IPL 2023 :ಜೂನ್ 7 ರಿಂದ ಜೂನ್ 11 ರವರೆಗೆನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಭಾರತ ತಂಡದ ಆಯ್ಕೆ ಶೀಘ್ರವೇ ನಡೆಯಲಿದೆ. ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಐಪಿಎಲ್ 2023 ರ ಪ್ಲೇಆಫ್ ತಲುಪದಿದ್ದರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹೆಸರು ಕೂಡಾ ಈ ಪಟ್ಟಿ ಸೇರಲಿದೆ.
Virat Kohli-Anushka Sharma: ರಾಜಸ್ಥಾನ ರಾಯಲ್ಸ್ ಚೇಸಿಂಗ್’ನ 14ನೇ ಓವರ್’ನಲ್ಲಿ ಈ ಘಟನೆ ನಡೆದಿದೆ. ಹರ್ಷಲ್ ಪಟೇಲ್ ಬೌಲಿಂಗ್ ಮಾಡಿದಾಗ ನಿಧಾನಗತಿಯಲ್ಲಿ ದೊಡ್ಡ ಶಾಟ್ ಹೊಡೆಯಲಿ ಯಶಸ್ವಿ ಜೈಸ್ವಾಲ್ ಪ್ರಯತ್ನಿಸಿದರು. ಆದರೆ ಚೆಂಡು ಹೆಚ್ಚು ಎತ್ತರಕ್ಕೆ ಹೋಗದೆ, ಬೌಂಡರಿ ಬಳಿ ನಿಂತಿದ್ದ ಕೊಹ್ಲಿಯ ಕೈಗೆ ನೇರವಾಗಿ ಸಿಕ್ಕಿಬಿತ್ತು.
Kolkata Knight Riders vs Chennai Super Kings Highlights: ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 7 ಪಂದ್ಯಗಳಲ್ಲಿ 5 ಗೆಲುವಿನಿಂದ 10 ಅಂಕಗಳನ್ನು ಪಡೆದಿದ್ದಾರೆ. ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್, ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಲಾ 8 ಅಂಕಗಳನ್ನು ಪಡೆದಿದ್ದು ಕ್ರಮವಾಗಿ ಎರಡರಿಂದ ಆರನೇ ಸ್ಥಾನದಲ್ಲಿವೆ.
Suyash Sharma Celebration Video, KKR vs CSK: ಸಿಎಸ್’ಕೆ ಪರ ಅಜಿಂಕ್ಯ ರಹಾನೆ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಅಬ್ಬರಿಸಿದ್ದರು. 29 ಎಸೆತಗಳಲ್ಲಿ 71 ರನ್ ಗಳಿಸಿ ಅಜೇಯರಾಗಿ ಮರಳಿದರು. ರಹಾನೆ ಅವರ ಇನ್ನಿಂಗ್ಸ್’ನಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ಗಳು ಸೇರಿದ್ದವು. ಅವರಲ್ಲದೆ, ಡೆವೊನ್ ಕಾನ್ವೆ 40 ಎಸೆತಗಳಲ್ಲಿ 56 ರನ್ ಗಳಿಸಿದರೆ, ಶಿವಂ ದುಬೆ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ಗಳೊಂದಿಗೆ 50 ರನ್ ಗಳಿಸಿದ್ದಾರೆ.
Arshdeep Singh Destroys Stumps: ಅರ್ಷದೀಪ್ ಸಿಂಗ್ ಸತತ ಎರಡು ಎಸೆತಗಳಲ್ಲಿ ಎರಡು ಬಾರಿ ಸ್ಟಂಪ್ ಮುರಿದಿದ್ದಾರೆ. ಇದರಿಂದ ಬಿಸಿಸಿಐಗೆ ಬರೋಬ್ಬರಿ 35 ರಿಂದ 40 ಲಕ್ಷ ರೂ.ನಷ್ಟ ಉಂಟಾಗಿದೆ. ತಂತ್ರಜ್ಞಾನ ರಹಿತ ಎಲ್ಇಡಿ ಸ್ಟಂಪ್’ಗಳ ಬೆಲೆ ಸುಮಾರು 35 ರಿಂದ 40 ಲಕ್ಷ ರೂ. ಇದೆ.
RR vs RCB Match Highlights: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್’ಸಿಬಿ ತಂಡ ನಿಗದಿತ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಪ್ರತ್ಯುತ್ತರವಾಗಿ ಬ್ಯಾಟಿಂಗ್’ಗಿಳಿದ ರಾಜಸ್ಥಾನ ತಂಡ 20 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಗಳಿಸಲಷ್ಟೇ ಶಕ್ತವಾಯಿತು.
Indian Premier League 2023: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ದಾಖಲಿಸಿದೆ.
CSK vs KKR Playing 11: IPL ಎರಡು ಬಾರಿ ವಿಜೇತ ಕೋಲ್ಕತ್ತಾ ತಂಡದ ನಾಯಕ ನಿತೀಶ್ ರಾಣಾ ತವರು ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಟಾಸ್ ಗೆದ್ದ ನಂತರ ಮಾತನಾಡಿದ ಅವರು, 'ನಾವು ಮೊದಲು ಫೀಲ್ಡಿಂಗ್ ಮಾಡಲು ಬಯಸುತ್ತೇವೆ. ಪಿಚ್ ಚೆನ್ನಾಗಿ ಕಾಣುತ್ತಿದೆ
R Ashwin Clash with Umpire: ಬ್ಯಾಟಿಂಗ್’ಗೆ ಆಗಮಿಸಿದ RCB ತಂಡವು ಇನ್ನಿಂಗ್ಸ್’ನ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿಯನ್ನು (0) ಟ್ರೆಂಟ್ ಬೌಲ್ಟ್ ಎಲ್ಬಿಡಬ್ಲ್ಯೂ ಔಟ್ ಮಾಡಿದಾಗ ಆರಂಭಿಕ ಹೊಡೆತವನ್ನು ಅನುಭವಿಸಿತು. ಇದಾದ ಬಳಿಕ ಫಾಫ್ ಡುಪ್ಲೆಸಿ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಅಮೋಘ ಪ್ರದರ್ಶನ ನೀಡಿ ತಂಡ ಉತ್ತಮ ಸ್ಕೋರ್ ತಲುಪಲು ನೆರವಾದರು
Hardik Pandya-Krunal Pandya Video: ಶನಿವಾರದಂದು ಐಕಾನಿಕ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ನಡುವಿನ ಪಂದ್ಯಾಟ ತೀವ್ರ ಕುತೂಹಲ ಕೆರಳಿಸಿತ್ತು ಎನ್ನಬಹುದು. ಇನ್ನು ಈ ಪಂದ್ಯದಲ್ಲಿ ಫನ್ನಿ ಸನ್ನಿವೇಶವೊಂದು ನಡೆದಿದೆ. ಎಲ್ಎಸ್’ಜಿ ಚೇಸ್ನಲ್ಲಿ ಕೃನಾಲ್ ಪಾಂಡ್ಯ ಬ್ಯಾಟಿಂಗ್’ಗೆಂದು ಬಂದಾಗ, ಹಾರ್ದಿಕ್ ಪಾಂಡ್ಯ ತನ್ನ ಸಹೋದರನಿಗೆ ಏನೋ ಹೇಳುತ್ತಿರುವುದು ಕಂಡುಬಂದಿತು.
RCB vs RR Playing XI: ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯಕ್ಕಾಗಿ ಪ್ಲೇಯಿಂಗ್-11 ರಲ್ಲಿ ಬದಲಾವಣೆ ಮಾಡಿದ್ದಾರೆ. ಡೇವಿಡ್ ವಿಲ್ಲಿಗೆ ಅವಕಾಶ ನೀಡಿದ ಅವರು, ವೇಯ್ನ್ ಪಾರ್ನೆಲ್’ಗೆ ಗೇಟ್ ಪಾಸ್ ನೀಡಿದ್ದಾರೆ. ಕುತೂಹಲ ಎಂದರೆ, ರೀಸ್ ಟೋಪ್ಲೆ ಬದಲಿಗೆ ಪಾರ್ನೆಲ್’ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.
IPL 2023: ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ನಾಯಕ ಕೆಎಲ್ ರಾಹುಲ್ ಅತ್ಯುತ್ತಮ ಇನ್ನಿಂಗ್ಸ್ ಅಂದರೆ. 68 ರನ್’ಗಳ ಇನ್ನಿಂಗ್ಸ್ನಲ್ಲಿ ಅರ್ಧಶತಕವನ್ನು ಬಾರಿಸಿದರು. ಈ ಮೂಲಕ ಕನ್ನಡಿಗ ರಾಹುಲ್ ಅದ್ಭುತ ದಾಖಲೆ ಬರೆದಿದ್ದಾರೆ. ಭಾರತದ ಪರ ಟಿ20 ಕ್ರಿಕೆಟ್’ನಲ್ಲಿ ವೇಗವಾಗಿ 7000 ರನ್ ಗಳಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ.
Most Wickets in IPL: ಬಹಳ ದಿನಗಳಿಂದ ಟೀಂ ಇಂಡಿಯಾದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ ಸ್ಪಿನ್ನರ್ ಅಮಿತ್ ಮಿಶ್ರಾ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಅವರು ಇದೀಗ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್’ಗಳಲ್ಲಿ ಲಸಿತ್ ಮಾಲಿಂಗಗೆ ಸಮನಾಗಿ ಬಂದಿದ್ದಾರೆ.
GT vs LSG: ಏಕಾನಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ 7 ರನ್’ಗಳ ಜಯ ದಾಖಲಿಸಿತು. ನಾಯಕ ಹಾರ್ದಿಕ್ ಪಾಂಡ್ಯ ಅವರ ಅಮೋಘ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. ಈ ಗರಿ ಬೆನ್ನತ್ತಿದ ಲಕ್ನೋ ತಂಡ, ನಾಯಕ ಕೆಎಲ್ ರಾಹುಲ್ (68) ಅವರ ಅದ್ಭುತ ಇನ್ನಿಂಗ್ಸ್ನ ಹೊರತಾಗಿಯೂ 7 ವಿಕೆಟ್’ಗೆ 128 ರನ್ ಗಳಿಸಲಷ್ಟೇ ಶಕ್ತವಾಯಿತು.
MS Dhoni retirement: ಧೋನಿಯ ಮೇಲೆ ಅಭಿಮಾನಿಗಳಿಗೆ ಯಾವ ಮಟ್ಟಿಗೆ ಕ್ರೇಜ್ ಇದೆ ಎಂದರೆ, ಕೇವಲ ಧೋನಿಯನ್ನು ನೋಡೋದಕ್ಕೆಂದೇ ಓರ್ವ ಅಭಿಮಾನಿ ತನ್ನ ಬೈಕ್ ಮಾರಿ ಗೋವಾದಿಂದ ಬೆಂಗಳೂರಿಗೆ ಬಂದಿದ್ದ, ಇದೊಂದೇ ಅಲ್ಲ, ಸಾವಿರಾರು ನಿದರ್ಶನಗಳು ನಮಗೆ ಕಾಣ ಸಿಗುತ್ತವೆ. ಆದರೆ ಈ ಮಧ್ಯೆ, ಧೋನಿ ತನ್ನ ಐಪಿಎಲ್ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳುವ ಸುಳಿವನ್ನು ನೀಡಿದ್ದಾರೆ.
Ravindra Jadeja House Photos: ರವೀಂದ್ರ ಜಡೇಜಾ ಗುಜರಾತ್’ನ ಜಮುನಾನಗರ ಮೂಲದವರು. ಕ್ರಿಕೆಟಿಗ ಮಾತ್ರವಲ್ಲದೆ ರಾಜವಂಶಸ್ಥ ಕೂಡ ಹೌದು. ಜಮುನಾನಗರ ಜಡೇಜಾ ಅವರ ಬಂಗಲೆ ರಾಯಲ್ ಅರಮನೆಗಿಂತ ಕಡಿಮೆಯಿಲ್ಲ. ಇವರ ಬಂಗಲೆ ಅಂದ ಚಂದ ಹೇಗಿದೆ? ಅದಲ್ಲಿರುವ ಸೌಲಭ್ಯಗಳೇನು ಎಂಬುದನ್ನು ನಾವಿಂದು ನೋಡೋಣ.
ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಏಳು ವಿಕೆಟ್ ಗಳ ಭರ್ಜರಿ ಗೆಲುವನ್ನು ಸಾಧಿಸಿದೆ.
ಪಂದ್ಯಾವಳಿ ಮಾರ್ಚ್ 31, 2023 ರಂದು ಆರಂಭಗೊಂಡಿದೆ ಮತ್ತು ಪಂದ್ಯಾವಳಿಯ ಅಂತಿಮ ಪಂದ್ಯ ಮೇ 28 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದುವರೆಗೆ ಐಪಿಎಲ್ನಲ್ಲಿ 28 ಪಂದ್ಯಗಳು ನಡೆದಿದ್ದು, ಪ್ರತಿ ಪಂದ್ಯ ಒಂದಕ್ಕಿಂತ ಒಂದು ರೋಚಕವಾಗಿ ಅಂತ್ಯಕಂಡಿವೆ. ಈ ನಡುವೆ ಬಿಸಿಸಿಐ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.
Royal Challengers Bengaluru: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2023 ರಲ್ಲಿ ತನ್ನ ತಂಡಕ್ಕೆ ಬ್ರಹ್ಮಾಸ್ತ್ರಕ್ಕಿಂತ ಮಿಗಿಲಾದ ಓರ್ವ ಬೌಲರ್’ನನ್ನು ಸೇರಿಸಿಕೊಂಡಿದೆ. ಈತ ಬೇರಾರೂ ಅಲ್ಲ, ವೇಗದ ಬೌಲರ್ ಮೊಹಮ್ಮದ್ ಸಿರಾಜ್. ಈತನ ಮಾರಣಾಂತಿಕ ಬೌಲಿಂಗ್’ಗೆ ಇಂದು ಪಂಜಾಬ್ ತತ್ತರಿಸಿ ಹೋಗಿದೆ.
Jos Buttler's statement about the commentator: ಐಪಿಎಲ್ ರಾಜಸ್ಥಾನ್ ರಾಯಲ್ಸ್ ಮತ್ತು ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಮಾತನಾಡಿದ್ದು, “ಕಾಮೆಂಟೇಟರ್ ಒಬ್ಬ ಆಟಗಾರನನ್ನು ಟೀಕಿಸಿದರೆ, ಅದು ಅವನ ಕೆಲಸ ಎಂದು ಮುನ್ನಡೆಯಬೇಕು. ಪರಿಸ್ಥಿತಿಗಳನ್ನು ಒಪ್ಪಿಕೊಳ್ಳುವುದು ಪ್ರತೀ ಕ್ರಿಕೆಟಿಗನ ವೃತ್ತಿಜೀವನದ ಅವಿಭಾಜ್ಯ ಅಂಗವಾಗಿರಬೇಕು” ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.