Virat Kohli 28th Century: ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ 28ನೇ ಶತಕ ದಾಖಲಿಸಿದರು. ಇದರ ಜೊತೆಗೆ ಅವರ ಹೆಸರಿನಲ್ಲಿ ದೊಡ್ಡ ಸಾಧನೆಯೊಂದು ದಾಖಲಾಗಿದೆ. ಇದು ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಅವರ 8ನೇ ಟೆಸ್ಟ್ ಶತಕವಾಗಿದೆ. ಈ ಶತಕದ ಮೂಲಕ ಕೊಹ್ಲಿ ಭಾರತದ ಮಾಜಿ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಗವಾಸ್ಕರ್ ಅವರು ಆಸ್ಟ್ರೇಲಿಯಾ ವಿರುದ್ಧ 8 ಟೆಸ್ಟ್ ಶತಕಗಳನ್ನು ಬಾರಿಸಿದ್ದರು
Virat Kohli: RCB ಪಾಡ್’ಕ್ಯಾಸ್ಟ್ನ ಇತ್ತೀಚಿನ ಸಂಚಿಕೆಯಲ್ಲಿ ಮಾತನಾಡಿದ ಕೊಹ್ಲಿ, ತಮ್ಮ ಜೀವನದ ಕೆಲವು ಪ್ರಮುಖ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ತನ್ನ ತಂದೆಯ ನಿಧನದ ನಂತರ ಪರಿಸ್ಥಿತಿ ಹೇಗೆ ತಿರುವು ಪಡೆದುಕೊಂಡಿತು ಎಂಬುದನ್ನು ನೆನಪಿಸಿಕೊಂಡ ಕೊಹ್ಲಿ, ‘ವಿಷಯಗಳ ಬಗ್ಗೆ ದೃಷ್ಟಿಕೋನವು ಬದಲಾಗಿದೆ ಹೊರತಾಗಿ ನನ್ನ ಜೀವನ ಬದಲಾಗಿಲ್ಲ’ ಎಂದು ಹೇಳಿದರು.
Virat Kohli: ಕೊಹ್ಲಿ ಅವರ ನೃತ್ಯದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹಲವು ಬಾರಿ ವೈರಲ್ ಆಗಿವೆ. ಅನೇಕ ಸಂದರ್ಶನಗಳಲ್ಲಿ, ವಿರಾಟ್ ಕೊಹ್ಲಿ ಪಂಜಾಬಿ ಮ್ಯೂಸಿಕ್’ಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಆದರೆ ಇದೇ ಡ್ಯಾನ್ಸ್’ನಿಂದಾಗಿ ವಿರಾಟ್ ಕೊಹ್ಲಿ ಒಮ್ಮೆ ಪೆಟ್ಟು ತಿಂದಿದ್ದಾರಂತೆ. ಈ ಬಗ್ಗೆ ನಿಮಗೆ ತಿಳಿದಿದೆಯೇ?
ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ಶನಿವಾರ ಬೆಳಿಗ್ಗೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು. ಈ ಜೋಡಿಯು ಇತರ ಆರಾಧಕರೊಂದಿಗೆ ದೇವಾಲಯದಲ್ಲಿ ಸಾಮಾನ್ಯರಂತೆ ಕುಳಿತು ಪ್ರಾರ್ಥಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ, ಇದು ಭಾರತೀಯ ಸಂಪ್ರದಾಯ ಅಂದ್ರೆ ಅಂತ ನೆಟ್ಟಿಗರು ಹೊಗಳುತ್ತಿದ್ದಾರೆ.
Virat Kohli-Anushka Sharma: ಜೀವನದಲ್ಲಿ ಸ್ಪೂರ್ತಿ ಅಥವಾ ಆದರ್ಶ ಮನೆಯಿಂದ ಪ್ರಾರಂಭವಾಗುತ್ತದೆ.ಹಾಗೆಯೇ ನನಗೆ ಪತ್ನಿ ಅನುಷ್ಕಾ ಶರ್ಮಾವೇ ದೊಡ್ಡ ಸ್ಫೂರ್ತಿ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
Virat Anushka Daughter Photos: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಪುತ್ರಿ ವಾಮಿಕಾ ಕೊಹ್ಲಿಗೆ ಈಗ ಎರಡು ವರ್ಷ. ಆದರೆ ಇಲ್ಲಿವರೆಗೆ ಮಗಳ ಮುಖವನ್ನು ಅಧಿಕೃತವಾಗಿ ತೋರಿಸಿಲ್ಲ. ಇತ್ತೀಚೆಗೆ ವಿರಾಟ್, ಅನುಷ್ಕಾ ಮತ್ತು ವಾಮಿಕಾ ರಿಷಿಕೇಶಕ್ಕೆ ಪ್ರಯಾಣ ಬೆಳೆಸಿದ್ದು, ಬಳಿಕ ಚಾರಣಕ್ಕೆ ಹೋಗಿದ್ದಾರೆ. ಈ ಚಾರಣದ ಚಿತ್ರಗಳನ್ನು ವಿರಾಟ್ ಮತ್ತು ಅನುಷ್ಕಾ ಹಂಚಿಕೊಂಡಿದ್ದಾರೆ. ಇದರಲ್ಲಿ ವಾಮಿಕಾ ಅವರ ಸುಂದರ, ಹೊಸ ಫೋಟೋಗಳನ್ನು ನೀವು ನೋಡಬಹುದು.
ಭಾರತ ತಂಡದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಅವರನ್ನು ವರಿಸಿದ್ದಾರೆ. ಬಾಲಿವುಡ್ ಮತ್ತು ಭಾರತೀಯ ಕ್ರಿಕೆಟಿಗರ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ. ಭಾರತದ ಅನೇಕ ಶ್ರೇಷ್ಠ ಆಟಗಾರರು ಪ್ರಸಿದ್ಧ ಬಾಲಿವುಡ್ ನಟಿಯರನ್ನು ಮದುವೆಯಾಗಿದ್ದಾರೆ.
ಶನಿವಾರದಂದು ವಿರಾಟ್ ಕೊಹ್ಲಿತಮ್ಮ ಇತ್ತೀಚಿನ ಪ್ರವಾಸದ ಫೋಟೋವನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಅವರು ತಮ್ಮ ಹೆಂಡತಿಯ ಪಕ್ಕದಲ್ಲಿ ಶರ್ಟ್ ಇಲ್ಲದೆ ಕುಳಿತಿರುವುದನ್ನು ಕಾಣಬಹುದು. ಅವರು ಆರೆಂಜ್ ಕಲರ್ ಶಾರ್ಟ್ಸ್ ಧರಿಸಿದ್ದರೆ, ಅನುಷ್ಕಾ ಅನಿಮಲ್ ಪ್ರಿಂಟ್ ಸನ್ ಗ್ಲಾಸ್ ಹೊಂದಿರುವ ಬಿಳಿ ಉಡುಗೆ ತೊಟ್ಟಿದ್ದಾರೆ.
Virat Kohli : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ಮಗಳು ವಮಿಕಾ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅಮ್ಮನ ಮಡಿಲಲ್ಲಿ ಕುಳಿತು ತುಂಟಾಟ ಆಡುತ್ತಿರುವ ಕ್ಯೂಟ್ ವಮಿಕಾ ವಿಡಿಯೋ ಒಂದು ಇಂಟರ್ನೆಟ್ನಲ್ಲಿ ಹರಿದಾಡುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಸೂಪರ್ ಎನ್ನುತ್ತಿದ್ದಾರೆ.
ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಸೆಲೆಬ್ರಿಟಿಗಳಿಗೆ ವಂಚಿಸಿ ಬೆದರಿಸಿ ಸುಮಾರು ಇನ್ನೂರು ಕೋಟಿ ದೋಚಿರುವ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಬಾಲಿವುಡ್ ಬೆಡಗಿರಾದ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ನೋರಾ ಫತೇಹಿ ಹೆಸರು ಕೇಳಿ ಬಂದಿರುವುದು ಜಗಜ್ಜಾಹಿರು ಆಗಿದೆ. ಜಾಕ್ವೆಲಿನ್ ಮತ್ತು ಸುಕೇಶ್ ಅವರ ಫೋಟೋಗಳು ಕೂಡ ವೈರಲ್ ಆಗಿದ್ದವು. ಜಾಕ್ವೆಲಿನ್ಗಾಗಿ ಸುಕೇಶ್ ಸಾಕಷ್ಟು ಹಣ ಖರ್ಚು ಮಾಡಿದ್ದಾರಂತೆ.
Virushka Fifth Wedding Anniversary: ಕೆಲ ವರ್ಷಗಳ ಹಿಂದೆ ಜಾಹೀರಾತು ಚಿತ್ರೀಕರಣದ ಸೆಟ್ನಲ್ಲಿ ಪರಸ್ಪರ ಭೇಟಿಯಾದ ಜೋಡಿ ಇಂದು ವಿರುಷ್ಕಾ ಆಗಿ ಎಲ್ಲರ ಮುದ್ದು ಜೋಡಿ ಎಂಬ ಖ್ಯಾತಿ ಗಳಿಸಿದೆ. ಜಾಹೀರಾತು ಸೆಟ್ ನಿಂದ ಪ್ರಾರಂಭವಾದ ಪ್ರೇಮಕಥೆ ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುವ ತನಕ ಮುಂದುವರೆದಿತ್ತು.
Anishka Sharma - Virat Kohli : ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಅಡುಗೆಮನೆಯಲ್ಲಿ ತೆಗೆದುಕೊಂಡ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮುದ್ದಾದ ಸ್ಟಾರ್ ಜೋಡಿಗಳಲ್ಲಿ ಒಂದಾಗಿದ್ದಾರೆ. ಪ್ರತಿ ಬಾರಿ ಅವರು ತಮ್ಮ ಸ್ನ್ಯಾಪ್ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ, ಅವರ ಅಭಿಮಾನಿಗಳ ಮನಸೆಳೆಯುತ್ತಾರೆ.
ಬಿಡುವಿಲ್ಲದ ಸಮಯ ಮತ್ತು ಕೆಲಸಗಳಿಂದ ಹೊರ ಬಂದಿರುವ ನಟಿ ಅನುಷ್ಕಾ ಶರ್ಮಾ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಮಗಳು ವಮಿಕಾ ಅವರೊಂದಿಗೆ ಉತ್ತರಾಖಂಡ್ನ ನೈನಿತಾಲ್ಗೆ ಭೇಟಿ ನೀಡಿದ್ದಾರೆ. ಈ ಕುರಿತ ದಂಪತಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
Virat Kohli - Anushka Sharma Pictures: ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಬಾಲಿವುಡ್ ಅತ್ಯಂತ ವಿಶೇಷ ಸೆಲಿಬ್ರಿಟಿ ಜೋಡಿಗಳಲ್ಲಿ ಒಬ್ಬರು. ಜನರು ಈ ಜೋಡಿಯನ್ನು ವಿರುಷ್ಕಾ ಎಂದು ಪ್ರೀತಿಯಿಂದ ಕರೆಯುತ್ತಾರೆ. ವಿರಾಟ್ ಮತ್ತು ಅನುಷ್ಕಾ ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ.
ಈ ಪಟ್ಟಿಯಲ್ಲಿ ಸುಶ್ಮಿತಾ ಸೇನ್ ಹೆಸರು ಬರುತ್ತದೆ. ವಿಶ್ವ ಸುಂದರಿ ಪಟ್ಟವನ್ನು ಗೆದ್ದ ನಂತರ ಸುಶ್ಮಿತಾ ಸೇನ್ ಬಾಲಿವುಡ್ಗೆ ನಟಿಯಾಗಿ ಎಂಟ್ರಿ ಕೊಟ್ಟರು. ತನ್ನ ಮಾತಿನ ಶೈಲಿ ಮತ್ತು ಸೌಂದರ್ಯದ ಹೊರತಾಗಿ, ಸುಶ್ಮಿತಾ ಕೂಡ ತನ್ನ ಎತ್ತರದ ಕಾರಣದಿಂದಾಗಿ ಸಾಕಷ್ಟು ಜನಮನದಲ್ಲಿ ವಾಸಿಸುತ್ತಾಳೆ. ಸುಶ್ಮಿತಾ ಸೇನ್ ಅವರ ಎತ್ತರ ಸುಮಾರು 5 ಅಡಿ 9.5 ಇಂಚುಗಳು.
ಭಾರತದ ಸ್ಟಾರ್ ಬ್ಯಾಟರ್ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದು 34 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರು 1988 ರ ನವೆಂಬರ್ 5 ರಂದು ದೆಹಲಿಯಲ್ಲಿ ಜನಿಸಿದರು. ಇವರ ಸಾಧನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಇನ್ನು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕೊಹ್ಲಿಯ ಕೆಲ ಫೋಟೋಗಳನ್ನು ನೋಡಿದ್ರ ನಗು ಸಹಿಸೋಕಾಗೋದಿಲ್ಲ.
Virat Kohli Leaked Video of Perth Hotel: ಪರ್ತ್ನ ಹೋಟೆಲ್ ಮ್ಯಾನೇಜ್ಮೆಂಟ್ ಹೇಳಿಕೆ ನೀಡಿದ್ದು, ಈ ವಿಡಿಯೋ ಮಾಡಿದವರನ್ನು ತೆಗೆದುಹಾಕಲಾಗಿದೆ ಎಂದು ಹೇಳಿದೆ. "ಕ್ರೌನ್ ಪರ್ತ್ನಲ್ಲಿ ಅತಿಥಿಯನ್ನು ಒಳಗೊಂಡ ಗೌಪ್ಯತೆಯ ಘಟನೆಯ ಬಗ್ಗೆ ನಾವು ಮಾಹಿತಿಯನ್ನು ಸ್ವೀಕರಿಸಿದ್ದೇವೆ. ನಮ್ಮ ಅತಿಥಿಗಳ ಸುರಕ್ಷತೆ ಮತ್ತು ಗೌಪ್ಯತೆ ನಮ್ಮ ಮೊದಲ ಆದ್ಯತೆಯಾಗಿದೆ. ಈ ಘಟನೆಯಿಂದ ನಮಗೆ ತೀವ್ರ ನಿರಾಸೆಯಾಗಿದೆ. ಅತಿಥಿಗೆ ನಾವು ಬೇಷರತ್ತಾಗಿ ಕ್ಷಮೆಯಾಚಿಸುತ್ತೇವೆ” ಎಂದು ಹೇಳಿಕೆ ನೀಡಿದೆ.
Virat Kohli Bed Room Video Leak : ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಡಿಯೋ ಮೂಲಕ ಸಂಚಲನ ಮೂಡಿಸಿದ್ದಾರೆ. ಅವರು ತಮ್ಮ ಹೋಟೆಲ್ ಕೋಣೆಯ ವಿಡಿಯೋವನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ವಿರಾಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವಿರಾಟ್ ಕೊಹ್ಲಿ ಆಟ ನೋಡಿದ ಪತ್ನಿ ಅನುಷ್ಕಾ ಶರ್ಮಾ ಮನೆ ತುಂಬಾ ಹುಚ್ಚೆದ್ದು ಕುಣಿದಾಡಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೃದಯ ಸ್ಪರ್ಶಿ ಸಂದೇಶ ಒಂದನ್ನು ಹಂಚಿಕೊಂಡಿರುವ ನಟಿ, ನನ್ನ ಜೀವನದ ಅತ್ಯುತ್ತಮ ಪಂದ್ಯವನ್ನು ನಾನು ಇಂದು ನೋಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮತ್ತು ಸ್ಟಾರ್ ಆಟಗಾರ. ಅನೇಕ ದಾಖಲೆಗಳನ್ನು ಮುಡಿಗೇರಿಸಿಕೊಂಡಿರುವ ವಿರಾಟ್ ಅದ್ಭುತ ಆಟಗಾರ. ಇನ್ನು ವಿರಾಟ್ ಉತ್ತಮ ಫ್ಯಾಮಿಲಿ ಮ್ಯಾನ್ ಕೂಡ ಹೌದು. ಆಟದಷ್ಟೇ ಪ್ರಾಮುಖ್ಯತೆಯನ್ನು ತನ್ನ ಕುಟುಂಬಕ್ಕೆ ಕೊಹ್ಲಿ ನೀಡುತ್ತಾರೆ. ಇನ್ನು ವಿರಾಟ್ ಕುಟುಂಬದ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಅದರಲ್ಲೂ ಕೊಹ್ಲಿ ಅತ್ತಿಗೆ ಬಗ್ಗೆ. ಹೌದು ಕೊಹ್ಲಿ ಸಹೋದರ ವಿಕಾಸ್ ಅವರ ಪತ್ನಿ ಚೇತ್ನಾ ಅನುಷ್ಕಾರಿಗಿಂತ ಮುದ್ದಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.