Virushka : ಅನುಷ್ಕಾ ಶರ್ಮಾ ಹೆಸರಿರುವ ಟೀ ಶರ್ಟ್ ಧರಿಸಿದ ವಿರಾಟ್ ಕೊಹ್ಲಿ! ಕಾರಣವೂ ಇದೆ

Virat Kohli - Anushka Sharma Pictures: ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಬಾಲಿವುಡ್ ಅತ್ಯಂತ ವಿಶೇಷ ಸೆಲಿಬ್ರಿಟಿ ಜೋಡಿಗಳಲ್ಲಿ ಒಬ್ಬರು. ಜನರು ಈ ಜೋಡಿಯನ್ನು ವಿರುಷ್ಕಾ ಎಂದು ಪ್ರೀತಿಯಿಂದ ಕರೆಯುತ್ತಾರೆ. ವಿರಾಟ್ ಮತ್ತು ಅನುಷ್ಕಾ ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ. 

Written by - Chetana Devarmani | Last Updated : Nov 16, 2022, 05:32 PM IST
  • ಅನುಷ್ಕಾ ಶರ್ಮಾ ಹೆಸರಿರುವ ಟೀ ಶರ್ಟ್ ಧರಿಸಿದ ವಿರಾಟ್ ಕೊಹ್ಲಿ
  • ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ
  • ಅತ್ಯಂತ ವಿಶೇಷ ಸೆಲಿಬ್ರಿಟಿ ಜೋಡಿಗಳಲ್ಲಿ ಒಬ್ಬರು
Virushka : ಅನುಷ್ಕಾ ಶರ್ಮಾ ಹೆಸರಿರುವ ಟೀ ಶರ್ಟ್ ಧರಿಸಿದ ವಿರಾಟ್ ಕೊಹ್ಲಿ! ಕಾರಣವೂ ಇದೆ  title=
ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ

Virat Kohli - Anushka Sharma Pictures: ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಬಾಲಿವುಡ್ ಅತ್ಯಂತ ವಿಶೇಷ ಸೆಲಿಬ್ರಿಟಿ ಜೋಡಿಗಳಲ್ಲಿ ಒಬ್ಬರು. ಜನರು ಈ ಜೋಡಿಯನ್ನು ವಿರುಷ್ಕಾ ಎಂದು ಪ್ರೀತಿಯಿಂದ ಕರೆಯುತ್ತಾರೆ. ವಿರಾಟ್ ಮತ್ತು ಅನುಷ್ಕಾ ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ. ವಿರಾಟ್ ತನ್ನ ಪತ್ನಿ ಅನುಷ್ಕಾ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ತುಂಬಾ ವಿಶೇಷ ಮತ್ತು ರೋಮ್ಯಾಂಟಿಕ್ ಆಗಿರುತ್ತದೆ. ವಿರಾಟ್ ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾದಿಂದ ಬಂದಿದ್ದು, ಇದೀಗ ಈ ಜೋಡಿ ಹಾಲಿಡೇಸ್‌ ಎಂಜಾಯ್‌ ಮಾಡುತ್ತಿದ್ದಾರಂತೆ. 

ಇದನ್ನೂ ಓದಿ : ನಟನೆಯಷ್ಟೇ ಅಲ್ಲ, ಕ್ರಿಕೆಟ್‌ನಲ್ಲೂ ಸೈ ʼಕಾಂತಾರʼ ಲೀಲಾ : ವಿಡಿಯೋ ನೋಡಿ..!

ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ವಿರಾಟ್ ಮತ್ತು ಅನುಷ್ಕಾ ಕಾಣಿಸಿಕೊಂಡಿದ್ದು, ಅದರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದೆ. ಅನೇಕ ದಿನಗಳ ಬಳಿಕ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿರುವುದು ವಿಶೇಷ. ಈ ಸಮಯದಲ್ಲಿ ದಂಪತಿಗಳು ಒಟ್ಟಿಗೆ ಇದ್ದರೂ ಮಗಳು ಮಾತ್ರ ಎಲ್ಲಿಯೂ ಕಾಣಲಿಲ್ಲ. ಇಬ್ಬರೂ ಒಟ್ಟಿಗೆ ಸಮಯ ಕಳೆಯಲು ಹೊರಟಿರುವಂತೆ ತೋರುತ್ತಿದೆ ಎಂದು ನೆಟ್ಟಿಗರು ಊಹಿಸಿದ್ದಾರೆ. ಇಲ್ಲಿ ಜನರ ಗಮನ ಸೆಳೆದ ಮತ್ತೊಂದು ವಿಷಯವೆಂದರೆ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಹೆಸರಿರುವ ಟೀ ಶರ್ಟ್ ಧರಿಸಿರುವುದು.

 

 

ಚಿತ್ರಗಳಲ್ಲಿ, ಜೋಡಿಯು ಬಿಳಿ ಮತ್ತು ಕಪ್ಪು ಬಣ್ಣಗಳ ಸಂಯೋಜನೆಯಲ್ಲಿ ಟ್ವಿನ್‌ ಬಟ್ಟೆ ತೊಟ್ಟು ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಕಪ್ಪು ಪ್ಯಾಂಟ್‌ ಜೊತೆ ಬಿಳಿ ಪಫ್ ತೋಳುಗಳ ಟಾಪ್‌ ಧರಿಸಿದ್ದು, ವಿರಾಟ್ ಬಿಳಿ ಹುಡಿ ಟಿ ಶರ್ಟ್ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ವಿರಾಟ್‌ ಕೊಹ್ಲಿ ಅವರ ಟಿ ಶರ್ಟ್ ಮೇಲೆ ಹಾರ್ಟ್‌ ಸಿಂಬಲ್‌ ಜೊತೆ ಕೆಂಪು ಬಣ್ಣದಲ್ಲಿ A ಎಂದು ಬರೆದಿರುವುದು ಎಲ್ಲರ ಗಮನ ಸೆಳೆದಿದೆ. ಫೋಟೋಗಳು ಮತ್ತು ವಿಡಿಯೋಗಳನ್ನು ನೋಡಿದ ಅಭಿಮಾನಿಗಳು ಇಬ್ಬರೂ ಒಟ್ಟಿಗೆ ಅದ್ಭುತವಾಗಿ ಕಾಣುತ್ತಿದ್ದಾರೆ ಎನ್ನುತ್ತಿದ್ದಾರೆ. 

ಇದನ್ನೂ ಓದಿ : ತಮನ್ನಾಗೆ ಕೂಡಿ ಬಂತು ಕಂಕಣ ಭಾಗ್ಯ? ಇವರೇ ಆ ಲಕ್ಕಿ ಮ್ಯಾನ್‌.!

ವಿರಾಟ್ ಕೊಹ್ಲಿ ಕಳೆದ ಕೆಲವು ವರ್ಷಗಳಿಂದ ಕೆಟ್ಟ ಫಾರ್ಮ್‌ನಲ್ಲಿದ್ದರು, ಆದರೆ ವಿಶ್ವಕಪ್‌ನಲ್ಲಿ ಅವರು ಫಾರ್ಮ್‌ಗೆ ಮರಳಿದ್ದು, ಮತ್ತೆ ತಮ್ಮ ಅಸಲಿ ಆಟ ಶುರು ಮಾಡಿದ್ದಾರೆ. ವಿರಾಟ್‌ ಅದ್ಭುತ ಆಟದ ಬಗ್ಗೆ ಇಡೀ ದೇಶವೇ ಇದೀಗ ಹೆಮ್ಮೆ ಪಡುತ್ತಿದೆ. ಅವರ ಪತ್ನಿ ಕೂಡ ವಿರಾಟ್‌ಗೆ ಸಾಕಷ್ಟು ಪ್ರೀತಿಯಿಂದ ಹಾಡಿ ಹೊಗಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News