ಬೆಂಗಳೂರು: ದಿವಂಗತ ನಟ ಅಂಬರೀಶ್ ಪತ್ನಿ ಸುಮಲತಾ ವಿರುದ್ಧ ಸಚಿವ ಹೆಚ್.ಡಿ.ರೇವಣ್ಣ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿರುವ ನವರಸನಾಯಕ ಜಗ್ಗೇಶ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿರುವ ಸುಮಲತಾ ವಿರುದ್ಧ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ "ಗಂಡ ಸತ್ತು ಒಂದೆರದು ತಿಂಗಳೂ ಆಗಿಲ್ಲ. ಸುಮಲತಾ ಅವರಿಗೆ ರಾಜಕೀಯ ಯಾಕೆ ಬೇಕಿತ್ತು" ಎಂದು ಸುಅಮಲತಾ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿ ಶುಕ್ರವಾರ ಅವಮಾನ ಮಾಡಿದ್ದರು.
ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನಟ ಜಗ್ಗೇಶ್, ರೇವಣ್ಣರವರೇ ನೀವು ಸಾಮಾನ್ಯ ಜನರಲ್ಲ! ಈ ದೇಶದ ಮಾಜಿ ಪ್ರಧಾನಿಯ ಮಗ. ಸಂವಿಧಾನ ಭಾರತದ ಎಲ್ಲ ಪ್ರಜೆಗೂ ವೈಯಕ್ತಿಕ ಅಭಿಪ್ರಾಯ ಮಂಡಿಸುವ ಹಕ್ಕು ನೀಡಿದೆ. ಹಾಗಂತ ಇನೊಬ್ಬರಿಗೆ ಮನಸಿಗೆ ಘಾಸಿ ಮಾಡಬಾರದು. ನಿಮ್ಮ ಮನೆಯ ಸದಸ್ಯರಾಗಿದ್ದರೆ ಹೀಗೆ ಮಾತಾಡುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅಂಬಿ ಮೌನದಿಂದ ಜೆಡಿಎಸ್ನ ಪುಟ್ಟರಾಜ ಗೆದ್ದದ್ದು ಅಂತಾ ದೊಡ್ಡಗೌಡರೆ ಹೇಳಿದ್ದರು. ಇದನ್ನು ನೆನಪಿಡಿ! ನನ್ನ ಪಕ್ಷ ಬೇರೆ! ಆದರೆ, ಸುಮಲತಾ ನನ್ನ ಉದ್ಯಮದ ಹೆಣ್ಣು..ಅವರನ್ನು ಗೌರವಿಸಿ ಎಂದು ಟ್ವೀಟ್ ಮಾಡಿದ್ದಾರೆ.
ರೇವಣ್ಣರವರೆ ನೀವು ಸಾಮಾನ್ಯ ಜನರಲ್ಲಾ!ಈದೇಶದ ಮಾಜಿ ಪ್ರಧಾನಿಮಗ!ಸಂವಿಧಾನ ಭಾರತದ ಎಲ್ಲಾಪ್ರಜೆಗು ವೈಯಕ್ತಿಕ ಅಭಿಪ್ರಾಯ ಮಂಡಿಸುವ ಹಕ್ಕುನೀಡಿದೆ!ನಿಮ್ಮಮನೆಯ ಸದಸ್ಯರಾಗಿದ್ದರೆ ಹೀಗೆ ಮಾತಾಡುತ್ತಿದ್ದರ?
ಅಂಬಿಮೌನವೆ jdsಪುಟ್ಟರಾಜ ಗೆದ್ದದ್ದು ಅಂತ ದೊಡ್ಡಗೌಡರೆ ಹೇಳಿದ್ದರು ನೆನಪಿಡಿ!
ನನ್ನಪಕ್ಷಬೇರೆ!ಆದರೆ ಸುಮಲತ ನನ್ನ ಉಧ್ಯಮದಹೆಣ್ಣು ಗೌರವಿಸಿ! https://t.co/spddMb5aML— ನವರಸನಾಯಕ ಜಗ್ಗೇಶ್ (@Jaggesh2) March 8, 2019
ಮುಂದುವರೆದು, ಅಂಬಿ ಸತ್ತಾಗ ಸುತ್ತಲು ಇದ್ದ ಉದ್ಯಮದ ಸನ್ಮಿತ್ರರೇ ಈಗಲಾದರು ಬಾಯಿತೆಗೆದು ಇಂಥ ಮಾತುಗಳನ್ನು ಖಂಡಿಸಬೇಕು! ಆಗಲೆ ಕನ್ನಡ ಚಿತ್ರರಂಗಕ್ಕೆ 40ವರ್ಷ ದುಡಿದ ಹಿರಿಯಣ್ಣ ಅಂಬರೀಷ್ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ರಾಜಕೀಯ ಪಕ್ಷಗಳು ನೂರಿರಲಿ. ನಾವು ಶಾರದೆಯ ಮಕ್ಕಳು, ಚಿತ್ರರಂಗ ಇದನ್ನು ನೆನಪಿಡಬೇಕು ಎಂದು ಸುಮಲತಾ ಪರವಾಗಿ ಚಿತ್ರರಂಗ ನಿಲ್ಲುವಂತೆ ಜಗ್ಗೇಶ್ ಮನವಿ ಮಾಡಿದ್ದಾರೆ.
ಅಂಬಿ ಸತ್ತಾಗ ಸುತ್ತಲು ಇದ್ದ ಉಧ್ಯಮದ
ಸನ್ಮಿತ್ರರೆ ಈಗಲಾದರು ಬಾಯಿತೆಗೆದು ಇಂಥ ಮಾತುಗಳನ್ನು ಕಂಡಿಸಬೇಕು!ಆಗಲೆ ಉಧ್ಯಮಕ್ಕೆ 40ವರ್ಷ ರಕ್ತಬಸಿದ
ನಮ್ಮ ಹಿರಿಯಣ್ಣನಿಗೆ ಆತ್ಮಶಾಂತಿ!
ಕಾಯುವೆ ನಮ್ಮ ಉಧ್ಯಮ ಹೇಗೆ ಪ್ರತಿಕ್ರಿಯಿಸುತ್ತದೆ!ಕಾರಣ ರಾಜಕೀಯ ಪಕ್ಷಗಳು ನೂರಿರಲಿ ನಾವು ಶಾರದೆಯ ಮಕ್ಕಳು!ನೆನಪಿಡಿ ಚಿತ್ರರಂಗವೆ!ಇದು ಉಧ್ಯಮಕ್ಕೆ ಅಪಮಾನ! https://t.co/1r1k3nXh8w— ನವರಸನಾಯಕ ಜಗ್ಗೇಶ್ (@Jaggesh2) March 8, 2019