ರೈತರರನ್ನು ಕೈಬಿಡಬೇಡಿ: ಪ್ರಧಾನಿ ಮತ್ತು ಮುಖ್ಯಮಂತ್ರಿಗೆ ಡಿ.ಕೆ.‌ ಶಿವಕುಮಾರ್ ಮನವಿ

ಆನೇಕಲ್ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ದಪ್ಪ ಮೆಣಸಿನಕಾಯಿ ಹಾಗೂ ಬಜ್ಜಿ ಮೆಣಸಿನಕಾಯಿ ತೋಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಸಿದ್ದೇಶ್ ಎಂಬ ರೈತನ ಸಮಸ್ಯೆ ಆಲಿಸಿದರು. 

Last Updated : Apr 13, 2020, 07:23 AM IST
ರೈತರರನ್ನು ಕೈಬಿಡಬೇಡಿ: ಪ್ರಧಾನಿ ಮತ್ತು ಮುಖ್ಯಮಂತ್ರಿಗೆ ಡಿ.ಕೆ.‌ ಶಿವಕುಮಾರ್ ಮನವಿ title=

ಬೆಂಗಳೂರು: ಸದ್ಯದ ಸಂಕಷ್ಟದ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿರುವ ನಾವು ರಾಜಕೀಯ ಬದಿಗಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಆದರೆ ಸರ್ಕಾರಗಳು ರೈತರನ್ನು ಕೈಬಿಡಬಾರದು. ಅವರ ನೆರವಿಗೆ ನಿಲ್ಲಬೇಕು ಎಂದು ಕೈ ಮುಗಿದು ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ  ಡಿ.ಕೆ. ಶಿವಕುಮಾರ್ (DK Shivakumar) ಮನವಿ ಮಾಡಿಕೊಂಡಿದ್ದಾರೆ.

ರೈತರಿಗೆ ತೊಂದರೆಯಾಗದಂತೆ ಸರ್ಕಾರ ಕೈಗೊಂಡಿದೆ ಈ ಮಹತ್ವದ ನಿರ್ಧಾರ

ಆನೇಕಲ್ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ದಪ್ಪ ಮೆಣಸಿನಕಾಯಿ ಹಾಗೂ ಬಜ್ಜಿ ಮೆಣಸಿನಕಾಯಿ ತೋಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಸಿದ್ದೇಶ್ ಎಂಬ ರೈತನ ಸಮಸ್ಯೆ ಆಲಿಸಿದರು. ಈ ರೈತನಿಗೆ 10 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಕೇಳಿ ಬೇಸರ ವ್ಯಕ್ತಪಡಿಸಿ, ರೈತರನ್ನು ಕಾಪಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದರು.

ಇರುವ ಕಡೆಯೇ ಸಂವಿಧಾನ ಓದುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಲು ಡಿಕೆಶಿ ಕರೆ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ರೈತರು (Farmers), ಪೌರ ಕಾರ್ಮಿಕರಿಗೆ ಘೋಷಣೆ ಮಾಡಿರುವ ಯೋಜನೆಗಳು ತಲುಪಿಲ್ಲ. ಅದನ್ನು ಆದಷ್ಟು ಬೇಗ ತಲುಪಿಸಬೇಕು.‌ ಇದು ಮದುವೆ ಸೀಸನ್. ತರಕಾರಿ, ಹಣ್ಣು, ಸೊಪ್ಪು ಬೆಳೆಗಾರರು ತಮ್ಮ ಬೆಳೆಯನ್ನು ಮಾರುವಂತಹ ಸಮಯ. ಆದರೆ ರೈತರ ಬೆಳೆಗೆ ಬೇಡಿಕೆಯೂ ಇಲ್ಲ, ಮಾರುಕಟ್ಟೆಯೂ ಇಲ್ಲ, ಬೆಲೆಯೂ ಇಲ್ಲ. ಹೀಗಾಗಿ ರೈತ ಆತಂಕಕ್ಕೆ ಒಳಗಾಗಿದ್ದಾನೆ. ಇವರನ್ನು ದಯಮಾಡಿ ಸರ್ಕಾರ ರಕ್ಷಿಸಬೇಕು ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಇಲಾಖೆ ಮಲಗಿದೆ, ಸಚಿವ ಈಶ್ವರಪ್ಪ ಎಲ್ಲಿದ್ದಾರೋ ಗೊತ್ತಿಲ್ಲ: ಡಿ‌.ಕೆ. ಶಿವಕುಮಾರ್

ರೈತರು ಬೆಳೆದಿರುವ ತರಕಾರಿಗಳನ್ನು ಮುಖ್ಯಮಂತ್ರಿಗಳು, ತೋಟಗಾರಿಕೆ, ಕೃಷಿ ಸಚಿವರು ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿಗಳ ಮನೆಗೆ ಕಳುಹಿಸಲು ಸ್ಥಳೀಯ ಶಾಸಕ ಶಿವಣ್ಣ ಅವರಿಗೆ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದರು.
 

Trending News