Big blow to Gautam Adani: ಸೌರಶಕ್ತಿ ಗುತ್ತಿಗೆಗಳನ್ನು (solar energy contract) ಪಡೆಯಲು ಭಾರತೀಯ ಅಧಿಕಾರಿಗಳಿಗೆ ದೊಡ್ಡ ಮೊತ್ತದ ಲಂಚ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ನ ಡಿಸ್ಟ್ರಿಕ್ಟ್ ಕೋರ್ಟ್ ಅರೆಸ್ಟ್ ವಾರೆಂಟ್ ಆದೇಶ ಹೊರಡಿಸಿದ ಬೆನ್ನಲ್ಲೇ ದೇಶದ ಪ್ರಮುಖ ಉದ್ಯಮಿ ಗೌತಮ್ ಅದಾನಿ ಅವರಿಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಕೀನ್ಯಾದ ಅಧ್ಯಕ್ಷ ವಿಲಿಯಂ ರುಟೊ ಅವರು ಅದಾನಿ ಕಂಪನಿ ಕೀನ್ಯಾ ದೇಶದ ಜೊತೆಗೆ ಮಾಡಿಕೊಂಡಿದ್ದ ಎರಡು ಒಪ್ಪಂದಗಳನ್ನು ರದ್ದುಪಡಿಸುವುದಾಗಿ ಘೋಷಿಸಿದ್ದಾರೆ.
ಸೌರಶಕ್ತಿ ಉದ್ಯಮದಲ್ಲಿ ಗೌತಮ್ ಅದಾನಿ ಅವರದು ಪ್ರಪಂಚದಲ್ಲೇ ಪ್ರಮುಖ ಹೆಸರು. ಆದರೀಗ ಅದೇ ಸೌರಶಕ್ತಿ ಉದ್ಯಮಕ್ಕೆ ಸಂಬಂಧಿಸಿದ ಪ್ರಕರಣವೊಂದು ಅದಾನಿ ಅವರ ನಾಗಾಲೋಟದಕ್ಕೆ ಅಡ್ಡಿಯುಂಟು ಮಾಡುವಂತೆ ಕಾಣುತ್ತಿದೆ. ಅದಾನಿ ಅವರಿಗೆ ಏಟಿನ ಮೇಲೆ ಏಟುಗಳು ಬೀಳತೊಡಗಿವೆ. ಅಮೆರಿಕಾದ ಕೋರ್ಟ್ ಬೃಹತ್ ಮೊತ್ತದ ಲಂಚ ನೀಡಿ ಸೌರ ಶಕ್ತಿಗಳ ಗುತ್ತಿಗೆ ಪಡೆದಿದ್ದಾರೆ ಎಂದು ಅದಾನಿ ಸೇರಿದಂತೆ 8 ಜನರ ವಿರುದ್ಧ ದೋಷಾರೋಪಣೆ ಮಾಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಕೀನ್ಯಾ ದೇಶವು ಕೂಡ ಅದಾನಿ ಗ್ರೂಪ್ ಜೊತೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ರದ್ದು ಮಾಡುವುದಾಗಿ ಘೋಷಿಸಿದೆ.
ಇದನ್ನೂ ಓದಿ- ಎಲೋನ್ ಮಸ್ಕ್‌ಗೆ ಪ್ರತಿಸ್ಪರ್ಧಿ ಆಗ್ತಾರಾ ಈ ಭಾರತೀಯ ಉದ್ಯಮಿ...!
ಅದಾನಿಗೆ ಗಾಯದ ಮೇಲೆ ಬರೆ
ಹೊಡೆತ -1: ‘ಹಿಂಡೆನ್‌ಬರ್ಗ್ ರಿಸರ್ಚ್’ ಹೆಸರಿನ ಅಮೇರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಎರಡು ವರ್ಷಗಳ ಕಾಲ ಅದಾನಿ ಗ್ರೂಪಿನ ವ್ಯವಹಾರಗಳ ಬಗ್ಗೆ ರಿಸರ್ಚ್ ಮಾಡಿ ವರದಿ ಪ್ರಕಟಿಸಿತು. ‘ಅದಾನಿ ಗ್ರೂಪ್ ‘ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಯೋಜನೆಯಲ್ಲಿ ತೊಡಗಿದೆ' ಎಂಬ ವಿಸ್ತಾರವಾದ ‘ಹಿಂಡೆನ್‌ಬರ್ಗ್’ ವರದಿ ಪ್ರಕಟವಾಗುತ್ತಿದ್ದಂತೆ ಅದಾನಿ ಗ್ರೂಪ್ ಷೇರುಗಳು ತೀವ್ರವಾಗಿ ಕುಸಿದಿದ್ದವು.
ಹೊಡೆತ -2: ಅದಾನಿ ಗ್ರೀನ್ ಎನರ್ಜಿ ಮತ್ತು ಅಜುರೆ ಪವರ್ ಸಂಸ್ಥೆಗಳು ಭಾರತದಲ್ಲಿ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರದಲ್ಲಿ ಸೌರಶಕ್ತಿ ಗುತ್ತಿಗೆಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ ಸುಮಾರು 250 ಮಿಲಿಯನ್ ಡಾಲರ್ ಗೂ ಹೆಚ್ಚು ರೂಪಾಯಿಗಳ ಲಂಚ ನೀಡಿವೆ ಎಂದು ಆರೋಪಿಸಲಾಗಿದೆ. 2020-2024ರ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತದ ಲಂಚ ನೀಡಲಾಗಿದೆ ಎಂದು ಯುಎಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ ಮತ್ತು ಸೆಕ್ಯೂರಿಟಿ ಅಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ಆರೋಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ನ ಡಿಸ್ಟ್ರಿಕ್ಟ್ ಕೋರ್ಟ್ ಅದಾನಿ ಸೇರಿದಂತೆ 8 ಜನರ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದೆ.
ಹೊಡೆತ -3: ಇದೀಗ ಪುಟ್ಟ ದೇಶ ಕೀನ್ಯಾ ಕೂಡ ಬೃಹತ್ ಉದ್ಯಮಿ ಅದಾನಿ ವಿರುದ್ಧ ಸಿಡಿದೆದ್ದಿದೆ. ಅದಾನಿ ಗ್ರೂಪ್ ಕೀನ್ಯಾ ದೇಶದೊಂದಿಗೆ ಮಾಡಿಕೊಂಡಿದ್ದ ವಾಣಿಜ್ಯ ಒಪ್ಪಂದಗಳನ್ನು ರದ್ದು ಮಾಡುವುದಾಗಿ ಘೋಷಿಸಿದೆ. ಸಂಸತ್ತಿನ ಜಂಟಿ ಸೆಟ್ಟಿಂಗ್‌ಗೆ ನೀಡಿದ ‘ಸ್ಟೇಟ್ ಆಫ್ ದಿ ನೇಷನ್’ ಭಾಷಣದ ಸಮಯದಲ್ಲಿ, ಅಧ್ಯಕ್ಷ ವಿಲಿಯಂ ರುಟೊ ಅದಾನಿ ಗ್ರೂಪ್ ಜೊತೆ ಮಾಡಿಕೊಂಡಿರುವ ಮೂಲಸೌಕರ್ಯ ಒಪ್ಪಂದಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ- ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ: ರಕ್ಷಿಸುತ್ತಿರುವವರು ಯಾರು: ಸಿ.ಎಂ.ಸಿದ್ದರಾಮಯ್ಯ
ಬಿಲಿಯನೇರ್ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಕಂಪನಿಗಳು ಕೀನ್ಯಾದಲ್ಲಿ ಜೋಮೋ ಕೆನ್ಯಾಟ್ಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿವಾದಾತ್ಮಕ ಸ್ವಾಧೀನ ಸೇರಿದಂತೆ ಹಲವು ವ್ಯವಹಾರಗಳನ್ನು ನಡೆಸುತ್ತಿವೆ. ಸ್ಥಳೀಯ ತನಿಖಾಧಿಕಾರಿಗಳು ನೀಡಿರುವ ತಾಜಾ ಪುರಾವೆಗಳು ಮತ್ತು ತಮ್ಮ ಪಾಲುದಾರ ರಾಷ್ಟ್ರಗಳ ಮಾಹಿತಿಯ ಆಧಾರದ ಮೇಲೆ ಈ ನಿರ್ಧಾರವನ್ನು ಮಾಡಲಾಗಿದೆ. ಭ್ರಷ್ಟಾಚಾರದ ಬಗ್ಗೆ ನಿರ್ವಿವಾದದ ಪುರಾವೆಗಳು ಅಥವಾ ವಿಶ್ವಾಸಾರ್ಹ ಮಾಹಿತಿಯ ಮುಖಾಂತರ ನಾನು ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ನಾನು ಹಿಂದೆ ಹೇಳಿದ್ದೇನೆ ಮತ್ತು ಈಗ ಪುನರುಚ್ಚರಿಸುತ್ತೇನೆ" ಎಂದು ವಿಲಿಯಂ ರುಟೊ ವಿವರಿಸಿದ್ದಾರೆ. ಜೊತೆಗೆ ಅದಾನಿ ಗ್ರೂಪ್ ಜೊತೆ ಮಾಡಿಕೊಂಡಿರುವ ಒಪ್ಪಂದಗಳನ್ನು ರದ್ದುಗೊಳಿಸುವಂತೆ ಸಂಬಂಧಪಟ್ಟ ಸಚಿವಾಲಯಗಳಿಗೆ ನಿರ್ದೇಶನ ನೀಡಿದ್ದಾರೆ.
ಕೀನ್ಯಾ ಕ್ರಮದಿಂದ ಅದಾನಿ ಗ್ರೂಪ್ ನಿಜಕ್ಕೂ ಆತಂಕವನ್ನು ಎದುರಿಸುವಂತಾಗಿದೆ. ಕೀನ್ಯಾ ಮಾದರಿಯಲ್ಲಿ ಮುಂದೆ ಬೇರೆ ರಾಜ್ಯಗಳು ವ್ಯವಹಾರವನ್ನು ಕಡಿದುಕೊಂಡರೆ ಹೇಗೆ ಎನ್ನುವ ಆತಂಕ ನಿರ್ಮಾಣವಾಗಿದೆ. ಜೊತೆಗೆ ಅದಾನಿ ಗ್ರೂಪ್ ಗಳ ಷೇರುಗಳು ಕುಸಿಯಬಹುದು ಎಂಬ ಭೀತಿಯೂ ಕಾಡತೊಡಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ