Viral Video: ಸಫಾರಿ ವೇಳೆ ಕಾಡಿನ ರಾಜ ಸಿಂಹವನ್ನು ಪ್ರವಾಸಿಗನೊಬ್ಬ ಮುಟ್ಟಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೀನ್ಯಾ ದೇಶದ ಮಸೈಮಾರಾದಲ್ಲಿ ಸಫಾರಿ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಓಪನ್ ಜೀಪ್‌ನ ಸಫಾರಿ ವೇಳೆಯೇ ಭಾರತೀಯ ಪ್ರವಾಸಿಗನೊಬ್ಬ ಸಿಂಹವನ್ನು ಸ್ಪರ್ಶಿಸಿದ್ದು, ಆತನ ಈ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಮಸೈಮಾರಾಕ್ಕೆ ಭೇಟಿ ನೀಡಿದ್ದ ಭಾರತೀಯ ಪ್ರವಾಸಿಗನೊಬ್ಬ ಸಫಾರಿ ವೇಳೆ, ವಾಹನದ ಪಕ್ಕವೇ ಮಲಗಿದ್ದ ಸಿಂಹಕ್ಕೆ ಡಿಸ್ಟರ್ಬ್ ಮಾಡಿದ್ದಾನೆ. ಜೀಪ್‌ನ ತೆರೆದ ಕಿಟಕಿಯಿಂದ ಕೈ ಚಾಚಿ ಆತ ಸಿಂಹವನ್ನು ಸ್ಪರ್ಶಿಸಿದ್ದಾನೆ. ಎರಡು ಬಾರಿ ಆತನ ಈ ಕುಚೇಷ್ಟೆಗೆ ಸುಮ್ಮನಿದ್ದ ಸಿಂಹ ೩ನೇ ಬಾರಿ ಗುರ್... ಅಂತಾ ಘರ್ಜಿಸಿದೆ. ಸಿಂಹದ ಘರ್ಜನೆಗೆ ಭಾರತೀಯ ಪ್ರವಾಸಿಗ ಸೇರಿದಂತೆ ವಾಹನದಲ್ಲಿದ್ದ ಇತರ ಪ್ರವಾಸಿಗರು ಸಹ ಹೆದರಿ ಜೀಪ್‌ನೊಳಗೆ ಗಪ್ ಚುಪ್ ಆಗಿ ಕುಳಿತುಕೊಳ್ಳುತ್ತಾರೆ. ಈ ವೇಳೆ ಸಿಂಹವು ಶಾಂತವಾಗಿದ್ದರಿಂದ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.
Take a look at this idiot who actually touched the lion, & his foolish friends in another car opposite to him made this clip!!
Look at him giving a thumbs up after this atrocious act!After the outrage & reactions,
a safari friend of mine who posted it was asked to get it… pic.twitter.com/RyGsjrknXl— Meenakshi Sharan (@meenakshisharan) June 22, 2024
ಇದನ್ನೂ ಓದಿ: Viral: ಮಾವುತನ ಪ್ರಾಣ ತೆಗೆದ ಮರಿ ಆನೆ, ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಬೀಕರ ದೃಶ್ಯ
ಈ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮೀನಾಕ್ಷಿ ಶರಣ್ ಎಂಬುವರು, ಸಿಂಹವನ್ನು ಮುಟ್ಟಿದ ಭಾರತೀಯ ಪ್ರವಾಸಿಗನ ವರ್ತನೆಗೆ ಕಿಡಿಕಾರಿದ್ದಾರೆ. ಈ ಬಗ್ಗೆ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಅವರು, ʼಭಾರತೀಯ ಪ್ರವಾಸಿಗರೆ, ಬೇರೆ ದೇಶದಲ್ಲಿರುವಾಗ ನೀವು ಭಾರತದ 144 ಕೋಟಿ ಜನರನ್ನು ಪ್ರತಿನಿಧಿಸುತ್ತೀರಿ ಎಂಬುದು ನೆನಪಿರಲಿ. ನಿಮ್ಮ ಅಸಭ್ಯತೆ, ಅನಾಗರಿಕ ನಡವಳಿಕೆ/ಚಟುವಟಿಕೆಯಿಂದ ಭಾರತಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬುದನ್ನು ಮರೆಯಬೇಡಿ!ʼ ಅಂತಾ ಖಾರವಾಗಿ ಹೇಳಿದ್ದಾರೆ.
Oh Indian travellers,
while in any other country, don’t forget that you represent all 1,441,303,328 citizens of Bharat & any uncouth, uncivilized behavior/ activity of yours belittles us all!In Kenya on the safari, we’ve been encountering many Indians behaving irresponsibly-… pic.twitter.com/cKhkdyLTtt
— Meenakshi Sharan (@meenakshisharan) June 22, 2024
ತಮ್ಮ ಮತ್ತೊಂದು ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಅವರು, ʼಸಿಂಹವನ್ನು ಮುಟ್ಟಿದ ಈ ಮೂರ್ಖನನ್ನು ನೋಡಿ. ಆತನ ಎದುರಿನ ಇನ್ನೊಂದು ಕಾರಿನಲ್ಲಿರುವ ಅವನ ಮೂರ್ಖ ಸ್ನೇಹಿತರು ಈ ವಿಡಿಯೋ ಮಾಡಿದ್ದಾರೆ!! ಈ ಘನಂದಾರಿ ಕೆಲಸದ ನಂತರ ಆತ ಕೈ ಎತ್ತಿ ತೋರಿಸುತ್ತಿರುವುದು ನೋಡಿ.. ಹೀಗೆ ಮಾಡಲು ನಿಮಗೆ ನಾಚಿಕೆಯಾಗಬೇಕು!ʼ ಅಂತಾ ಟೀಕಿಸಿದ್ದಾರೆ.
ಇದನ್ನೂ ಓದಿ: ಭಗವದ್ಗೀತೆ ಉಲ್ಲೇಖಿಸಿ ಸಂಖ್ಯೆ 18 ರ ಮಹತ್ವ ವಿವರಿಸಿದ ಪ್ರಧಾನಿ ಮೋದಿ
ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಲಕ್ಷಾಂತರ ಜನರು ಈ ವಿಡಿಯೋ ನೋಡಿದ್ದು, ಸಿಂಹವನ್ನು ಮುಟ್ಟಿದ ಭಾರತೀಯ ಪ್ರವಾಸಿಗ ವಿರುದ್ಧ ಕಿಡಿಕಾರಿದ್ದಾರೆ. ಈ ರೀತಿ ಭಾರತವಷ್ಟೇ ಅಲ್ಲ ಬೇರೆ ಯಾವುದೇ ದೇಶದಲ್ಲಿಯೂ ಮಾಡಬಾರದು. ಏನಾದರೂ ಅನಾಹುತವಾದರೆ ಯಾರು ಹೊಣೆ? ಈ ರೀತಿಯ ನಿಮ್ಮ ಹುಚ್ಚಾಟದಿಂದ ಭಾರತಕ್ಕೆ ಕೆಟ್ಟ ಹೆಸರು ಬರುತ್ತದೆ. ಇನ್ನುಂದೆಯಾದರೂ ಬುದ್ದಿ ಕಲಿಯಿರಿʼ ಅಂತಾ ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ ಕೀನ್ಯಾ ದೇಶದಲ್ಲಿರುವ ಈ ಮಸೈಮಾರ ವನ್ಯಜೀವಿ ಛಾಯಾಗ್ರಾಹಕರ ಸ್ವರ್ಗವೆಂದೇ ಖ್ಯಾತಿಯಾಗಿದೆ. ಪ್ರತಿವರ್ಷ ಭಾರತೀಯರು ಸೇರಿದಂತೆ ವಿವಿಧ ದೇಶಗಳ ಲಕ್ಷಾಂತರ ಪ್ರವಾಸಿಗಳು ಈ ಮಸೈಮಾರಕ್ಕೆ ಪ್ರವಾಸ ಹೋಗುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.