Indian Premier League, CSK Team: ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK), ಈ ಋತುವಿನಲ್ಲಿ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡರಲ್ಲಿ ಗೆದ್ದರೆ ಎರಡರಲ್ಲಿ ಸೋತಿದೆ. ಈ ತಂಡದ ಆಟಗಾರನೊಬ್ಬ ತನ್ನ ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆದಿದ್ದಾನೆ.
LSG Players Emotional Story: ಇತ್ತೀಚೆಗೆ ಆರ್ ಸಿ ಬಿ ವಿರುದ್ಧ ಕೊನೆಯ ಓವರ್’ನಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ್ದ ಈತ ತಂಡದ ಗೆಲುವಿಗೆ ಕೊಡುಗೆ ನೀಡಿದ್ದ. ಲಕ್ನೋ ಸೂಪರ್ ಜೈಂಟ್ಸ್ (ಎಲ್ ಎಸ್ ಜಿ) ಪರ ಆಡುತ್ತಿರುವ ನಿಕೋಲಸ್ ಪೂರನ್ ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.
R Ashwin allegation against umpire: ಬುಧವಾರ ರಾತ್ರಿ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ಸಾಕಷ್ಟು ಇಬ್ಬನಿ ಬಿದ್ದಿದ್ದು, ಈ ಕಾರಣದಿಂದ ಸ್ವತಃ ಅಂಪೈರ್’ಗಳೇ ಎರಡನೇ ಇನ್ನಿಂಗ್ಸ್ನಲ್ಲಿ ಚೆಂಡನ್ನು ಬದಲಾಯಿಸಿದ್ದು ಅಶ್ವಿನ್’ಗೆ ಅಚ್ಚರಿ ಮೂಡಿಸಿದೆ. ಈ ಪಂದ್ಯದಲ್ಲಿ ಆಫ್ ಸ್ಪಿನ್ನರ್ 25 ರನ್ಗಳಿಗೆ ಎರಡು ವಿಕೆಟ್ ಪಡೆದರು. ಈ ಪಂದ್ಯವನ್ನು ರಾಜಸ್ಥಾನ ಮೂರು ರನ್ಗಳಿಂದ ಗೆದ್ದುಕೊಂಡಿತು
CSK vs RR: ಟಾಸ್ ಗೆದ್ದ ಧೋನಿ ಮೊದಲು ರಾಜಸ್ಥಾನವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಸಂದರ್ಭದಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆ ಹಾಕಿದರು. ಗೆಲುವಿನ ಗುರಿ ಬೆನ್ನತ್ತಿದ್ದ ಚೆನ್ನೈ 20 ಓವರ್ ಅಂತ್ಯಕ್ಕೆ 172 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು, ತವರಿನಲ್ಲಿ ಸೋಲುಂಡ ನೋವನ್ನು ಹೊರತು ಪಡಿಸಿದರೆ ಚೆನ್ನೈ ತಂಡ ಅದ್ಭುತವಾಗಿ ಆಟವಾಡಿದ್ದಾರೆ.
Most captaincy in IPL: 41 ವರ್ಷದ ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಐಪಿಎಲ್ನಲ್ಲಿ ಇದುವರೆಗೆ 214 ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ (ಆರ್ಪಿಎಸ್) ತಂಡದ ನಾಯಕರಾಗಿ 14 ಬಾರಿ ಮತ್ತು 200 ಬಾರಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
ICC Latest T20 Ranking: ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಸೂರ್ಯಕುಮಾರ್ ಯಾದವ್ ಕೆಟ್ಟ ಹಂತದ ಮೂಲಕ ಸಾಗುತ್ತಿದ್ದಾರೆ. ಆದರೆ ಅವರು ICC (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಪುರುಷರ ಚ. ಸೂರ್ಯಕುಮಾರ್ 906 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
Team India: ಪಿಯೂಷ್ ಚಾವ್ಲಾ 2012ರಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಪರ ಕೊನೆಯ ಟಿ20 ಪಂದ್ಯ ಆಡಿದ್ದರು. ಆ ಬಳಿಕ ಅವರಿಗೆ ಟೀಂ ಇಂಡಿಯಾದ ಯಾವುದೇ ಫಾರ್ಮೆಟ್ನಲ್ಲಿ ಅವಕಾಶ ಸಿಕ್ಕಿಲ್ಲ. ಚಾವ್ಲಾ ಟೀಂ ಇಂಡಿಯಾ 7 T20 ಪಂದ್ಯಗಳನ್ನು ಆಡಿದ್ದರೆ, ಅದರಲ್ಲಿ ಅವರು 4 ವಿಕೆಟ್’ಗಳನ್ನು ಪಡೆದಿದ್ದಾರೆ, 25 ODIಗಳಲ್ಲಿ 32 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅಲ್ಲದೆ 3 ಟೆಸ್ಟ್ ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ.
IPL 2023, DC vs MI: ಟೀಮ್ ಇಂಡಿಯಾದ ಫ್ಲಾಪ್ ಕ್ರಿಕೆಟಿಗ ಮನೀಶ್ ಪಾಂಡೆಗೆ ಐಪಿಎಲ್ 2023ರಲ್ಲಿ ಆಡಲು ಡೆಲ್ಲಿ ಕ್ಯಾಪಿಟಲ್ಸ್ ಸತತ ಎರಡನೇ ಅವಕಾಶವನ್ನು ನೀಡಿದೆ. ಆದರೆ ಈ ಆಟಗಾರನು ಸಂಪೂರ್ಣ ವಿಫಲವಾದನು. ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ, ಮನೀಶ್ ಪಾಂಡೆ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 3 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಕೇವಲ 26 ರನ್ ಗಳಿಸಿ ಔಟಾದರು. ಇದಕ್ಕೂ ಮೊದಲು, ಏಪ್ರಿಲ್ 8 ರ ಶನಿವಾರದಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿಯೂ ಸಹ ಡೆಲ್ಲಿ, ಮನೀಶ್ ಪಾಂಡೆ ಅವರನ್ನು 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಫೀಲ್ಡಿಂಗ್ ಇಳಿಸಿತು, ಆದರೆ ಅವರು ಶೂನ್ಯ ಸ್ಕೋರ್;ನಲ್ಲಿ ಔಟಾದರು.
Team India: ಟೀಂ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಸತತ ಪ್ರಯತ್ನ ನಡೆಸುತ್ತಿರುವ ಕ್ರಿಕೆಟಿಗ ಪೃಥ್ವಿ ಶಾ ಮುಂಬೈ ವಿರುದ್ಧವೂ ಸೋಲು ಕಂಡಿದ್ದಾರೆ. 10 ಎಸೆತಗಳನ್ನು ಆಡಿ 15 ರನ್ ಗಳಿಸಿ ಹೃತಿಕ್ ಶೋಕೀನ್ ಎಸೆತದಲ್ಲಿ ಕ್ಯಾಮರೂನ್ ಗ್ರೀನ್ಗೆ ಕ್ಯಾಚಿತ್ತು ಔಟಾದರು.
Suryakumar Yadav Injury: ಮುಂಬೈ ಇಂಡಿಯನ್ಸ್ ಪರ ಪಿಯೂಷ್ ಚಾವ್ಲಾ ಮತ್ತು ಜೇಸನ್ ಬೆಹ್ರೆನ್ಡಾರ್ಫ್ ತಲಾ ಮೂರು ವಿಕೆಟ್ ಪಡೆದರು. ಇನ್ನು ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಗಾಯಗೊಂಡಿದ್ದರು. ಈ ಘಟನೆ 17 ನೇ ಓವರ್’ನಲ್ಲಿ ಸಂಭವಿಸಿದೆ. ಅಕ್ಸರ್ ಲಾಂಗ್-ಆನ್ ಓವರ್’ನಲ್ಲಿ ಬ್ಯಾಟ್ ಬೀಸಿದರು. ಆಗ ಸೂರ್ಯಕುಮಾರ್ ಚೆಂಡನ್ನು ಹಿಡಿಯಲು ಯತ್ನಿಸಿದ್ದು, ಆಕಸ್ಮಿಕವಾಗಿ ಅವರ ಕಣ್ಣಿಗೆ ಬಿದ್ದಿದೆ.
Rohit Shamr Records: ರೋಹಿತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅರ್ಧಶತಕ ಗಳಿಸಿದ ತಕ್ಷಣ, ಅವರು ವಿರಾಟ್ ಕೊಹ್ಲಿಯ ದೊಡ್ಡ ದಾಖಲೆಯನ್ನು ಹಿಂದಿಕ್ಕಿದ್ದಾರೆ. ರೋಹಿತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ರೋಹಿತ್ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ ಎನ್ನಬಹುದು.
IPL 2023: ಗುಜರಾತ್ ಟೈಟಾನ್ಸ್ ತಂಡ IPL ಸೀಸನ್ 15 ರ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ತಂಡವು ಸಂಪೂರ್ಣ ಸೀಸನ್’ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿತ್ತು. ಅದೇ ಕಾರಣದಿಂದ IPL 2022 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಗುಜರಾತ್ ಟೈಟಾನ್ಸ್ ತಂಡವು ಒಂದಕ್ಕಿಂತ ಹೆಚ್ಚು ಮ್ಯಾಚ್ ವಿನ್ನರ್ ಆಟಗಾರರಿಂದ ತುಂಬಿತ್ತು. ಆದರೆ ಒಂದೇ ಒಂದು ಪಂದ್ಯವನ್ನು ಆಡದೆ ಸತತ ಎರಡು ಬಾರಿ ಚಾಂಪಿಯನ್ ಪ್ರಶಸ್ತಿ ಎತ್ತಿಹಿಡಿದಿದ್ದ ಆಟಗಾರನೊಬ್ಬ ಈ ತಂಡದಲ್ಲಿದ್ದನು.
Delhi Capitals vs Mumbai Indians: ಅಂಡರ್-19 ವಿಶ್ವಕಪ್ 2022 ರಲ್ಲಿ ಭಾರತವನ್ನು ಚಾಂಪಿಯನ್ ಮಾಡಿದ ನಾಯಕ ಯಶ್ ಧುಲ್, ದೆಹಲಿ ಕ್ಯಾಪಿಟಲ್ಸ್ ತಂಡದ ಮೂಲಕ ಐಪಿಎಲ್’ಗೆ ಪಾದಾರ್ಪಣೆ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಪ್ಲೇಯಿಂಗ್-11 ರಲ್ಲಿ ಯಶ್’ಗೆ ದೆಹಲಿ ತಂಡದ ಮ್ಯಾನೇಜ್’ಮೆಂಟ್ ಅವಕಾಶ ನೀಡಿದೆ.
Shikhar Dhawan Viral Video: ಶಿಖರ್ ಧವನ್ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಅದರಲ್ಲಿ ಧವನ್ ಮತ್ತೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. 2021 ರಲ್ಲಿ, ಧವನ್ ತನ್ನ ಮೊದಲ ಹೆಂಡತಿಯಿಂದ ಬೇರ್ಪಟ್ಟರು. ಆದರೆ ಈಗ ವೈರಲ್ ಆದ ಈ ವೀಡಿಯೋ ನೋಡಿದರೆ ಶಿಖರ್ ಧವನ್ ಒಬ್ಬ ಹುಡುಗಿಯ ಬಗ್ಗೆ ಮಾತನಾಡುತ್ತಿರುವಂತಿದೆ.
Gautham Gambhir Reaction: ಲಕ್ನೋ ಸೂಪರ್ ಜೈಂಟ್ಸ್ ಗೆಲುವಿನ ನಂತರ ಗೌತಮ್ ಗಂಭೀರ್ ತಾಳ್ಮೆ ಕಳೆದುಕೊಂಡಿದ್ದರು. ಡಗ್ ಔಟ್ನಲ್ಲಿ ಕುಳಿತಿದ್ದ ಗಂಭೀರ್ ವಿಭಿನ್ನ ಪ್ರತಿಕ್ರಿಯೆ ನೀಡಿದ್ದರು. ಗೆಲುವಿನ ನಂತರ ಎದ್ದು ನಿಂತ ಅವರು, ಉತ್ಸಾಹದಲ್ಲಿ ಮುಷ್ಟಿ ಹಿಡಿದು, ಗಾಳಿಯಲ್ಲಿ ಗುದ್ದಿದಂತೆ ಮಾಡಿದರು. ಅಷ್ಟೇ ಅಲ್ಲದೆ, ಶ್…ಸೈಲೆನ್ಸ್ ಎಂದು ಸೂಚನೆ ಕೊಟ್ಟಂತೆ ಕಂಡಿತು. ಈ ವಿಡಿಯೋ ಕಂಡ ಆರ್ ಸಿ ಬಿ ಫ್ಯಾನ್ಸ್ ಕೋಪಗೊಂಡಿದ್ದಾರೆ.
RCB vs LSG, IPL 2023: IPL 2023 ರ ಅತ್ಯಂತ ರೋಚಕ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಪಂದ್ಯದ ಕೊನೆಯ ಎಸೆತದಲ್ಲಿ 1 ವಿಕೆಟ್ನಿಂದ ಸೋಲಿಸಿತು.
Kaviya Maran: ಪಂಜಾಬ್ ಕಿಂಗ್ಸ್’ನ ಇನಿಂಗ್ಸ್’ನ 19 ನೇ ಓವರ್ನಲ್ಲಿ, ಕ್ಯಾಮರಾಮನ್ ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್ ಅವರನ್ನು ದೊಡ್ಡ ಪರದೆಯ ಮೇಲೆ ತೋರಿಸಿದರು, ಇದಕ್ಕೆ ಅವರು ಅಸಮಾಧಾನಗೊಂಡರು. ಕ್ಯಾಮರಾಮನ್ ಕಾವ್ಯಾ ಮಾರನ್ ಅವರನ್ನು ದೊಡ್ಡ ಪರದೆಯ ಮೇಲೆ ತೋರಿಸಿದಾಗ ಅವರು ಕೋಪಗೊಂಡಂತೆ ಕಾಣುತ್ತಿದ್ದರು,
RCB vs LSG: ಪಂದ್ಯದಲ್ಲಿ ಆರ್’ಸಿಬಿ ಪರ ಮೈದಾನಕ್ಕೆ ಬಂದ ಮೂವರು ಆಟಗಾರರು ಭರ್ಜರಿ ಆಟವಾಡಿದ್ದಾರೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್’ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ಮೂವರೂ ಸಹ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಸಿಕ್ಸ್, ಫೋರ್’ಗಳ ಅಬ್ಬರಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ನಡುಗಿದೆ. ಅಷ್ಟೇ ಅಲ್ಲ ಕೇವಲ 48 ಎಸೆತಕ್ಕೆ 108 ರನ್’ಗಳ ಭರ್ಜರಿ ಜೊತೆಯಾಟವನ್ನು ಮ್ಯಾಕ್ಸ್’ವೆಲ್ ಮತ್ತು ಡು ಪ್ಲೆಸಿಸ್ ಆಡಿದ್ದಾರೆ.
Longest Six of IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಮತ್ತು ಆರಂಭಿಕ ಬ್ಯಾಟ್ಸ್ಮನ್ ಫಾಫ್ ಡು ಪ್ಲೆಸಿಸ್ ಈ ಐಪಿಎಲ್ ಸೀಸನ್’ನಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ್ದಾರೆ. ರವಿ ಬಿಷ್ಣೋಯ್ ಎಸೆತದಲ್ಲಿ 115 ಮೀಟರ್ ಉದ್ದದ ಸಿಕ್ಸರ್ ಬಾರಿಸಿ ಚೆಂಡನ್ನು ಸ್ಟೇಡಿಯಂನಿಂದ ಹೊರಗೆಸೆದರು.
RCB vs LSG: ಕ್ರೀಸ್’ಗೆ ಬಂದ ಮೂವರು ಆಟಗಾರರು ಭರ್ಜರಿ ಆಟವಾಡಿದ್ದಾರೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್’ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ಮೂವರೂ ಸಹ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಸಿಕ್ಸ್, ಫೋರ್’ಗಳ ಅಬ್ಬರಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ನಡುಗಿದೆ. ಅಷ್ಟೇ ಅಲ್ಲ ಕೇವಲ 48 ಎಸೆತಕ್ಕೆ 108 ರನ್’ಗಳ ಭರ್ಜರಿ ಜೊತೆಯಾಟವನ್ನು ಮ್ಯಾಕ್ಸ್’ವೆಲ್ ಮತ್ತು ಡು ಪ್ಲೆಸಿಸ್ ಆಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.