22ನೇ ವಯಸ್ಸಿಗೆ ಹಿಟ್‌ ಸಿನಿಮಾ, ಸ್ಟಾರ್ ಕ್ರಿಕೆಟರ್ ಜೊತೆ ಅಫೇರ್!! ಆದ್ರೆ ಕೊನೆಗೆ ಈ ಖ್ಯಾತ ನಟಿ ಮದುವೆಯಾಗಿದ್ದು ತನ್ನ ಸ್ನೇಹಿತೆಯ ಪತಿಯನ್ನೇ!!

Amrita Arora Life Story: 31 ಜನವರಿ 1981 ರಂದು ಜನಿಸಿದ ಅಮೃತಾ 2003 ರಲ್ಲಿ ಕೇವಲ 22 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದಕ್ಕೂ ಮೊದಲು ವಿಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದರು  

Written by - Bhavishya Shetty | Last Updated : Jul 30, 2024, 04:21 PM IST
    • ಕಿತ್ನೆ ದೂರ್ ಕಿತ್ನೆ ಪಾಸ್' ಚಿತ್ರದ ಮೂಲಕ ಬಾಲಿವುಡ್ ಜರ್ನಿ ಆರಂಭಿಸಿದ ಅಮೃತಾ ಅರೋರಾ
    • ಮೊದಲು ವಿಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದರು
    • ಕೇವಲ 22 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಅಮೃತಾ
22ನೇ ವಯಸ್ಸಿಗೆ ಹಿಟ್‌ ಸಿನಿಮಾ, ಸ್ಟಾರ್ ಕ್ರಿಕೆಟರ್ ಜೊತೆ ಅಫೇರ್!! ಆದ್ರೆ ಕೊನೆಗೆ ಈ ಖ್ಯಾತ ನಟಿ ಮದುವೆಯಾಗಿದ್ದು ತನ್ನ ಸ್ನೇಹಿತೆಯ ಪತಿಯನ್ನೇ!! title=
File Photo

Amrita Arora Life Story: 'ಕಿತ್ನೆ ದೂರ್ ಕಿತ್ನೆ ಪಾಸ್' ಚಿತ್ರದ ಮೂಲಕ ಬಾಲಿವುಡ್ ಜರ್ನಿ ಆರಂಭಿಸಿದ ಅಮೃತಾ ಅರೋರಾ, ಹಲವು ಸಿನಿಮಾಗಳಲ್ಲಿ ತಮ್ಮ ನಟನಾ ಚಾತುರ್ಯವನ್ನು ತೋರಿಸಿದ್ದರು. ಅಂದಹಾಗೆ ಅಮೃತಾ ಅರೋರ ತನ್ನ ಸಿನಿಜರ್ನಿಗಿಂತ ಹೆಚ್ಚು ಸುದ್ದಿಯಾಗಿದ್ದು, ಲವ್‌ ಅಫೇರ್‌ʼನಿಂದ.

ಇದನ್ನೂ ಓದಿ:  ಮೊಸರಿಗೆ ಈ ಎಣ್ಣೆ ಬೆರೆಸಿ ಹಚ್ಚಿದರೆ 20 ನಿಮಿಷದಲ್ಲಿ ಕಡುಕಪ್ಪಾಗುತ್ತೆ ಬಿಳಿಕೂದಲು! ಮತ್ತೆ ಯಾವತ್ತೂ ವೈಟ್‌ ಹೇರ್‌ ಸಮಸ್ಯೆ ಬರಲ್ಲ

31 ಜನವರಿ 1981 ರಂದು ಜನಿಸಿದ ಅಮೃತಾ 2003 ರಲ್ಲಿ ಕೇವಲ 22 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದಕ್ಕೂ ಮೊದಲು ವಿಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದರು

ಇನ್ನು 2004 ರಲ್ಲಿ ಇಂಗ್ಲೆಂಡ್ ತಂಡದ ಕ್ರಿಕೆಟಿಗ ಉಸ್ಮಾನ್ ಅಫ್ಜಲ್‌ ಜೊತೆ ಅಮೃತಾ ಹೆಸರು ತಳುಕು ಹಾಕಿತ್ತು, ಈ ಸಂದರ್ಭದಲ್ಲಿ ಭಾರೀ ಸುದ್ದಿಯಾಗಿದ್ದರು ಅಮೃತಾ. ಉಸ್ಮಾನ್ ಆ ಸಮಯದಲ್ಲಿ ಇಂಗ್ಲೆಂಡ್ ತಂಡದೊಂದಿಗೆ ಭಾರತಕ್ಕೆ ಆಗಮಿಸಿದ್ದರು. ಅಲ್ಲಿಂದ ಇವರಿಬ್ಬರ ನಡುವೆ ಪ್ರೇಮ ಶುರುವಾಗಿತ್ತು. ಆದರೆ ಈ ಜೋಡಿ 2006 ರಲ್ಲಿ ಬೇರ್ಪಟ್ಟರು.

ಇನ್ನು 2008 ರಲ್ಲಿ ನಡೆದ ಸಂದರ್ಶನವೊಂದರಲ್ಲಿ, ಅಮೃತಾ ಅವರು ಉಸ್ಮಾನ್ ಅವರನ್ನು ಪ್ರೀತಿಸುತ್ತಿದ್ದ ವಿಷಯವನ್ನು ಬಹಿರಂಗಪಡಿಸಿದ್ದರು. ಇನ್ನು ಇದಾದ ಬಳಿಕ ಇವರು ಸುದ್ದಿಯಾಗಿದ್ದು ತನ್ನ ಕಾಲೇಜು ಸ್ನೇಹಿತ ಶಕೀಲ್ ಲಡಾಕ್ ಅವರನ್ನು ವಿವಾಹವಾದಾಗ.

ಇದನ್ನೂ ಓದಿ:  ವಿರಾಟ್‌ ಮ್ಯಾನೇಜರ್ ಆಗಿದ್ದ ಈಕೆ ಇಂದು ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ಪತ್ನಿ! 5 ಮಿಲಿಯನ್ ಆಸ್ತಿಯ ಒಡತಿ ಈ ಬಾಲಕಿ ಯಾರೆಂದು ಗೆಸ್‌ ಮಾಡಿ

ಶಕೀಲ್‌ ಉದ್ಯಮಿಯಾಗಿದ್ದರು. ಅಷ್ಟೇ ಅಲ್ಲದೆ, ಅಮೃತಾ ಸ್ನೇಹಿತೆ ನಿಶಾ ಎಂಬಾಕೆಯನ್ನು ವಿವಾಹವಾಗಿದ್ದರು. ಆದರೆ ಅಮೃತಾಗೆ ಯಾವಾಗ ಶಕೀಲ್‌ ಹತ್ತಿರವಾದರೋ, ಅಂದಿಗೆ ನಿಶಾ ಜೊತೆಗಿನ ಸಂಬಂಧವನ್ನು ಶಕೀಲ್‌ ದೂರ ಮಾಡಿದ್ದರು. ಇದಾದ ನಂತರ ವಿಚ್ಛೇದನ ಪಡೆದ ಶಕೀಲ್‌  ಅಮೃತಾಳನ್ನು ವಿವಾಹವಾದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News