ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜನರಿಗೆ ಸ್ಪಂದಿಸುವ ಕೆಲಸ ಆಗುತ್ತಿಲ್ಲ ಎಂದು ಮೂದಲಿಸಿ ಬಿಜೆಪಿಗೆ ಹಾರಿ ಬಂದಿದ್ದ ಸುಧಾಕರ್ ಈಗ ಸ್ವತಃ ಸಚಿವರಾಗಿದ್ದಾರೆ. ಸ್ವತಃ ವೈದ್ಯರಾಗಿರುವ ಕಾರಣಕ್ಕೆ ಇವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯಂಥ ಮಹತ್ವದ ಖಾತೆಯನ್ನೇ ಕೊಡಲಾಗಿದೆ.
ಭಾನುವಾರ ನಡೆದ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ರಾಜ್ಯದ 5.3 ಕೋಟಿ ಜನರಿಗೆ ತಲಾ 3 ಮಾಸ್ಕ್ಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆನೇಕಲ್ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ದಪ್ಪ ಮೆಣಸಿನಕಾಯಿ ಹಾಗೂ ಬಜ್ಜಿ ಮೆಣಸಿನಕಾಯಿ ತೋಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಸಿದ್ದೇಶ್ ಎಂಬ ರೈತನ ಸಮಸ್ಯೆ ಆಲಿಸಿದರು.
ದೇಶದಲ್ಲಿ ರೌದ್ರಾವತಾರ ತಾಳಿರುವ ಕೊರೋನಾ ಪರಿಸ್ಥಿತಿ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳ ಲ ಜತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತಿಳಿಸಿಕೊಟ್ಟಿದ್ದಾರೆ.
ಲಾಕ್ಡೌನ್ ಘೋಷಿಸಿ 14 ದಿನಗಳಾದರೂ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಏತನ್ಮಧ್ಯೆ ಏಪ್ರಿಲ್ 14ರ ನಂತರವೂ ಲಾಕ್ಡೌನ್ ಮುಂದುವರೆಸಬೇಕೇ ಬೇಡವೇ ಎಂಬ ವಿಚಾರವಾಗಿ ಪ್ರಧಾನಿ ಮೋದಿ ಮೊನ್ನೆ ಸರ್ವಪಕ್ಷಗಳ ಸಭೆ ನಡೆಸಿದರು.
ಮುಖ್ಯಮಂತ್ರಿಗಳ ಸಭೆಗೆ ಎರಡು ದಿನ ಬಾಕಿ ಇರುವಂತೆಯೇ ಒರಿಸ್ಸಾ ಸರ್ಕಾರ ಲಾಕ್ಡೌನ್ ಅನ್ನು ಏಪ್ರಿಲ್ 30ರವರೆಗೆ ವಿಸ್ತರಣೆ ಮಾಡಿತ್ತು. ಆ ಮೂಲಕ ಲಾಕ್ಡೌನ್ ಮುಂದುವರೆಸಿದ ಮೊದಲ ರಾಜ್ಯವಾಗಿತ್ತು.
ಕೊರೋನಾ ಹೊಡೆತಕ್ಕೆ ಸಿಲುಕಿ ಇಟಲಿ, ಅಮೆರಿಕ, ಸ್ಪೇನ್ ದೇಶಗಳು ಅಕ್ಷರಶಃ ನಲುಗಿ ಹೋಗಿವೆ. ಇಟಲಿ ಸೋಂಕು ಪೀಡಿತರ ಮತ್ತು ಸತ್ತವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಇಟಲಿಯಲ್ಲಿ ಸೋಂಕಿನಿಂದ 18,279 ಮಂದಿ ಮೃತಪಟ್ಟಿದ್ದರೆ, ಪ್ರಕರಣಗಳ ಸಂಖ್ಯೆ 1,43,626ಕ್ಕೆ ಏರಿಕೆಯಾಗಿದೆ.
ಮಹಾಮಾರಿ ಕೊರೋನಾವೈರಸ್ ವಿರುದ್ಧದ ಹೋರಾಟದ ಹಾದಿಯಲ್ಲಿ ಹಣಕಾಸು ಸಚಿವಾಲಯವು ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ, ಇದರ ಅಡಿಯಲ್ಲಿ ಕರೋನ ವಿರುದ್ಧ ಹೋರಾಡಲು ಕೆಲವು ವಸ್ತುಗಳನ್ನು ಆಮದು ಮಾಡಿಕೊಳ್ಳುವಲ್ಲಿ ಮೂಲಭೂತ ಕಸ್ಟಮ್ ಸುಂಕ ಮತ್ತು ಆರೋಗ್ಯ ಸೆಸ್ಗೆ ಸರ್ಕಾರ ವಿನಾಯಿತಿ ನೀಡುತ್ತದೆ.
ಲಾಕ್ಡೌನ್ (Lockdown) ಮುಂದುವರೆಸಿದ ಮೊದಲ ರಾಜ್ಯ ಒರಿಸ್ಸಾ ಆಗಿದ್ದು ಸಿಎಂ ನವೀನ್ ಪಟ್ನಾಯಕ್ ಲಾಕ್ಡೌನ್ ಮುಂದುವರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದಾರೆ.
ಸ್ಥಳೀಯ ವೈದ್ಯಕೀಯ ಉಪಕರಣಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಆಂಧ್ರಪ್ರದೇಶ ಮೆಡ್ಟೆಕ್ ವಲಯ (AMTZ) ತಯಾರಿಸಿದ ಕರೋನವೈರಸ್ ಕೋವಿಡ್ -19 ಪರೀಕ್ಷಾ ಕಿಟ್ಗಳನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಏಪ್ರಿಲ್ 8 ಬಿಡುಗಡೆ ಮಾಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.