ಕನ್ನಡದಲ್ಲಿ ವಿವಿಧ ಬಗೆಯ ಪಾತ್ರಗಳಿಂದ ನಾಡಿನ ಪ್ರೇಕ್ಷಕರನ್ನು ರಂಜಿಸಿದ ನವರಸ ನಾಯಕ ಜಗ್ಗೇಶ್ ಈಗ ತಮ್ಮ ಹಳೆಯ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಸವಿ ನೆನಪಿಗೆ ಜಾರಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ, ವಿಧಾನಪರಿಷತ್ ಸದಸ್ಯರಾದ ಜಗ್ಗೇಶ್ ಅವರು ವಲಸೆ ಬಂದಿರುವ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಗಳ ಬಗ್ಗೆ ಈ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಇಂದು ಚಂದನವನದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ಗೆ ಹುಟ್ಟುಹಬ್ಬದ ಸಂಭ್ರಮ.ಒಂದು ಕಡೆ ಪುನೀತ್ ರಾಜ್ ಕುಮಾರ್ 44 ನೇ ಹುಟ್ಟುಹಬ್ಬಕ್ಕೆ ಕಾಲಿಡುತ್ತಿದ್ದರೆ. ನಟ ಜಗ್ಗೇಶ್ ಅವರು 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ರೇವಣ್ಣರವರೇ ನೀವು ಸಾಮಾನ್ಯ ಜನರಲ್ಲ! ಈ ದೇಶದ ಮಾಜಿ ಪ್ರಧಾನಿಯ ಮಗ. ಸಂವಿಧಾನ ಭಾರತದ ಎಲ್ಲ ಪ್ರಜೆಗೂ ವೈಯಕ್ತಿಕ ಅಭಿಪ್ರಾಯ ಮಂಡಿಸುವ ಹಕ್ಕು ನೀಡಿದೆ. ಹಾಗಂತ ಇನೊಬ್ಬರಿಗೆ ಮನಸಿಗೆ ಘಾಸಿ ಮಾಡಬಾರದು ಎಂದು ಜಗ್ಗೇಶ್ ಹೇಳಿದ್ದಾರೆ.
ತಮ್ಮ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಇಲ್ಲಸಲ್ಲದ ಹೇಳಿಕೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಗ್ಗೇಶ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಜಗ್ಗೇಶ್ ಎಂದರೆ ನಮಗೆ ನೆನಪಾಗೋದು ಯಾವಾಗಲೂ ತಮ್ಮ ನವರಸಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುವ ರೀತಿ. ಜೊತೆಗೆ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರು ಆಗಿರುವ ಜಗ್ಗೇಶ್ ಅವರಿಗೆ ಅಧ್ಯಾತ್ಮದ ಮೇಲೆಯೂ ಕೂಡ ಅಷ್ಟೇ ಒಲವೂ. ಹೀಗೆ ಹಲವು ಬಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಈಗ ತಮ್ಮ ವಂಶದ ಇತಿಹಾಸದ ಬಗೆಗಿನ ನೆನಪುಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಪ್ರಸಿದ್ಧ ಗಾಯಕ ವಿಜಯ್ ಪ್ರಕಾಶ್ ಹಾಡಿರುವ ಈ ಟೈಟಲ್ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈಗಾಗಲೇ ಹಿಟ್ ಆಗಿರುವ ಟೈಟಲ್ ಟ್ರ್ಯಾಕಿಗೆ ಬೆಂಗಳೂರಿನ ಕೆಫೆ ಶ್ರೀ ಹೌಸ್ನಲ್ಲಿ ಬಾರ್ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ.
ನಮ್ಮಿಬ್ಬರದು 30 ವರ್ಷಗಳ ಗೆಳೆತನ. ಇಂದು ಅವರಿಲ್ಲ ಎಂಬ ಸುದ್ದಿ ಬಹಳ ನೋವುಂಟುಮಾಡಿದೆ. ನೋವಿನಿಂದಲೇ ಮಿತ್ರನಿಗೆ ವಿದಾಯ ಹೇಳುತ್ತಿದ್ದೇನ ಎಂದು ಜಗ್ಗೇಶ್ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.