ಬೆಂಗಳೂರು: ನೀರಿಲ್ಲಾ ಮಳೆಯಿಲ್ಲಾ ಎಂದು ಕೊರಗುವ ಮನುಜರೆ ನೀವುಗಳು ಎಚ್ಚೆತ್ತು ಪರಿಸರಕ್ಕೆ ಸಹಾಯ ಮಾಡದಿದ್ದರೆ ನಮ್ಮ ನಿಮ್ಮ ಮುಂದಿನ ತಲೆಮಾರು ಚಿತ್ರಪಟದಲ್ಲಿ ಕೆರೆಕಟ್ಟೆ ನೋಡಬೇಕು. ಮಳೆಗೆ ಮೂಲ ಮರಗಳು, ಮುಕ್ಕಾಲು ಭಾಗ ಮರಕಡಿದು ಮನೆಕಟ್ಟಿದ ಮನುಜರೆ
ಉಳಿದ ಕಾಲುಭಾಗ ಮನೆಗೊಂದು ಮರಬೆಳಸಿ !save & grow trees.. ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ನೀರಿಲ್ಲಾ ಮಳೆಯಿಲ್ಲಾ ಎಂದು ಕೊರಗುವ
ಮನುಜರೆ ನೀವುಗಳು ಎಚ್ಚೆತ್ತು ಪರಿಸರಕ್ಕೆ
ಸಹಾಯ ಮಾಡದಿದ್ದರೆ ನಮ್ಮ ನಿಮ್ಮ ಮುಂದಿನ ತಲೆಮಾರು ಚಿತ್ರಪಟದಲ್ಲಿ ಕೆರೆಕಟ್ಟೆ ನೋಡಬೇಕು,
ಮಳೆಗೆ ಮೂಲ ಮರಗಳು,ಮುಕ್ಕಾಲು ಬಾಗ ಮರಕಡಿದು ಮನೆಕಟ್ಟಿದ ಮನುಜರೆ
ಉಳಿದ ಕಾಲುಬಾಗ ಮನೆಗೊಂದು ಮರಬೆಳಸಿ,ಪರಿಸರಕ್ಕೆ ಆಗಿರುವ ಏರುಪೇರು ಸರಿಪಡಿಸಿ!save & grow trees..— ನವರಸನಾಯಕ ಜಗ್ಗೇಶ್ (@Jaggesh2) May 22, 2019
ಮನೆಗೊಂದು ಮರ ಬೆಳಸಿ, ಪರಿಸರ ಉಳಿಸಿ ಎಂದು ಸಾಲು ಸಾಲು ಟ್ವೀಟ್ ಮಾಡಿರುವ ಜಗ್ಗೇಶ್, ಮನೆಕಟ್ಟಿದ ಕ್ಷಣ ಈಶಾನ್ಯ ಒಳ್ಳೆದು ಎಂದು ಬೋರ್ ಕೊರೆಸಿ ಭೂಮಿತಾಯಿ ಒಡಲ ಬಗೆದು ಬರಿದುಮಾಡೋ ನಾವು ಯಾಕೆ ಪ್ರತಿ ಮನೆಗೆ ಮಳೆ ಕುಯಿಲು ಮಾಡಿಸೋಲ್ಲಾ! ಮೊದಲು ಅದ ಮಾಡಿ! ನಿಮ್ಮ ಮೆನೆಯ ಮೇಲೆ ಬಿದ್ದ ಮಳೆ ನೀರು ನಿಮ್ಮ ಮನೆಯಲ್ಲಿ ಹಿಂಗಿ ಬಿಸಿಲು ಕಾಲದಲ್ಲಿ ಬೋರ್ ಬತ್ತಲ್ಲಾ! ಆಧುನಿಕ ಯುಗದವರಾಗಿ ಆಧುನಿಕವಾಗಿ ಯಾಕೆ ಯೋಚಿಸುತ್ತಿಲ್ಲಾ ನಾವುಗಳು! ಎಂದು ಅರಿವು ಮೂಡಿಸಿದ್ದಾರೆ.
ಇನ್ನು ರಸ್ತೆ ಮೇಲ್ದರ್ಜೆಗೆ ಎರಿಸಲು 1.30 ಕೋಟಿ ಜನರಿಗಾಗಿ ರಸ್ತೆ ಮಾಡಿ, ಮಳೆನೀರು ಚರಂಡಿಗೆ ಹೋಗುವುದು ತಪ್ಪಿಸಲು ರಸ್ತೆಯಲ್ಲಿ ಮಳೆನೀರು ಸಂಗ್ರಹದ ಹಿಂಗುಗುಂಡಿ ಮಾಡಿಸಿ! ಅಧಿಕಾರದಲ್ಲಿ ಉಳಿಯಲು ಮಾತ್ರ ತಂತ್ರಮಾಡುವ ರಾಜಕಾರಣಿಗಳೆ ಹಾಗೂ ರಾಜಕೀಯ ಪಕ್ಷಗಳೆ! ಇನ್ನಾದರು ಜಾತಿ, ಧರ್ಮ, ಭಾಷೆ ಬಿಟ್ಟು ಆಧುನಿಕವಾಗಿ ಯೋಚಿಸಿ ಸತ್ತಮೇಲು ಉಳಿಯಿರಿ ಮುಖಂಡರೆ! ಎಂದು ರಾಜಕಾರಣಿಗಳಿಗೆ ಕರೆ ನೀಡಿದ್ದಾರೆ.
ಮುಂದಿನ ಪೀಳಿಗೆಗಾಗಿ ಬದಲಾಗಿ:
ಹಳ್ಳಿಗಳ ಕಡೆ ಕೆರೆಕಟ್ಟೆ ಹೂಳುತೆಗೆಸಿ, ಕಡ್ಡಾಯ ಸಣ್ಣಪ್ರಮಾಣದ ಚಕ್ ಡ್ಯಾಮ್ ನಿರ್ಮಿಸಿ. ಪ್ರತಿ ತಾಲೂಕಿನ ಸಣ್ಣ ಅರಣ್ಯದಲ್ಲಿ ಮರಕದ್ದು ಬರಿದು ಮಾಡುವ ಕಳ್ಳರ ಶಿಕ್ಷಿಸಿ. ಪುನ ಮರನೆಟ್ಟು ಕಾಡು ಬೆಳೆಸುವ ಕಾರ್ಯಮಾಡಲು ಜಾಗೃತಿ ಮೂಡಿಸಿ! ಪ್ರಶಾಂತ ವಾತಾವರಣ
ಹಳ್ಳಿಗಳು ಇಂದು ಮನೆಗೊಂದು ರಾಜಕೀಯ ಪಕ್ಷದ ಕಾರ್ಯಕರ್ತರಾಗಿದ್ದಾರೆ ದೌರ್ಭಾಗ್ಯ ಬದಲಾಗಿ!
ಅನಾವಶ್ಯಕ ನೀರು ಹರಿದು ಸಮುದ್ರ ಸೇರುವುದನ್ನ ತಪ್ಪಿಸಲು ನದಿ ಜೋಡಣೆಯ ಕಾರ್ಯಮಾಡಲು ರಾಜ್ಯಗಳ ಒಮ್ಮತ ಮೂಡಿಸಿ ಕಾರ್ಯರೂಪಿಸಿ! ತಮಿಳುನಾಡು, ಆಂಧ್ರದ ನಡುವೆ ಹೊಸಡ್ಯಾಂ ಯೋಜನೆಗೆ ಸಕಾರಾತ್ಮಕ ಚಿಂತನೆ ಪಕ್ಷಾತೀತವಾಗಿ ಮಾಡಿ! ಇದಕ್ಕೆ ಪ್ರಾಮಾಣಿಕ ಮನಸ್ಸುಬೇಕು ಅಷ್ಟೆ' ಎಲ್ಲಾ ಸವಲತ್ತು ಇದೆ ನಮ್ಮ ಬಳಿ ಇಚ್ಛಾಶಕ್ತಿ ಕೊರತೆ! ಬದಲಾಗಿ ಮುಂದಿನ ಪೀಳಿಗೆಗಾಗಿ! ಎಂದಿದ್ದಾರೆ.
ಕೋಟಿಗಟ್ಟಲೆ ಜನರ ಸೇತುವೆಯಾಗಿ ಇರುವ ಈ ಸಾಮಾಜಿಕ ಜಾಲತಾಣ ಇಂಥ ಶ್ರೇಷ್ಟ ಆಧುನಿಕ ವಿಚಾರ ವಿನಿಮಯ ಆಗದೆ ನಟ, ನಟಿ, ದೇವರು ಮಾಡಿ! ರಾಜಕೀಯ ಕೆಸರೆಚಾಟಕ್ಕೆ ಸೀಮಿತವಾಗಿದೆ ದೌರ್ಭಾಗ್ಯ! ಯುವ ಮನಸುಗಳೆ ದಯಮಾಡಿ ಪರಿಸರ ಸಮಾಜಕ್ಕಾಗಿ ಬಳಸುವ ಈಜಾಗ!
ಆತ್ಮ ತೃಪ್ತಿ ಸಿಗುತ್ತದೆ! ಸರಿಯಾಗಿ ಬಳಕೆ ಆಗದಿದ್ದರೆ ಈ ಜಾಗ ವ್ಯರ್ಥ ಸಮಯ, internet ಹಣ! ಎಂದು ಸಾಮಾಜಿಕ ಜಾಲತಾಣವನ್ನು ಒಂದು ಒಳ್ಳೆಯ ಉದ್ದೇಶಕ್ಕಾಗಿ ಬಳಸುವಂತೆ ಜಗ್ಗಣ್ಣ ಪ್ರೀತಿಯ ಸಲಹೆ ನೀಡಿದ್ದಾರೆ.
ಕೋಟಿಗಟ್ಟಲೆ ಜನರ ಸೇತುವೆಯಾಗಿ ಇರುವ ಈಸಾಮಾಜಿಕ ಜಾಲತಾಣ ಇಂಥ ಶ್ರೇಷ್ಟ ಆದುನಿಕ ವಿಚಾರ ವಿನಿಮಯ ಆಗದೆ ನಟನಟಿ ದೇವರುಮಾಡಿ!ರಾಜಕೀಯ ಕೆಸರೆಚಾಟಕ್ಕೆ ಸೀಮಿತವಾಗಿದೆ ದೌರ್ಭಾಗ್ಯ!
ಯುವಮನಸುಗಳೆ ದಯಮಾಡಿ ಪರಿಸರ ಸಮಾಜಕ್ಕಾಗಿ ಬಳಸುವ ಈಜಾಗ!
ಆತ್ಮ ತೃಪ್ತಿ ಸಿಗುತ್ತದೆ!ಸರಿಯಾಗಿ ಬಳಕೆ ಆಗದಿದ್ದರೆ ಈಜಾಗ ವ್ಯೆರ್ಥ ಸಮಯ internet ಹಣ!ಪ್ರೀತಿಯ ಸಲಹೆ..— ನವರಸನಾಯಕ ಜಗ್ಗೇಶ್ (@Jaggesh2) May 22, 2019