ಹೇ ಬ್ಯೂಟಿ... ಸೂಪರ್‌ ಕೊಹ್ಲಿ : ಪತಿ ಆಟ ನೋಡಿ ಹುಚ್ಚೆದ್ದು ಕುಣಿದ ಅನುಷ್ಕಾ..!

ವಿರಾಟ್ ಕೊಹ್ಲಿ ಆಟ ನೋಡಿದ ಪತ್ನಿ ಅನುಷ್ಕಾ ಶರ್ಮಾ ಮನೆ ತುಂಬಾ ಹುಚ್ಚೆದ್ದು ಕುಣಿದಾಡಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹೃದಯ ಸ್ಪರ್ಶಿ ಸಂದೇಶ ಒಂದನ್ನು ಹಂಚಿಕೊಂಡಿರುವ ನಟಿ, ನನ್ನ ಜೀವನದ ಅತ್ಯುತ್ತಮ ಪಂದ್ಯವನ್ನು ನಾನು ಇಂದು ನೋಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Written by - Krishna N K | Last Updated : Oct 23, 2022, 07:14 PM IST
  • ವಿರಾಟ್ ಕೊಹ್ಲಿ ಆಟ ನೋಡಿದ ಪತ್ನಿ ಅನುಷ್ಕಾ ಶರ್ಮಾ ಮನೆ ತುಂಬಾ ಹುಚ್ಚೆದ್ದು ಕುಣಿದಾಡಿದ್ದಾರೆ
  • ಈ ಕುರಿತು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹೃದಯ ಸ್ಪರ್ಶಿ ಸಂದೇಶ ಒಂದನ್ನು ಹಂಚಿಕೊಂಡಿದ್ದಾರೆ
  • ನನ್ನ ಜೀವನದ ಅತ್ಯುತ್ತಮ ಪಂದ್ಯವನ್ನು ನಾನು ಇಂದು ನೋಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
 ಹೇ ಬ್ಯೂಟಿ... ಸೂಪರ್‌ ಕೊಹ್ಲಿ : ಪತಿ ಆಟ ನೋಡಿ ಹುಚ್ಚೆದ್ದು ಕುಣಿದ ಅನುಷ್ಕಾ..! title=

ಬೆಂಗಳೂರು : ವಿರಾಟ್ ಕೊಹ್ಲಿ ಆಟ ನೋಡಿದ ಪತ್ನಿ ಅನುಷ್ಕಾ ಶರ್ಮಾ ಮನೆ ತುಂಬಾ ಹುಚ್ಚೆದ್ದು ಕುಣಿದಾಡಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹೃದಯ ಸ್ಪರ್ಶಿ ಸಂದೇಶ ಒಂದನ್ನು ಹಂಚಿಕೊಂಡಿರುವ ನಟಿ, ನನ್ನ ಜೀವನದ ಅತ್ಯುತ್ತಮ ಪಂದ್ಯವನ್ನು ನಾನು ಇಂದು ನೋಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಹೌದು.. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಅಂತಿಮ ಎಸೆತದಲ್ಲಿ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ಕೊಹ್ಲಿ ಅಮೋಘ ಅರ್ಧಶತಕ ಟೀಂ ಇಂಡಿಯಾಗೆ ಬಲ ತುಂಬಿತ್ತು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದ ಬೃಹತ್ ಪ್ರೇಕ್ಷಕರ ಸಮ್ಮುಖದಲ್ಲಿ ಇಂದು ನಡೆದ ರೋಚಕ ಪಂಧ್ಯದಲ್ಲಿ ಭಾರತ ಅಮೋಘ ಗೆಲುವು ಸಾಧಿಸಿದೆ. ಮನೆಯಲ್ಲಿ ಕುಳಿತು ಮಗಳೊಂದಿಗೆ ಮ್ಯಾಚ್‌ ನೋಡಿದ ಅನುಷ್ಕಾ ಶರ್ಮಾ ವಿರಾಟ್‌ ಆಟಕ್ಕೆ ಹುಚ್ಚೆದ್ದು ಕುಪ್ಪಳಿ ಕುಣಿದಾಡಿದ್ದಾರೆ.

ಇದನ್ನೂ ಓದಿ: ಕಣ್ಣೀರಿಡುತ್ತಾ ಮೈದಾನದಲ್ಲಿ ಗೆಲುವು ಸಂಭ್ರಮಿಸಿದ ಕೊಹ್ಲಿ: ಎತ್ತಿ ಮುದ್ದಾಡಿದ ರೋಹಿತ್ ಶರ್ಮಾ

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸುದೀರ್ಘ ಸಂದೇಶ ಹಂಚಿಕೊಂಡಿರುವ ಅನುಷ್ಕಾ.. ಈ ದಿನದ ರಾತ್ರಿ ಭಾರತೀಯರ ನಗುವಿಗೆ ನೀನು ಕಾರಣವಾದೆ. ಅದು ದೀಪಾವಳಿ ಹಬ್ಬದ ದಿನ. ನೀನು ಅ‍ದ್ಭುತ... ಇಂದು ನಾನು ನನ್ನ ಜೀವನದ ಅತ್ಯತ್ತಮ ಪಂದ್ಯವನ್ನು ಈಗಷ್ಟೇ ನೋಡಿದೆ. ಮನೆಯಲ್ಲಿ ಹುಚ್ಚೆದು ಕುಣಿದ ನನ್ನನ್ನು ನೋಡಿದ ನಮ್ಮ ಮಗಳಿಗೆ ಅರ್ಥವಾಗದಿದ್ದರೂ ಮುಂದೊಂದು ದಿನ ಅವಳಿಗೆ ಈ ಮ್ಯಾಚ್‌ ನೋಡಿ ಅರ್ಥಮಾಡಿಕೊಳ್ಳುತ್ತಾಳೆ. ತನ್ನ ತಂದೆ ಅದ್ಭುತ ಇನ್ನಿಂಗ್ಸ್‌ ಎದುರಿಸಿ ಗೆಲುವಿಗೆ ಕಾರಣರಾಗಿದ್ದಾರೆ ಎಂದು ಅವಳಿಗೆ ತಿಳಿಯುತ್ತದೆ. ನಿನ್ನ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ. ಐ ಲವ್‌ ಯೂ .... ಅಂತ ಪತಿಯ ಆಟವನ್ನು ಮೆಚ್ಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News