ಹವಾಯ್ ಚಪ್ಪಲಿ, ಮಂಕಿಕ್ಯಾಪ್ ಧರಿಸಿ 'ಕೆಜಿಎಫ್' ವೀಕ್ಷಿಸಿದ ನವರಸನಾಯಕ!

ನವರಸನಾಯಕ ಜಗ್ಗೇಶ್ ಈ ವೇಷದಲ್ಲಿ ಸಿನಿಮಾ ವೀಕ್ಷಿಸಲು ಹೋದದ್ದು ಏಕೆ? ನೀನು ಅಸಮಾನ್ಯ ಪ್ರತಿಭೆ ಎಂದು ಜಗ್ಗಣ್ಣ ಹೇಳಿದ್ದು ಯಾರಿಗೆ...

Last Updated : Dec 26, 2018, 04:29 PM IST
ಹವಾಯ್ ಚಪ್ಪಲಿ, ಮಂಕಿಕ್ಯಾಪ್ ಧರಿಸಿ 'ಕೆಜಿಎಫ್' ವೀಕ್ಷಿಸಿದ ನವರಸನಾಯಕ! title=

ಬೆಂಗಳೂರು: ದೇಶಾದ್ಯಂತ ಹೆಚ್ಚು ಸದ್ದು ಮಾಡುತ್ತಿರುವ ಚಿತ್ರ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್'. ಎಲ್ಲಾ ವಯೋಮಾನದವರೂ 'ಕೆಜಿಎಫ್' ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಏತನ್ಮಧ್ಯೆ, ಸ್ಯಾಂಡಲ್ ವುಡ್ ನ ಸ್ಟಾರ್ ನಟ, ನವರಸ ನಾಯಕ ಜಗ್ಗೇಶ್ ಹವಾಯ್ ಚಪ್ಪಲಿ, ಮಂಕಿಕ್ಯಾಪ್ ಧರಿಸಿ 'ಕೆಜಿಎಫ್' ಚಿತ್ರ ವೀಕ್ಷಿಸಿದ್ದಾರೆ. ಅದಕ್ಕೆ ಕಾರಣ ಏನು ಅನ್ನೋದನ್ನ ಜಗ್ಗಣ್ಣನ ಮಾತುಗಳಲ್ಲೇ ತಿಳಿಯಿರಿ...

ಲುಂಗಿ ಹವಾಯ್ ಚಪ್ಪಲಿ ಮಂಕಿಕ್ಯಾಪ್ ಹಾಕಿ ಬಹಳ ದಿನದ ನಂತರ ಒಬ್ಬನೆ ಮುಂದಿನ ಕ್ಲಾಸ್ಗೆ ಹೋಗಿ ಕೆಜಿಎಫ್ ನೋಡಿದೆ. 38ವರ್ಷದ ಹಿಂದೆ ನಾನು ಹೀಗೆ ಸಿನಿಮಾಗೆ ಹೋಗುತ್ತಿದ್ದದ್ದು! ಹಾಗೆ ಹೋದದ್ದು ಸಾಮಾನ್ಯ ಜೀವನ ಎಂಜಾಯ್ ಮಾಡಲು.. ಕಾರಾಪುರಿ ಟೀ ಮಧ್ಯಂತರದಲ್ಲಿ ಮಜನೀಡಿತು..ಯಾರು ಗುರುತು ಹಿಡಿಯದಂತೆ ಜಾಗ್ರತೆ ವಹಿಸಿದೆ ಕಾರಣ ಏಕಾಂತ ಎಂಬ ಎಂಜಾಯ್‌ಮೆಂಟ್!

'ನನ್ನಪಕ್ಕ ಸುಮಾರು 17 ವರ್ಷದ ಹುಡುಗ ಹೋಟೆಲ್ ಸರ್ವರ್ ಕೂತಿದ್ದ! ಅವನ ಜೊತೆ ದನಿ ಬದಲಾಯಿಸಿ ನಡುನಡುವೆ ಚರ್ಚಿಸುತ್ತಿದ್ದೆ, ಪ್ರತಿಪ್ರಶ್ನೆಗೆ ಅವನ ಉತ್ತರ ಚಿಂದಿ ಅನ್ನುತ್ತಿದ್ದ! ಅವನು ಪಕ್ಕ ದರ್ಶನ ಅಭಿಮಾನಿ ಅಂತೆ! ಅವನು ಹೇಳಿದ ಮಾತು ಕಣ್ಣುಒದ್ದೆಯಾಯಿತು! ಕನ್ನಡ ಗೆಲ್ಲಬೇಕು ಸಾರ್ ಮಗಂದು ಬರಿ ಬೇರೆ ಭಾಷೆಗೆ ಜೈಅಂತಾರೆ ಈಗ ಅವರ ಪುಂಗಿಬಂದ್ ಅಂದ' ಎಂದು ಅವರು ಟ್ವೀಟ್ ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಇದೇ ಸಮಯದಲ್ಲಿ ಚಿತ್ರವನ್ನು ಹಾಡಿ ಹೋಗಳಿರುವ ಜಗ್ಗೇಶ್, 2ಅಕ್ಷರದ ನಟ 3ಅಕ್ಷರದ ಮನಗಳ 2ಅಕ್ಷರದಿಂದ ಕಲಾಸೇವೆಯಲ್ಲಿ ಸಾರ್ಥಕ ಸಾಧನೆ ಮಾಡಿಬಿಟ್ಟ #hatsoff dear.. 
"ಯಶ್ ಕನ್ನಡ ಮನಗಳ ಖುಷಿ ಪಡಿಸಿದ"
ನಿರ್ದೇಶಕ #neel ನೀನು ಅಸಮಾನ್ಯ ಪ್ರತಿಭೆ.. ಕನ್ನಡವೆಂದರೆ ಇದ್ದ ತಾತ್ಸಾರ ಮನಸ್ಥಿತಿ ಬದಲಾಗುವಂತೆ  ಮಾಡಿಬಿಟ್ಟಿರಿ.. #hombalefilms ನಿಮ್ಮ ಎದೆಗಾರಿಕೆಗೆ ನನ್ನ ಸಲಾಂ.. #Kgf ನೋಡಿ ಖುಷ್ ಆದೆ.. ಎಂದು ಬರೆದಿದ್ದಾರೆ.

Trending News