Virat Kohli Leaked Video: ಹೋಟೆಲ್ ರೂಂನಿಂದ ಬರುತ್ತಿದ್ದಂತೆ ಸಿಟ್ಟಿನಿಂದ ಲುಕ್ ಕೊಟ್ಟ ಕಿಂಗ್ ಕೊಹ್ಲಿ!

Virat Kohli Leaked Video of Perth Hotel: ಪರ್ತ್‌ನ ಹೋಟೆಲ್ ಮ್ಯಾನೇಜ್‌ಮೆಂಟ್ ಹೇಳಿಕೆ ನೀಡಿದ್ದು, ಈ ವಿಡಿಯೋ ಮಾಡಿದವರನ್ನು ತೆಗೆದುಹಾಕಲಾಗಿದೆ ಎಂದು ಹೇಳಿದೆ. "ಕ್ರೌನ್ ಪರ್ತ್‌ನಲ್ಲಿ ಅತಿಥಿಯನ್ನು ಒಳಗೊಂಡ ಗೌಪ್ಯತೆಯ ಘಟನೆಯ ಬಗ್ಗೆ ನಾವು ಮಾಹಿತಿಯನ್ನು ಸ್ವೀಕರಿಸಿದ್ದೇವೆ. ನಮ್ಮ ಅತಿಥಿಗಳ ಸುರಕ್ಷತೆ ಮತ್ತು ಗೌಪ್ಯತೆ ನಮ್ಮ ಮೊದಲ ಆದ್ಯತೆಯಾಗಿದೆ. ಈ ಘಟನೆಯಿಂದ ನಮಗೆ ತೀವ್ರ ನಿರಾಸೆಯಾಗಿದೆ. ಅತಿಥಿಗೆ ನಾವು ಬೇಷರತ್ತಾಗಿ ಕ್ಷಮೆಯಾಚಿಸುತ್ತೇವೆ” ಎಂದು ಹೇಳಿಕೆ ನೀಡಿದೆ.

Written by - Bhavishya Shetty | Last Updated : Oct 31, 2022, 03:57 PM IST
    • ವಿರಾಟ್ ಕೊಹ್ಲಿ ತಂಗಿದ್ದ ಹೋಟೆಲ್ ರೂಂ ವಿಡಿಯೋ ವೈರಲ್
    • ಹೋಟೆಲ್ ಆಡಳಿತ ಮಂಡಳಿ ಕಠಿಣ ನಿಲುವು ತಳೆದು ದೊಡ್ಡ ಕ್ರಮ ಕೈಗೊಂಡಿದೆ
    • ಆದರೆ ಹೋಟೆಲ್ ರೂಂನಿಂದ ಬರುತ್ತಿದ್ದಂತೆ ಸಿಟ್ಟಿನಿಂದ ಲುಕ್ ಕೊಟ್ಟ ಕೊಹ್ಲಿ
Virat Kohli Leaked Video: ಹೋಟೆಲ್ ರೂಂನಿಂದ ಬರುತ್ತಿದ್ದಂತೆ ಸಿಟ್ಟಿನಿಂದ ಲುಕ್ ಕೊಟ್ಟ ಕಿಂಗ್ ಕೊಹ್ಲಿ! title=
virat kohli room video

Virat Kohli Leaked Video of Perth Hotel: ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಹೋಟೆಲ್ ಕೋಣೆಯ ವಿಡಿಯೋ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದೆ. ಈ ಬಗ್ಗೆ ಸ್ವತಃ ವಿರಾಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೋ ಮಾಡಿದವರು ಸಿಕ್ಕಿಬಿದ್ದಿದ್ದಾರೆ. ಇಷ್ಟೆಲ್ಲ ನಡೆದ ಬಳಿಕ ಹೋಟೆಲ್ ಆಡಳಿತ ಮಂಡಳಿ ಕಠಿಣ ನಿಲುವು ತಳೆದು ದೊಡ್ಡ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: SHOCKING!.. ವಿರಾಟ್ ಕೊಹ್ಲಿ‌ ಪ್ರೈವೇಟ್‌ ರೂಮ್‌ ವಿಡಿಯೋ ಲೀಕ್‌ : ಬೇಸರ ವ್ಯಕ್ತಪಡಿಸಿದ ಕಿಂಗ್‌..!

ವಿರಾಟ್‌ಗೆ ಬೇಷರತ್ ಕ್ಷಮೆ:

ಪರ್ತ್‌ನ ಹೋಟೆಲ್ ಮ್ಯಾನೇಜ್‌ಮೆಂಟ್ ಹೇಳಿಕೆ ನೀಡಿದ್ದು, ಈ ವಿಡಿಯೋ ಮಾಡಿದವರನ್ನು ತೆಗೆದುಹಾಕಲಾಗಿದೆ ಎಂದು ಹೇಳಿದೆ. "ಕ್ರೌನ್ ಪರ್ತ್‌ನಲ್ಲಿ ಅತಿಥಿಯನ್ನು ಒಳಗೊಂಡ ಗೌಪ್ಯತೆಯ ಘಟನೆಯ ಬಗ್ಗೆ ನಾವು ಮಾಹಿತಿಯನ್ನು ಸ್ವೀಕರಿಸಿದ್ದೇವೆ. ನಮ್ಮ ಅತಿಥಿಗಳ ಸುರಕ್ಷತೆ ಮತ್ತು ಗೌಪ್ಯತೆ ನಮ್ಮ ಮೊದಲ ಆದ್ಯತೆಯಾಗಿದೆ. ಈ ಘಟನೆಯಿಂದ ನಮಗೆ ತೀವ್ರ ನಿರಾಸೆಯಾಗಿದೆ. ಅತಿಥಿಗೆ ನಾವು ಬೇಷರತ್ತಾಗಿ ಕ್ಷಮೆಯಾಚಿಸುತ್ತೇವೆ” ಎಂದು ಹೇಳಿಕೆ ನೀಡಿದೆ.

ಹೇಳಿಕೆಯ ಪ್ರಕಾರ, “ನಾವು ಇಂತಹ ಘಟನೆಗಳನ್ನು ಪ್ರೋತ್ಸಾಹಿಸುವುದಿಲ್ಲ. ಇದು ನಮ್ಮ ತಂಡದ ಸದಸ್ಯರು ಮತ್ತು ಗುತ್ತಿಗೆದಾರರಿಗೆ ವಿಧಿಸಲಾದ ಮಾನದಂಡಗಳನ್ನು ಮೀರಿದೆ. ಇದಕ್ಕಾಗಿ ಕ್ರೌನ್ ಹೋಟೆಲ್ ತಕ್ಷಣದ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಕೆಲಸದಿಂದ ತೆಗೆಯಲಾಗಿದೆ. ಸಾಮಾಜಿಕ ಮಾಧ್ಯಮ ವೇದಿಕೆಯಿಂದ ವೀಡಿಯೊವನ್ನು ತಕ್ಷಣವೇ ತೆಗೆದುಹಾಕಲಾಗಿದೆ. ಇದಲ್ಲದೆ, ಮೂರನೇ ವ್ಯಕ್ತಿಗಳ ಸಹಯೋಗದೊಂದಿಗೆ ಘಟನೆಯ ತನಿಖೆ ನಡೆಸಲಾಗುತ್ತಿದೆ. ನಾವು ಭಾರತೀಯ ಕ್ರಿಕೆಟ್ ತಂಡ ಮತ್ತು ಐಸಿಸಿಯೊಂದಿಗೂ ಸಹಕರಿಸುತ್ತಿದ್ದೇವೆ” ಎಂದು ಹೋಟೆಲ್ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: ವಿರಾಟ್‌ ಕೊಹ್ಲಿ ಬೆಡ್‌ ರೂಂ ವಿಡಿಯೋ ಲೀಕ್‌ ಬಗ್ಗೆ ಅನುಷ್ಕಾ ಅಸಮಾಧಾನ

ಪರ್ತ್‌ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್‌ಗಳ ಸೋಲು ಅನುಭವಿಸಬೇಕಾಯಿತು. ಪ್ರಸಕ್ತ ಆವೃತ್ತಿಯ ಈ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡುತ್ತಿರುವ ಟೀಂ ಇಂಡಿಯಾದ ಮೊದಲ ಸೋಲು ಇದಾಗಿದೆ. ಇದೀಗ ಭಾರತ ತನ್ನ ಗುಂಪಿನಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ. ಟೀಂ ಇಂಡಿಯಾ 3 ಪಂದ್ಯಗಳಿಂದ 4 ಅಂಕಗಳನ್ನು ಹೊಂದಿದ್ದರೆ ಅಗ್ರ ಶ್ರೇಯಾಂಕದ ದಕ್ಷಿಣ ಆಫ್ರಿಕಾ ಅದೇ ಸಂಖ್ಯೆಯ ಪಂದ್ಯಗಳಲ್ಲಿ 5 ಅಂಕಗಳನ್ನು ಹೊಂದಿದೆ. ಬಾಂಗ್ಲಾದೇಶ 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ, ಜಿಂಬಾಬ್ವೆ (3 ಅಂಕ) ನಾಲ್ಕನೇ ಸ್ಥಾನದಲ್ಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News