ಬಳಕೆದಾರರು ಒಂದು ದಿನಕ್ಕೆ 20 ರೂಗಳಂತೆ ವರ್ಷಕ್ಕೆ 499 ರೂಗಳನ್ನು ಪಾವತಿಸುವುದರ ಮೂಲಕ ಪಡೆಯಬಹುದಾಗಿದೆ. 
 

Trending News