Virushka Wedding Anniversary: ವಿರುಷ್ಕಾ ದಾಂಪತ್ಯಕ್ಕೆ 5 ವರ್ಷ ಪೂರ್ಣ: ಮುದ್ದು ಪತಿಯ ಪೆದ್ದು ಫೋಟೋ ಶೇರ್ ಮಾಡಿದ ಅನುಷ್ಕಾ

Virushka Fifth Wedding Anniversary: ಕೆಲ ವರ್ಷಗಳ ಹಿಂದೆ ಜಾಹೀರಾತು ಚಿತ್ರೀಕರಣದ ಸೆಟ್‌ನಲ್ಲಿ ಪರಸ್ಪರ ಭೇಟಿಯಾದ ಜೋಡಿ ಇಂದು ವಿರುಷ್ಕಾ ಆಗಿ ಎಲ್ಲರ ಮುದ್ದು ಜೋಡಿ ಎಂಬ ಖ್ಯಾತಿ ಗಳಿಸಿದೆ. ಜಾಹೀರಾತು ಸೆಟ್ ನಿಂದ ಪ್ರಾರಂಭವಾದ ಪ್ರೇಮಕಥೆ ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುವ ತನಕ ಮುಂದುವರೆದಿತ್ತು.

Written by - Bhavishya Shetty | Last Updated : Dec 11, 2022, 03:08 PM IST
    • ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ತಮ್ಮ 5ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ
    • 2017 ರಲ್ಲಿ ಭಾರತೀಯ ಸಂಪ್ರದಾಯದ ಪ್ರಕಾರ ವಿವಾಹವಾಹಿದ್ದ ವಿರುಷ್ಕಾ
    • ಜಾಹೀರಾತು ಚಿತ್ರೀಕರಣದ ಸೆಟ್‌ನಲ್ಲಿ ಪರಸ್ಪರ ಭೇಟಿಯಾಗಿದ್ದ ಜೋಡಿ
Virushka Wedding Anniversary: ವಿರುಷ್ಕಾ ದಾಂಪತ್ಯಕ್ಕೆ 5 ವರ್ಷ ಪೂರ್ಣ: ಮುದ್ದು ಪತಿಯ ಪೆದ್ದು ಫೋಟೋ ಶೇರ್ ಮಾಡಿದ ಅನುಷ್ಕಾ title=
virushka

Virushka Fifth Wedding Anniversary: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ಪ್ರತಿಯೊಬ್ಬರ ಹಾಟ್ ಫೇವರೇಟ್ ಕಪಲ್ ಎಂದರೆ ತಪ್ಪಾಗಲ್ಲ. ಈ ಜೋಡಿ ವಿವಾಹ ಸಂಭ್ರಮ ಕಂಡು ಇಂದಿಗೆ 5 ವರ್ಷಗಳೇ ಕಳೆದಿವೆ ಎಂದರೆ ನಂಬೋದು ಕಷ್ಟವಾಗುತ್ತದೆ. ಆದರೆ ನಿಜ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ತಮ್ಮ 5ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ಜಾಹೀರಾತು ಚಿತ್ರೀಕರಣದ ಸೆಟ್‌ನಲ್ಲಿ ಪರಸ್ಪರ ಭೇಟಿಯಾದ ಜೋಡಿ ಇಂದು ವಿರುಷ್ಕಾ ಆಗಿ ಎಲ್ಲರ ಮುದ್ದು ಜೋಡಿ ಎಂಬ ಖ್ಯಾತಿ ಗಳಿಸಿದೆ. ಜಾಹೀರಾತು ಸೆಟ್ ನಿಂದ ಪ್ರಾರಂಭವಾದ ಪ್ರೇಮಕಥೆ ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುವ ತನಕ ಮುಂದುವರೆದಿತ್ತು. ಬಳಿಕ 2017 ರಲ್ಲಿ ಈ ದಿನ ಅಂದರೆ ನವೆಂಬರ್ 11 ರಂದು ವಿರಾಟ್ ಅನುಷ್ಕಾಗೆ ಭಾರತೀಯ ಸಂಪ್ರದಾಯದ ಪ್ರಕಾರ ಮೂರು ಗಂಟು ಹಾಕಿದರು. ಈ ಮುದ್ದಾದ ಜೋಡಿಯು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: ಮದುವೆ ಆದ್ರೂ ʼMr ಬ್ಯಾಚುಲರ್ʼ ಅಂತೆ : ಜ.6ಕ್ಕೆ ಡಾರ್ಲಿಂಗ್‌ ಕೃಷ್ಣನ ಹೊಸ ಅವತಾರ ತೆರೆಗೆ..!

ಇನ್ನು ಐದನೇ ವಿವಾಹ ವಾರ್ಷಿಕೋತ್ಸವದಂದು ವಿರಾಟ್ ಮತ್ತು ಅನುಷ್ಕಾ ಸಾಮಾಜಿಕ ಮಾಧ್ಯಮದಲ್ಲಿ ಬಹಳ ರೋಮ್ಯಾಂಟಿಕ್ ರೀತಿಯಲ್ಲಿ ಪರಸ್ಪರ ವಿಶ್ ಮಾಡಿಕೊಂಡಿದ್ದಾರೆ. ಅನುಷ್ಕಾ ತನ್ನ ಪೋಸ್ಟ್ ನಲ್ಲಿ ವಿರಾಟ್ ಅವರ ಫನ್ನಿ ಫೋಟೋಗಳನ್ನು ಶೇರ್ ಮಾಡಿದ್ದರೆ, ವಿರಾಟ್ ಪೋಸ್ಟ್ ಮಾತ್ರ ಸಖತ್ ರೋಮ್ಯಾಂಟಿಕ್ ಆಗಿದೆ.

ಮೊದಲೊಗೆ ಅನುಷ್ಕಾ ಶರ್ಮಾ ವಿಭಿನ್ನ ಕಥೆಗಳನ್ನು ಹೇಳುವ ಕೆಲವು ಚಿತ್ರಗಳನ್ನು Instagram ನಲ್ಲಿ ಪೋಸ್ಟ್ ಮಾಡಿದ್ದರು. ಮೊದಲ ಫೋಟೋ ಅನುಷ್ಕಾ ಅವರ ಹಾರರ್ ಚಿತ್ರ 'ಪರಿ' ಯ ಫೋಟೋಶಾಪ್ ಮಾಡಿದ ಪೋಸ್ಟರ್ ಆಗಿದ್ದು, ಇದರಲ್ಲಿ ಅನುಷ್ಕಾ ಹಿಂದೆ ವಿರಾಟ್ ನಿಂತಿದ್ದಾರೆ. “ವಿರಾಟ್ ಯಾವಾಗಲೂ ತಮ್ಮ ಪಕ್ಕದಲ್ಲಿ ನಿಲ್ಲುತ್ತಾರೆ ಎಂದು ನನಗೆ ತಿಳಿದಿದೆ” ಎಂದು ಬರೆದಿದ್ದಾರೆ. ಎರಡನೇ ಫೋಟೋ ಒಂದು ಮುದ್ದಾದ ಸೆಲ್ಫಿಯಾಗಿದ್ದು, ಇಬ್ಬರೂ ಪರಸ್ಪರರ ಬಾಂಧವ್ಯವನ್ನು ಇಷ್ಟಪಡುತ್ತೇವೆ. ಇಬ್ಬರೂ ತಮ್ಮನ್ನು ತಾವು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇವೆ” ಎಂದು ಅನುಷ್ಕಾ ಬರೆದಿದ್ದಾರೆ.

 

ಮೂರನೇ ಫೋಟೋದಲ್ಲಿ, ವಿರಾಟ್ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದು ಅನುಷ್ಕಾ ಹೆರಿಗೆಯ ಸಂದರ್ಭದಲ್ಲಿ ತೆಗೆದ ಫೋಟೋ. ನಾಲ್ಕನೇ ಫೋಟೋದಲ್ಲಿ ಇಬ್ಬರ ಚಿತ್ರ ಪ್ರಿಂಟ್ ಮಾಡಿರುವ ಮಗ್ ಇದೆ. ಐದನೇ ಫೋಟೋದಲ್ಲಿ ವಿರಾಟ್ ಗಡ್ಡ ಬಿಟ್ಟು ಫೋಟೋಗೆ ಫೋಸ್ ನೀಡಿದ್ದಾರೆ. ಆರನೇ ಫೋಟೋದಲ್ಲಿ ವಿರಾಟ್ ಅನುಷ್ಕಾ ಕ್ಯೂಟ್ ಸೆಲ್ಫಿಯಲ್ಲಿ ಫನ್ನಿ ಎಕ್ಸ್ ಪ್ರೆಶನ್ ನೀಡುತ್ತಿದ್ದಾರೆ. ಇನ್ನು ಕೊನೆಯ ಫೋಟೋದಲ್ಲಿ ಅನುಷ್ಕಾ ಮತ್ತು ವಿರಾಟ್ ಇದ್ದು, “ನಮ್ಮ ಪ್ರೀತಿ ಇಂದು, ನಾಳೆ ಮತ್ತು ಎಂದೆಂದಿಗೂ ಉಳಿಯಲಿ” ಎಂದು ಬರೆದುಕೊಂಡಿದ್ದಾರೆ.

ಇನ್ನೊಂದೆಡೆ ವಿರಾಟ್ ಈ ಪೋಸ್ಟ್‌ಗೆ 'ನನ್ನ ಪ್ರೀತಿ' ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಎರಡು ಹೃದಯದ ಎಮೋಜಿಗಳು ಮತ್ತು ಅನಂತ ಚಿಹ್ನೆಯನ್ನು ಸಹ ಹಾಕಿದ್ದಾರೆ. ಕಾಮೆಂಟ್‌ನಲ್ಲಿ 'ಅನುಷ್ಕಾ ನೀನು ನಿಜವಾಗಿಯೂ ನನ್ನ ಅತ್ಯಂತ ಸುಂದರವಾದ ಚಿತ್ರಗಳನ್ನು ಸಂಗ್ರಹಿಸಿಟ್ಟಿದ್ದೀಯ!” ಎಂದು ವಿರಾಟ್ ಹೇಳಿದ್ದಾರೆ.

ಅನುಷ್ಕಾ ಪೋಸ್ಟ್ ಮಾಡಿದ ಕೆಲವು ನಿಮಿಷಗಳ ನಂತರ ವಿರಾಟ್ ಕೂಡ ಅನುಷ್ಕಾಗಾಗಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅತ್ಯಂತ ಸುಂದರವಾದ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ, ವಿರಾಟ್ “ಈ ಐದು ವರ್ಷಗಳ ಪ್ರಯಾಣವು ಸುಂದರ ದಿನದಂತೆ ಪೂರ್ಣಗೊಂಡಿದೆ. ನಿನ್ನನ್ನು ಪಡೆದ ನಾನೇ ಅದೃಷ್ಟಶಾಲಿ, ನಾನು ನಿನ್ನನ್ನು ಪೂರ್ಣ ಹೃದಯದಿಂದ ಪ್ರೀತಿಸುತ್ತೇನೆ” ಎಂದು ಸಖತ್ ರೊಮ್ಯಾಂಟಿಕ್ ಆಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಎಕ್ಸ್‌ ಬಾಯ್‌ಫ್ರೆಂಡ್ ಜೊತೆ ಮಾಲ್ಡೀವ್ಸ್‌ನಲ್ಲಿ ಜಾನ್ವಿ : ಗುಟ್ಟು ರಟ್ಟು ಮಾಡಿದ ಸ್ಟೇಟಸ್‌..!

ಈ ಬಗ್ಗೆ ಅನುಷ್ಕಾ ಕಾಮೆಂಟ್ ಮಾಡಿದ್ದು, “ನನ್ನ ಪೋಸ್ಟ್ ಗೆ ಸೇಡು ತೀರಿಸಿಕೊಳ್ಳುತ್ತೀರಿ ಎಂದುಕೊಂಡಿದ್ದೆ, ಥ್ಯಾಂಕ್ ಗಾಡ್” ಎಂದು ತಮಾಷೆಯಾಗಿ ಬರೆದಿದ್ದಾರೆ.

 
 
 
 

 
 
 
 
 
 
 
 
 
 
 

A post shared by Virat Kohli (@virat.kohli)

 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News