ರೆಡ್ ಗೌನ್‌ನಲ್ಲಿ 'ಪಟಾಕ' ಮಿಂಚಿಂಗ್; 'ಡಾರ್ಲಿಂಗ್' ಸಿನಿಮಾದಲ್ಲಿ ನಭಾ ನಟೇಶ್ ಧಮಾಕ!

Nabha Natesh: ಅಪಘಾತದಿಂದ ಚೇತರಿಸಿಕೊಂಡ ಬಳಿಕ ನಭಾ ನಟೇಶ್ ಬೆಳ್ಳಿಪರದೆಯಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ. ನಟ ಪ್ರಿಯಾದರ್ಶಿಗೆ ನಾಯಕಿಯಾಗಿ ನಟಿಸಿರುವ ತೆಲುಗಿನ ʼಡಾರ್ಲಿಂಗ್ʼ ಸಿನಿಮಾದಲ್ಲಿ ನಭಾ ನಟೇಶ್ ಮೋಡಿ ಮಾಡಿದ್ದಾರೆ. 7 ಪಾತ್ರದಲ್ಲಿ ಪಟಾಕ ಧಮಾಕ ಸೃಷ್ಟಿಸಿದ್ದಾರೆ. 

Written by - YASHODHA POOJARI | Edited by - Puttaraj K Alur | Last Updated : Jul 29, 2024, 11:30 PM IST
  • ಹೊಸ ಫೋಟೋಶೂಟ್‌ನಲ್ಲಿ ಪಡ್ಡೆಗಳಿಗೆ ಕಿಚ್ಚು ಹಚ್ಚಿಸಿದ ವಜ್ರಕಾಯ ಸುಂದ್ರಿ!
  • ರೆಡ್ ಗೌನ್‌ನಲ್ಲಿ 'ಪಟಾಕ' ಪೋರಿಯ ಸಖತ್‌ ಮಿಂಚಿಂಗ್
  • ನಭಾ ನಟೇಶ್ 'ಡಾರ್ಲಿಂಗ್' ಸಪ್ತ ಅವತಾರಕ್ಕೆ ಫ್ಯಾನ್ಸ್ ಜೈಕಾರ!
ರೆಡ್ ಗೌನ್‌ನಲ್ಲಿ 'ಪಟಾಕ' ಮಿಂಚಿಂಗ್; 'ಡಾರ್ಲಿಂಗ್' ಸಿನಿಮಾದಲ್ಲಿ ನಭಾ ನಟೇಶ್ ಧಮಾಕ! title=
ರೆಡ್ ಗೌನ್‌ನಲ್ಲಿ 'ಪಟಾಕ' ಪೋರಿ!

Nabha Natesh: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ʼವಜ್ರಕಾಯʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದವರು ನಭಾ ನಟೇಶ್. ಪಟಾಕ ಪಾತ್ರದ ಮೂಲಕ ಗಮನಸೆಳೆದ ಈ ಶೃಂಗೇರಿ ಸುಂದರಿ ಈಗ ಟಾಲಿವುಡ್ ಅಂಗಳದಲ್ಲಿ ಬ್ಯುಸಿಯಾಗಿದ್ದಾರೆ. ʼಡಾರ್ಲಿಂಗ್ʼ ಸಿನಿಮಾ ಮೂಲಕ ಇತ್ತೀಚೆಗಷ್ಟೇ ಪ್ರೇಕ್ಷಕರ ಎದುರು ಬಂದಿದ್ದ ನಭಾ ನಟೇಶ್ ಹೊಸ ಫೋಟೋಶೂಟ್‌ ನಲ್ಲಿ ಮಿಂಚಿದ್ದಾರೆ.

ಕೆಂಪು ಬಣ್ಣದ ಗೌನ್‌ನಲ್ಲಿ ಗುಲಾಬಿಯಂತೆ ಕಂಗೊಳಿಸಿರುವ ಪಟಾಕ ನಯಾ ಸ್ಟೈಲ್ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ. ರೆಡ್ ಗೌನ್‌ನಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಅವತಾರದಲ್ಲಿ ತರೇವಾರಿ ಫೋಸ್ ಕೊಟ್ಟು ಕ್ಯಾಮೆರಾಗೆ ʼವಜ್ರಕಾಯʼ ಬೆಡಗಿ ಕಣ್ಣು ಹೊಡೆದಿದ್ದಾಳೆ. ಶೃಂಗೇರಿ ಸುಂದರಿಯ ಸ್ಟೈಲೀಶ್ ಅವತಾರ ಕಂಡು ಅಭಿಮಾನಿಗಳು ʼಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನ ನೋಡಿʼ ಅಂತಾ ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: "ನಿಜವಾಗಿಯೂ ಬ್ರೇಕ್ ಅಪ್ ಆಗಿದೆ..." ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡ

ಅಪಘಾತದಿಂದ ಚೇತರಿಸಿಕೊಂಡ ಬಳಿಕ ನಭಾ ನಟೇಶ್ ಬೆಳ್ಳಿಪರದೆಯಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ. ನಟ ಪ್ರಿಯಾದರ್ಶಿಗೆ ನಾಯಕಿಯಾಗಿ ನಟಿಸಿರುವ ತೆಲುಗಿನ ʼಡಾರ್ಲಿಂಗ್ʼ ಸಿನಿಮಾದಲ್ಲಿ ನಭಾ ನಟೇಶ್ ಮೋಡಿ ಮಾಡಿದ್ದಾರೆ. 7 ಪಾತ್ರದಲ್ಲಿ ಪಟಾಕ ಧಮಾಕ ಸೃಷ್ಟಿಸಿದ್ದಾರೆ. 

ನಭಾ ʼಸ್ವಯಂಭುʼ ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಕೆಲಸ ಕೂಡ ನಡೆಯುತ್ತಿದೆ. ನಿಖಿಲ್ ಸಿದ್ಧಾರ್ಥ್‌ಗೆ ನಾಯಕಿಯಾಗಿ ನಭಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಪಟಾಕ ರಾಣಿಯಂತ ರೂಲ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದು, ಅವರ ಲುಕ್ ವೈರಲ್ ಆಗಿದೆ.

ಇದನ್ನೂ ಓದಿ: ನಟಿ ಕಂಗನಾ ರಣಾವತ್‌ ಅಕ್ಕ ಯಾರು ಗೊತ್ತಾ? ಅಂದು ಪ್ರಪೋಸ್ ರಿಜೆಕ್ಟ್‌ ಮಾಡಿದಕ್ಕೆ ಈಕೆ ಮೇಲಾಗಿತ್ತು ಆಸಿಡ್‌ ಅಟ್ಯಾಕ್!!

ಕನ್ನಡ ಸಿನಿಮಾವಲ್ಲದೇ ನಭಾ ನಟೇಶ್ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಎಲ್ಲಾ ಚಿತ್ರಗಳಲ್ಲಿ ʼಇಸ್ಮಾರ್ಟ್ʼ ಸಿನಿಮಾ ಹೆಚ್ಚು ಗಮನ ಸೆಳೆದಿತ್ತು. ನಂತರ ʼಡಿಸ್ಕೋ ರಾಜಾʼ ಸಿನಿಮಾದಲ್ಲೂ ನಭಾ ನಟೇಶ್ ಅಭಿನಯ ಜನರಿಗೆ ಇಷ್ಟವಾಗಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News