COVID-19 ಎದುರಿಸಲು ಪ್ರತಿ ವ್ಯಕ್ತಿಗೆ 3 ಮಾಸ್ಕ್‌ಗಳನ್ನು ನೀಡಲು ಮುಂದಾಗಿದೆ ಈ ರಾಜ್ಯ ಸರ್ಕಾರ

ಭಾನುವಾರ ನಡೆದ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ರಾಜ್ಯದ 5.3 ಕೋಟಿ ಜನರಿಗೆ ತಲಾ 3 ಮಾಸ್ಕ್‌ಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Last Updated : Apr 13, 2020, 08:15 AM IST
COVID-19 ಎದುರಿಸಲು ಪ್ರತಿ ವ್ಯಕ್ತಿಗೆ 3  ಮಾಸ್ಕ್‌ಗಳನ್ನು ನೀಡಲು ಮುಂದಾಗಿದೆ ಈ ರಾಜ್ಯ ಸರ್ಕಾರ title=
Image courtesy: Reuters

ಅಮರಾವತಿ: ಆಂಧ್ರಪ್ರದೇಶದಲ್ಲಿ ಮೂರನೇ ಸಮೀಕ್ಷೆ ಚುರುಕುಗೊಂಡಿದ್ದು, ರಾಜ್ಯದ 5.3 ಕೋಟಿ ಜನರಿಗೆ ತಲಾ 3 ಮಾಸ್ಕ್‌ಗಳನ್ನು ವಿತರಿಸುವಂತೆ ಭಾನುವಾರ ನಡೆದ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್  (YS-Jagan-mohan-reddy) ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು  ಸರ್ಕಾರವು 16 ಕೋಟಿ ಮುಖವಾಡಗಳನ್ನು ರಾಜ್ಯ ಜನರಿಗೆ ವಿತರಿಸಲಿದೆ.

COVID-19 ಪ್ರಚಲಿತದಲ್ಲಿರುವ ವಲಯಗಳಲ್ಲಿ ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಿರುವ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ  (Jagan Mohan Reddy)  ರಾಜ್ಯದ ಕ್ಲಸ್ಟರ್‌ಗಳು, ಕೆಂಪು ವಲಯ ಮತ್ತು ಹಾಟ್‌ಸ್ಪಾಟ್ ಪ್ರದೇಶಗಳ ಬಗ್ಗೆ ವಿವರಗಳನ್ನು ಕೋರಿದರು. ಹಿರಿಯ ನಾಗರಿಕರು, ಬಿಪಿ, ಮಧುಮೇಹ ಮತ್ತು ಇತರ ಕಾಯಿಲೆಗಳನ್ನು ಹೊಂದಿರುವವರಿಗೆ ವೈರಸ್ ಹರಡುವ ಭೀತಿ ಇದ್ದು ಅವರತ್ತ ಹೆಚ್ಚಿನ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

COVID-19: ಸ್ಥಳೀಯ ಪರೀಕ್ಷಾ ಕಿಟ್‌ಗಳನ್ನು ಬಿಡುಗಡೆ ಮಾಡಿದ ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ

ರಾಜ್ಯದಲ್ಲಿ ವೈರಸ್ ಸೋಂಕಿನ ಮಟ್ಟವನ್ನು ನಿರ್ಣಯಿಸಲು, ಆರೋಗ್ಯ ಇಲಾಖೆಯು COVID-19 ಪ್ರಚಲಿತ ವಲಯಗಳಿಗೆ ಆದ್ಯತೆ ನೀಡಲಿದ್ದು, ರಾಜ್ಯದಾದ್ಯಂತ 45,000 ಪರೀಕ್ಷೆಗಳನ್ನು ನಡೆಸಲಿದೆ. ಗುಣಾತ್ಮಕ ಚಿಕಿತ್ಸೆಯನ್ನು ಈಡೇರಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು COVID-19 ಚಿಕಿತ್ಸೆಯಲ್ಲಿ ಪ್ರತಿಯೊಬ್ಬ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಲಸೆ ಕಾರ್ಮಿಕರಿಗಾಗಿ ಕ್ವಾರೆಂಟೈನ್ ನಿರ್ಮಾಣಕ್ಕೆ ಮುಂದಾದ ಕರ್ನಾಟಕ, ಆಂಧ್ರ ಸರ್ಕಾರ

ಭಾನುವಾರ ಬೆಳಿಗ್ಗೆ 9 ಗಂಟೆ ಹೊತ್ತಿಗೆ ರಾಜ್ಯದಲ್ಲಿ 417 ಧನಾತ್ಮಕ  ಕೊರೊನಾವೈರಸ್  (Coronavirus) COVID-19 ಸಕ್ರಿಯವಾಗಿದೆ. ಸಕ್ರಿಯ ಪ್ರಕರಣಗಳಲ್ಲಿ 13 ವಿದೇಶದಿಂದ ಮರಳಿದವರು, 12 ಮಂದಿ ವಿದೇಶದಿಂದ ಮರಳಿದವರಿಂದಾಗಿ ಸೋಂಕಿಗೆ ಒಳಗಾದವರು. 199 ಮಂದಿ ಮಾರ್ಕಾಜ್ ನಿಂದ ಹಿಂದಿರುಗಿದವರು, 161 ಮಂದಿ ಮಾರ್ಕಾಜ್ ಹಿಂದಿರುಗಿದವರೊಂದಿಗೆ ಸಂಪರ್ಕಕ್ಕೆ ಬಂದವರು ಮತ್ತು 32 ಪ್ರಕರಣಗಳು ಇತರ ರಾಜ್ಯಗಳಿಂದ ಹಿಂದಿರುಗಿದವರು ಮತ್ತು ಇತರ ವಿಧಾನಗಳಿಂದ ಕಾಣಿಸಿಕೊಂಡಿದೆ ಎಂದು ಉಲ್ಲೇಖಿಸಲಾಗಿದೆ.

ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಭಾರತದಲ್ಲಿ ಒಟ್ಟು ಕರೋನವೈರಸ್ ಪ್ರಕರಣಗಳು 8,447 ಆಗಿದ್ದು, ಅದರಲ್ಲಿ 7409 ಸಕ್ರಿಯ ಪ್ರಕರಣಗಳು, 764 ಡಿಸ್ಚಾರ್ಜ್ ಮತ್ತು 1 ವಲಸೆ ರೋಗಿಗಳು ಮತ್ತು ಸಾವಿನ ಸಂಖ್ಯೆ 273 ರಷ್ಟಿದೆ ಎಂದು ತಿಳಿದುಬಂದಿದೆ.

Trending News