ಲಾಕ್​ಡೌನ್ ಮುಂದುವರೆಸುವ ಬಗ್ಗೆ ಇಂದು ಸಿಎಂಗಳ ಜೊತೆ ಪಿಎಂ ಚರ್ಚೆ

ಮುಖ್ಯಮಂತ್ರಿಗಳ ಸಭೆಗೆ ಎರಡು ದಿನ ಬಾಕಿ ಇರುವಂತೆಯೇ ಒರಿಸ್ಸಾ  ಸರ್ಕಾರ ಲಾಕ್​ಡೌನ್​ ಅನ್ನು ಏಪ್ರಿಲ್​ 30ರವರೆಗೆ ವಿಸ್ತರಣೆ ಮಾಡಿತ್ತು. ಆ ಮೂಲಕ ಲಾಕ್​ಡೌನ್ ಮುಂದುವರೆಸಿದ ಮೊದಲ ರಾಜ್ಯವಾಗಿತ್ತು. 

Last Updated : Apr 11, 2020, 06:45 AM IST
ಲಾಕ್​ಡೌನ್ ಮುಂದುವರೆಸುವ ಬಗ್ಗೆ ಇಂದು ಸಿಎಂಗಳ ಜೊತೆ ಪಿಎಂ ಚರ್ಚೆ title=

ನವದೆಹಲಿ: ಮಾರಕ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮಾರ್ಚ್ 24ರಿಂದ ಏಪ್ರಿಲ್ 14ರವರೆಗೆ ಒಟ್ಟು 21 ದಿನಗಳ ಕಾಲ ದೇಶವನ್ನು ಲಾಕ್​ಡೌನ್​ ಮಾಡಲಾಗಿತ್ತು. ಆದರೆ ಲಾಕ್​ಡೌನ್ ನಡುವೆಯೂ ಕೊರೊನಾವೈರಸ್  (Coronavirus) ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಆದುದರಿಂದ  ಲಾಕ್​​ಡೌನ್ (Lockdown)  ಅನ್ನು ಮುಂದುವರೆಸಬೇಕೋ ಅಥವಾ ತೆರವುಗೊಳಿಸಬೇಕೋ ಎಂದು ನಿರ್ಧರಿಸಲು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಮಾಲೋಚನೆ ನಡೆಸಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಈ ಮಹತ್ವದ ಸಭೆಯಲ್ಲಿ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್​ಡೌನ್​ ವಿಸ್ತರಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ತೀರ್ಮಾನದ ಬಳಿಕ ಇವತ್ತು ಅಥವಾ ನಾಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

Covid-19 ಸಂತ್ರಸ್ತರಿಗೆ ನೆರವಿನ ಹಸ್ತ, 'ಎನ್‌ಸಿಸಿ ಯೋಗದಾನ'ಕ್ಕೆ ಚಾಲನೆ

ಮುಖ್ಯಮಂತ್ರಿಗಳ ಸಭೆಗೆ ಎರಡು ದಿನ ಬಾಕಿ ಇರುವಂತೆಯೇ ಒರಿಸ್ಸಾ  ಸರ್ಕಾರ ಲಾಕ್​ಡೌನ್​ ಅನ್ನು ಏಪ್ರಿಲ್​ 30ರವರೆಗೆ ವಿಸ್ತರಣೆ ಮಾಡಿತ್ತು. ಆ ಮೂಲಕ ಲಾಕ್​ಡೌನ್ ಮುಂದುವರೆಸಿದ ಮೊದಲ ರಾಜ್ಯವಾಗಿತ್ತು. ನಿನ್ನೆ ಪಂಜಾಬ್ ಕೂಡ ಏಪ್ರಿಲ್​ 30ರವರೆಗೆ ವಿಸ್ತರಣೆ ಮಾಡಿದೆ.‌ ತೆಲಂಗಾಣದ ಕೆ.ಚಂದ್ರಶೇಖರ್​ ರಾವ್​, ಛತ್ತೀಸ್ಘಡ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಮತ್ತಿತರರು ಕೂಡ ಲಾಕ್​ಡೌನ್​ ಮುಂದುವರೆಸುವಂತೆ ಬಲವಾಗಿ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಲಾಕ್​ಡೌನ್ ಮುಂದುವರೆಸುವ ಸಾಧ್ಯತೆಯೇ ಹೆಚ್ಚಾಗಿದೆ.

ಎಪ್ರಿಲ್ 15ರಿಂದ ರೈಲು ಸಂಚಾರದ ಬಗ್ಗೆ ಭಾರತೀಯ ರೈಲ್ವೆಯ ಮಹತ್ವದ ಹೇಳಿಕೆ

ದೇಶದ ಆರ್ಥಿಕತೆಗೆ ಪೆಟ್ಟು ಬೀಳಲಿದೆ ಎಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ. ಲಾಕ್​ಡೌನ್​ನಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಭಾರೀ ನಷ್ಟ ಉಂಟಾಗಿದೆ. ಆದರೆ ಜನರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಒಂದು ವೇಳೆ ಲಾಕ್​ಡೌನ್​ ಮುಂದುವರೆಸಿದರೂ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಕೆಲವು ವಲಯಗಳನ್ನು ನಿರ್ಬಂಧಮುಕ್ತಗೊಳಿಸಬೇಕು. ಅಗತ್ಯ ವಸ್ತುಗಳ ಸರಬರಾಜು ಹೊರತುಪಡಿಸಿ, ಉಳಿದ ಎಲ್ಲ ಅಂತರರಾಜ್ಯ ಸಂಪರ್ಕ ಸೇವೆ ನಿರ್ಬಂಧ ಮುಂದುವರೆಸಬೇಕು ಎಂಬ ಸಲಹೆಗಳು ಕೇಳಿಬರುತ್ತಿವೆ. ಎಲ್ಲವನ್ನೂ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

COVID-19: 13 ಲಕ್ಷ ಉದ್ಯೋಗಿಗಳನ್ನು ರಕ್ಷಿಸಲು ಪ್ರೋಟೋಕಾಲ್ ಸಿದ್ಧಪಡಿಸಿದ ಭಾರತೀಯ ರೈಲ್ವೆ

ಇತ್ತೀಚೆಗೆ ನಡೆದ ಸಂಸತ್ತಿನ ಸಭಾನಾಯಕರ ಸಭೆಯಲ್ಲೂ ದೇಶಾದ್ಯಂತ ಜಾರಿಗೊಳಿಸಲಾರುವ ಲಾಕ್​ಡೌನ್​ಅನ್ನು ಒಂದೇ ಬಾರಿಗೆ ತೆಗೆದುಹಾಕುವುದು ಸೂಕ್ತವಲ್ಲ ಹಂತಹಂತವಾಗಿ ನಿರ್ಬಂಧ ಸಡಿಲಿಸುವಂತೆ ವಿರೋಧ ಪಕ್ಷಗಳ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
 

Trending News