Virat Kohli ಹುಟ್ಟುಹಬ್ಬಕ್ಕೆ ಫೋಟೋ ಶೇರ್ ಮಾಡಿದ ಅನುಷ್ಕಾ: ಈ ಅವತಾರ ಕಂಡು ಬಿದ್ದು ಬಿದ್ದು ನಗೋದು ಗ್ಯಾರಂಟಿ

ಭಾರತದ ಸ್ಟಾರ್ ಬ್ಯಾಟರ್ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದು 34 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರು 1988 ರ ನವೆಂಬರ್ 5 ರಂದು ದೆಹಲಿಯಲ್ಲಿ ಜನಿಸಿದರು. ಇವರ ಸಾಧನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಇನ್ನು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕೊಹ್ಲಿಯ ಕೆಲ ಫೋಟೋಗಳನ್ನು ನೋಡಿದ್ರ ನಗು ಸಹಿಸೋಕಾಗೋದಿಲ್ಲ.

1 /5

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರು ಸೆಲೆಬ್ರಿಟಿ ಲೋಕದಲ್ಲಿ ಮಾದರಿ ಜೋಡಿ ಎಂಬಂತೆ ಬದುಕುತ್ತಿದ್ದಾರೆ. ಇನ್ನು ಇಂದು ಕೊಹ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ವಿರಾಟ್ ಅವರ ಫನ್ನಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.

2 /5

ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಅವರ ಫನ್ನಿ ಫೋಟೋಸ್ ಶೇರ್ ಮಾಡಿರುವ ಅನುಷ್ಕಾ ಮುದ್ದಾಗಿ ಶೀರ್ಷಿಕೆಯನ್ನೂ ನೀಡಿದ್ದಾರೆ.

3 /5

ವಿರಾಟ್ ಕೊಹ್ಲಿ ಕ್ರೀಸ್ ನಲ್ಲಿ ಅತ್ಯುತ್ತಮ ಆಟಗಾರ. ಜೊತೆಗೆ ತನ್ನ ಕುಟುಂಬದ ವಿಚಾರ ಬಂದಾಗ ಅವರಿಗಾಗಿ ಸರಿಯಾದ ಸಮಯ ನೀಡುವುದರಲ್ಲಿ ಕೊಹ್ಲಿ ಮುಂಚೂಣಿಯಲ್ಲಿರುತ್ತಾರೆ. ಹೀಗಾಗಿ ಅವರನ್ನು ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಎಂದೂ ಕರೆಯುತ್ತಾರೆ.

4 /5

“ಇಂದು ನಿಮ್ಮ ಜನ್ಮದಿನ. ಹೀಗಾಗಿ ನಿಸ್ಸಂಶಯವಾಗಿ ನಾನು ಈ ಪೋಸ್ಟ್ ನಲ್ಲಿ ನಿಮ್ಮ ಅತ್ಯುತ್ತಮ ಫೋಟೋಗಳನ್ನು ಶೇರ್ ಮಾಡುತ್ತಿದ್ದೇನೆ. ಪ್ರತಿ ಹಂತಗಳಲ್ಲೂ ನಿನ್ನನ್ನು ಪ್ರೀತಿಸುತ್ತೇನೆ” ಎಂದು ತನ್ನ ಪ್ರೀತಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

5 /5

ಈ ಮುದ್ದಾದ ಜೋಡಿಯ ಫೋಟೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ನಾವು ಕಾಣಬಹುದು.