Job Alert: ಭಾರತೀಯ ರೈಲ್ವೆಯಲ್ಲಿ ಉದ್ಯೋಗಾವಕಾಶ!

ರೈಲ್ವೆಯ ಹಲವು ಪೋಸ್ಟ್ಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 9, 2019 ಕೊನೆ ದಿನವಾಗಿದೆ.  

Last Updated : Jan 31, 2019, 09:59 AM IST
Job Alert: ಭಾರತೀಯ ರೈಲ್ವೆಯಲ್ಲಿ ಉದ್ಯೋಗಾವಕಾಶ! title=

ನವದೆಹಲಿ: ಉದ್ಯೋಗಕ್ಕಾಗಿ ಹುಡುಗುತ್ತಿರುವವರಿಗೆ ರೈಲ್ವೇ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ ಇದೆ. ವೆಸ್ಟ್ ಸೆಂಟ್ರಲ್ ರೈಲ್ವೆ(ಪಶ್ಚಿಮ ಮಧ್ಯ ರೈಲ್ವೆ) ಅಪ್ರೆಂಟಿಸ್ ಪೋಸ್ಟ್ಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 1561 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆನ್ಲೈನ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 9, 2019 ಕೊನೆ ದಿನವಾಗಿದೆ.

ಇತ್ತೀಚೆಗೆ, ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಸೇರಿದಂತೆ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದೇ(ಜನವರಿ 31) ಕೊನೆ ದಿನವಾಗಿದೆ. ಈ ಹುದ್ದೆಗಾಗಿ ಒಟ್ಟು 13,487 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪಶ್ಚಿಮ ಮಧ್ಯ ರೈಲ್ವೆ(Railway Recruitment 2019)

  • ಪೋಸ್ಟ್ ಹೆಸರು: ರೈಲ್ವೆ ಅಪ್ರೆಂಟಿಸ್
  • ಪೋಸ್ಟ್ಗಳ ಸಂಖ್ಯೆ- 1561
  • ಅರ್ಹತೆ - 12ನೇ ತರಗತಿ ಮತ್ತು ಐಟಿಐ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 9 ಫೆಬ್ರವರಿ 2019

ರೈಲ್ವೆ ನೇಮಕಾತಿ ಮಂಡಳಿ 2019 (RRB JE Recruitment 2019)

  • ಪೋಸ್ಟ್ಗಳ ಹೆಸರು: ಜೂನಿಯರ್ ಇಂಜಿನಿಯರ್, ಡಿಪೋ ಮೆಟೀರಿಯಲ್ಸ್ ಅಧೀಕ್ಷಕ, ರಾಸಾಯನಿಕ ಮತ್ತು ಮೆಟಲರ್ಜಿಕಲ್ ಸಹಾಯಕ
  • ಅರ್ಹತೆ: B.Tech/B.E, Diploma, PG Diploma, B.Sc, BCA
  • ಒಟ್ಟು ಪೋಸ್ಟ್ಗಳು: 13,487
  • ಸಂಬಳ- 35400 ರೂ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/01/2019

ಉತ್ತರ ರೈಲ್ವೆಯಲ್ಲಿ ಜೂನಿಯರ್ ಇಂಜಿನಿಯರ್, ಟೆಕ್ನೀಶಿಯನ್, ಕ್ಲರ್ಕ್ ಹುದ್ದೆಗಳು ಖಾಲಿ

  • ಉತ್ತರ ರೈಲ್ವೇ(Northern Railway)
  • ಅರ್ಹತೆ: ಪದವೀಧರರು
  • ಕೆಲಸದ ಸ್ಥಳ: ನವ ದೆಹಲಿ
  • ಪೋಸ್ಟ್ಗಳ ಸಂಖ್ಯೆ: 52

ಉತ್ತರ ರೈಲ್ವೇ ಅಪ್ರೆಂಟಿಸ್

  • ಪೋಸ್ಟ್ ಹೆಸರು-ಅಪ್ರೆಂಟಿಸ್ 
  • ಪೋಸ್ಟ್ಗಳ ಸಂಖ್ಯೆ - 1092 ಪೋಸ್ಟ್ಗಳು
  • ಅಪ್ಲಿಕೇಶನ್ ಕೊನೆಯ ದಿನಾಂಕ - 31 ಜನವರಿ 2019
  • ಅರ್ಹತೆ - 10ನೇ ತರಗತಿ ಮತ್ತು ಐಟಿಐ

Trending News