ಬೆಂಗಳೂರು: ಕನ್ನಡ ಚಿತ್ರ ಜಗತ್ತಿನ ಕಣ್ಮಣಿಗಳಾದ ವರನಟ ಡಾ. ರಾಜ್ ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರ ನೆನಪು ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಅಚ್ಚ ಹಸಿರು. ಈ ಇಬ್ಬರೂ ತಾರೆಯರು ಒಟ್ಟಿಗೆ ಅಭಿನಯಿಸಿದ್ದ ಚಿತ್ರ ಗಂಧದ ಗುಡಿ.
ಗಂಧದಗುಡಿ ಚಿತ್ರದಲ್ಲಿ ಅಣ್ಣಾವ್ರು ಮತ್ತು ವಿಷ್ಣು ದಾದ ಇಬ್ಬರೂ ಸಹೋದರರು. ಆದರೆ, ಡಾ. ರಾಜ್ ಅರಣ್ಯ ಅಧಿಕಾರಿಯಾಗಿ ಕಾಣಿಸಿಕೊಂಡರೆ, ವಿಷ್ಣು ಖಳನಟನಾಗಿ ಕಾಣಿಸಿಕೊಂಡಿದ್ದರು. ಎಂ.ಪಿ. ಶಂಕರ್ ನಿರ್ಮಾಪಕರಾಗಿದ್ದ ಈ ಚಿತ್ರವನ್ನು ವಿಜಯ್ ನಿರ್ದೇಶಿಸಿದ್ದರು. ರಾಜ್ ಕುಮಾರ್, ಕಲ್ಪನಾ, ವಿಷ್ಣುವರ್ಧನ್, ಎಂ.ಪಿ. ಶಂಕರ್, ಆದವಾನಿ ಲಕ್ಷ್ಮೀದೇವಿ, ಬಾಲಕೃಷ್ಣ, ನರಸಿಂಹರಾಜು ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರ 1973ರಲ್ಲಿ ತೆರೆಕಂಡಿತ್ತು.
ಇದೀಗ ಡಿಡಿ ವಾಹಿನಿಯಲ್ಲಿ ಆಕಸ್ಮಿಕವಾಗಿ ಈ ಎವರ್ ಗ್ರೀನ್ ಚಿತ್ರದ ಕ್ಲೈಮಾಕ್ಸ್ ದೃಶ್ಯವನ್ನು ಕಂಡು ನವರಸ ನಾಯಕ ಜಗ್ಗೇಶ್ ಭಾವುಕರಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಆಕಸ್ಮಿಕ DD ಅಲ್ಲಿ #ಗಂಧದಗುಡಿ ಚಿತ್ರದ ಕ್ಲೈಮಾಕ್ಸ್ ನ ಈ ದೃಶ್ಯ ಕಣ್ಣಿಗೆ ಬಿತ್ತು.. ಭಾವುಕನಾದೆ...ಕಾರಣ ಕಲಾವಿದ ದೈಹಿಕವಾಗಿ ಸತ್ತರು ಜನರ ಮಾನಸದಲ್ಲಿ ಉಳಿಯುವ ಚಿರಂಜೀವಿ ಎಂದು.. ವಿಶ್ವದಲ್ಲಿ ಬೇರೆ ಯಾರಿಗುಂಟು ಈ ಸೌಭಾಗ್ಯ ಅಲ್ಲವೆ..
ಆಕಸ್ಮಿಕ DD ಅಲ್ಲಿ #ಗಂಧದಗುಡಿ ಚಿತ್ರದ
ಕ್ಲೈಮಾಕ್ಸ್ ನ ಈ ದೃಶ್ಯ ಕಣ್ಣಿಗೆ ಬಿತ್ತು..
ಭಾವುಕನಾದೆ...ಕಾರಣ ಕಲಾವಿದ ದೈಹಿಕವಾಗಿ ಸತ್ತರು ಜನರ ಮಾನಸದಲ್ಲಿ ಉಳಿಯುವ ಚಿರಂಜೀವಿ ಎಂದು..
ವಿಶ್ವದಲ್ಲಿ ಬೇರೆ ಯಾರಿಗುಂಟು ಈ ಸೌಭಾಗ್ಯ ಅಲ್ಲವೆ..
ನಾನು ಕಂಡ ಈ ದೃಶ್ಯದ… https://t.co/jyyP3njiMm— ನವರಸನಾಯಕ ಜಗ್ಗೇಶ್ (@Jaggesh2) May 19, 2019
"ನಾನು ಕಂಡ ಈ ದೃಶ್ಯದ ಪಾತ್ರದಾರಿಗಳು ರಾಜಣ್ಣ ವಿಷ್ಣುಸಾರ್ ಆಧಿವಾನಿ ಲಕ್ಷ್ಮೀಬಾಯ್ ಅಮ್ಮ ಮಕ್ಕಳಾಗಿ ಸಾವಿನಲ್ಲಿ ಒಂದಾಗುವ ಅಮೋಙ್ನ ಅಭಿನಯ ನೀಡಿದ್ದರು... ಈಗ ಈ ಮೂವರು ವಿಧಿವಶರು ದೈಹಿಕವಾಗಿ..ಮಾನಸಿಕವಾಗಿ ಜೀವಂತರು ತೆರೆಯಮೇಲೆ.."
"ಹಾಗೆ ನಾನು ಎಷ್ಟು ಅದೃಷ್ಟವಂತ ಕಲಾವಿದನಾಗಿ ಹುಟ್ಟಿದ್ದಕ್ಕೆ.. ಅನ್ನದ ಋಣ ಮುಗಿದಮೇಲೆ ನಾನು ದೈಹಿಕವಾಗಿ ನಿರ್ಗಮಿಸುವೆ ಒಂದುದಿನ.. ಆದರು ಜನಮಾನದಲ್ಲಿ ಉಳಿಯುವ ಯೋಗ ಸಿಕ್ಕಿತ್ತಲ್ಲಾ ಎಂದು ದೇವರು ಕೊಟ್ಟ ನನ್ನ ಕಲಾಕ್ಷೇತ್ರಕ್ಕೆ ಧನ್ಯವಾದ ಅರ್ಪಿಸಿತು ಧನ್ಯತೆಯಿಂದ ನನ್ನಮನ..
ಶಾಪಗ್ರಸ್ತ ಗಂಧರ್ವರು ಕಲಾವಿದರು.. ವಿಶ್ವದಲ್ಲಿ ಎಲ್ಲರಿಗು ಸಾವುಂಟು ಜನರ ಕಲೆಯಲ್ಲಿ ಸಂತೋಷ ಪಡಿಸುವ ಕಲಾವಿದರಿಗೆ ಇಲ್ಲಾ..ಇದಲ್ಲವೆ ಜನ್ಮಾಂತರಪುಣ್ಯ... ಕಲಾವಿಶಾರದೆ ಧನ್ಯೋಸ್ಮಿ.." ಎಂದು ಅವರು ತಮ್ಮ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.