ಬಲು ವಿಭಿನ್ನವಾಗಿದೆ ತರುಣ್ - ಸೋನಾಲ್ ವೆಡ್ಡಿಂಗ್ ಕಾರ್ಡ್

Tharun Sudhir Sonal Wedding Card : ಈಗಾಗಲೇ ಈ ಜೋಡಿ ಇಡೀ ಚಿತ್ರರಂಗ ಹಾಗೂ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಮ್ಮ ವಿವಾಹದ ಇನ್ವಿಟೇಷನ್ ಕೊಟ್ಟು ತಮ್ಮ ಮದುವೆಗೆ ಆಹ್ವಾನ ಮಾಡಲು ಶುರು ಮಾಡಿದ್ದಾರೆ.

Written by - Chetana Devarmani | Last Updated : Jul 29, 2024, 01:40 PM IST
  • ತರುಣ್ ಸುಧೀರ್ ಸೋನಲ್ ಮದುವೆ ದಿನಾಂಕ
  • ತರುಣ್ ಸುಧೀರ್ ಸೋನಲ್ ಮದುವೆ ಆಮಂತ್ರಣ
  • ತರುಣ್ ಸುಧೀರ್ ಸೋನಲ್ ಫೋಟೋ
ಬಲು ವಿಭಿನ್ನವಾಗಿದೆ ತರುಣ್ - ಸೋನಾಲ್ ವೆಡ್ಡಿಂಗ್ ಕಾರ್ಡ್ title=
Tharun Sudhir Sonal Wedding Card

Tharun Sudhir Sonal Monteiro marriage date: ಕನ್ನಡ ಸಿನಿಮಾರಂಗದ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ವಿವಾಹಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈಗಾಗಲೇ ಈ ಜೋಡಿ ಇಡೀ ಚಿತ್ರರಂಗ ಹಾಗೂ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಮ್ಮ ವಿವಾಹದ ಇನ್ವಿಟೇಷನ್ ಕೊಟ್ಟು ತಮ್ಮ ಮದುವೆಗೆ ಆಹ್ವಾನ ಮಾಡಲು ಶುರು ಮಾಡಿದ್ದಾರೆ.

ಸಿನಿಮಾದಲ್ಲಿ ಸದಾ ಸರ್ಪ್ರೈಸ್ ಪ್ಲಾನ್ ಮಾಡಿ ಪ್ರೇಕ್ಷಕರನ್ನ ಖುಷಿ ಪಡಿಸೋ ನಿರ್ದೇಶಕ ತರುಣ್ ತಮ್ಮ ಮದುವೆ ಇನ್ವಿಟೇಷನ್ ಅನ್ನು ಸೂಪರ್ ಆಗಿಯೇ ಪ್ಲಾನ್ ಮಾಡಿದ್ದಾರೆ...ಸಾಮಾನ್ಯವಾಗಿ ಸೆಲಬ್ರೆಟಿಗಳು ಇನ್ವಿಟೇಷನ್ ಜೊತೆ ಒಂದು ಗಿಡಕೊಟ್ಟು ತಮ್ಮ ವಿವಾಹಕ್ಕೆ ಕರೆಯೋದು ಕಾಮನ್ .ಆದ್ರೆ ತರುಣ್ ಮತ್ತು ಸೋನಾಲ್ ತಮ್ಮ ವಿವಾಹ ಪತ್ರಿಕೆಯನ್ನ ಕಂಪ್ಲೀಟ್ ಆಗಿ ಪರಿಸರ ಸ್ನೇಹಿಯಾಗಿ ಮಾಡಿದ್ದಾರೆ.

ಇದನ್ನೂ ಓದಿ: ʻದರ್ಶನ್ ನನಗೂ ತಮ್ಮ ಫಾರ್ಮ್ ಹೌಸ್‌ಗೆ ಕರೆಸಿದ್ದರು..ʼ ಹಳೆಯ ಘಟನೆ ಬಿಚ್ಚಿಟ್ಟ ಹಾಸ್ಯ ನಟ ಡಿಂಗ್ರಿ ನಾಗರಾಜ್‌ ಪುತ್ರ 

ತರುಣ್ ನೀಡುತ್ತಿರುವ ಈ ಇನ್ವಿಟೇಷನ್ ನಲ್ಲಿ ಮದುವೆ ಪತ್ರಿಕೆ , ಒಂದು ಖಾಲಿ ಪುಸ್ತಕ ಅದರಲ್ಲಿ ಬರೆಯೋದಕ್ಕೆ ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಮತ್ತು ಒಂದು ಸೀಡ್ ಬಾಲ್ ಇವೆ. ವಿಶೇಷ ಅಂದ್ರೆ ಮದುವೆ ಮುಗಿದ ನಂತ್ರ ಪತ್ರಿಕೆ ಏನ್ ಮಾಡೋದು ಅಂತ ಯೋಚನೆ ಮಾಡೋ ಹಾಗಿಲ್ಲ, ಯಾಕಂದ್ರೆ ಸೋನಾಲ್ ಮತ್ತು ತರುಣ್ ಮದ್ವೆ ನಂದ್ರ ಪತ್ರಿಕಯನ್ನ ಒಂದು ಮಣ್ಣಿನ ಪಾಟ್ ನಲ್ಲಿ ಹಾಕಿದ್ರೆ ಅದು ಮಣ್ಣಿನಲ್ಲಿ ಬೆರೆದು ಗಿಡ ಬೆಳೆಯುತ್ತೆ. ಅದಷ್ಟೇ ಅಲ್ಲ ಖಾಲಿ ಪುಸ್ತಕದಲ್ಲಿ ಬರೆದು ಹಾಳೆ ಖಾಲಿ ಆದ ನಂತ್ರ ಅದು ಮಣ್ಣು ಸೇರಿದ್ರೆ ಅದ್ರಿಂದಲೂ ಹೂವಿನ ಗಿಡ ಬೆಳೆಯುತ್ತೆ. ಇನ್ನು ಪೆನ್ ಮತ್ತು ಪೆನ್ಸಿಲ್ ಬೆರೆದು ಖಾಲಿ ಆದ್ರೆ ಅದನ್ನು ಮಣ್ಣಿಗೆ ಹಾಕಿದ್ರೆ ಚಂದದ ಹೂವಿನ ಹಾಗೂ ತರಕಾರಿ ಗಿಡ ಬೆಳೆಯುತ್ತೆ. ಹೀಗೆ ತಮ್ಮ ವಿವಾಹದ ಆಹ್ವಾನ ಪತ್ರಿಕೆ ಸಖತ್ ಸ್ಪೆಷಲ್ ಮತ್ತು ಪರಿಸರ ಸ್ನೇಹಿ ಆಗಿರಲಿ ಅಂತ ತರುಣ್ ಈ ರೀತಿ ಪ್ಲಾನ್ ಮಾಡಿದ್ದಾರೆ. 

Tharun Sudhir Sonal Wedding Card

ಇನ್ನು ಆಗಸ್ಟ್ 10 ಹಾಗೂ 11 ರಂದು ನಡೆಯಲಿರೋ ತರುಣ್ ಮತ್ತು ಸೋನಾಲ್ ಮದುವೆಗೆ ಈಗಾಗಲೇ ಸಖಲ ಸಿದ್ದತೆಗಳು ನಡೆದಿದೆ. ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ಹಾಗೂ ನಾಯಕಿಯ ಮದುವೆಗೆ ಇಡೀ ಚಿತ್ರರಂಗ ಸಾಕ್ಷಿ ಆಗಲಿದೆ. ಸದ್ಯ ಮದುವೆ ಇನ್ವಿಟೇಷನ್ ನಲ್ಲಿ ಸ್ಪೆಷಲ್ ಅನ್ನಿಸ್ತಿರೋ ಈ ಜೋಡಿ ಮದುವೆಯಲ್ಲಿ ಏನೆಲ್ಲಾ ಸರ್ ಪ್ರೈಸ್ ಪ್ಲಾನ್ ಮಾಡಿದೆ ಅಂತ ಕಾದು ನೋಡಬೇಕಿದೆ. 

ಇದನ್ನೂ ಓದಿ: Urvashi Rautela video: ಲೀಕ್‌ ಆದ ಬಾತ್‌ರೂಮ್ ವಿಡಿಯೋ ಬಗ್ಗೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ ಊರ್ವಶಿ ರೌಟೇಲಾ.. ವೈರಲ್‌ ಮಾಡಿದ್ದು ಇವರೇ ಅಂತೆ !?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News