ಈ ಪ್ರಯೋಜನಗಳಿಗಾಗಿ ಮಾವಿನ ಹಣ್ಣಿನ ಸಿಪ್ಪೆಯನ್ನು ಯಾವತ್ತೂ ಎಸೆಯದಿರಿ

ಸಿಹಿ ಮತ್ತು ರಸಭರಿತ ಹಣ್ಣಾದ ಮಾವಿನ ಹಣ್ಣನ್ನು ಸೇವಿಸುವಾಗ, ಹೆಚ್ಚಿನ ಜನರು ಸಾಮಾನ್ಯವಾಗಿ ಅದರ ಸಿಪ್ಪೆಯನ್ನು ಎಸೆಯುತ್ತಾರೆ.  ಮಾವಿನ ಸಿಪ್ಪೆಯನ್ನು ತಿಂದರೆ ಮಾವಿನಹಣ್ಣಿನ ರುಚಿ ಕೆಡುತ್ತದೆ ಎನ್ನುವ ಅಭಿಪ್ರಾಯ ಅನೇಕರದ್ದು.  ಆದರೆ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಾಗುತ್ತವೆ .

Written by - Ranjitha R K | Last Updated : Mar 28, 2022, 03:08 PM IST
  • ಮಾವು ಮಾತ್ರವಲ್ಲ, ಅದರ ಸಿಪ್ಪೆಯೂ ಪ್ರಯೋಜನಕಾರಿ
  • ಈ ಗಂಭೀರ ಕಾಯಿಲೆಗಳಿಗೆ ಪರಿಹಾರ ಮಾವಿನ ಹಣ್ಣಿನ ಸಿಪ್ಪೆ
  • ಮಾವಿನ ಹಣ್ಣಿನ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡಬೇಡಿ
ಈ ಪ್ರಯೋಜನಗಳಿಗಾಗಿ ಮಾವಿನ ಹಣ್ಣಿನ ಸಿಪ್ಪೆಯನ್ನು ಯಾವತ್ತೂ ಎಸೆಯದಿರಿ  title=
ಮಾವು ಮಾತ್ರವಲ್ಲ, ಅದರ ಸಿಪ್ಪೆಯೂ ಪ್ರಯೋಜನಕಾರಿ (file photo)

ಬೆಂಗಳೂರು : ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಬೇಸಿಗೆಯ ಆರಂಭದೊಂದಿಗೆ, ಈ ಹಣ್ಣು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಪ್ರತಿಯೊಬ್ಬರೂ ಈ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತಾರೆ.  ಹೆಚ್ಚಿನ ಜನರು ಮಾವಿನ ಹಣ್ಣನ್ನು ತಿನ್ನುವಾಗ ಅದರ ಸಿಪ್ಪೆಯನ್ನು ಎಸೆಯುತ್ತಾರೆ. ಆದರೆ ಇದರ ಸಿಪ್ಪೆಗಳು ಕೂಡಾ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ (Health benefits of mango peel).ಮಾವಿನಹಣ್ಣು ತಿಂದ ನಂತರ ಅದರ ಸಿಪ್ಪೆಯನ್ನು ಬಿಸಾಡುವ ತಪ್ಪನ್ನು ಎಂದೂ ಮಾಡಬೇಡಿ (Benefits of mango peel). 

ಮಾವಿನ ಹಣ್ಣಿನ ಸಿಪ್ಪೆಯನ್ನು ತಿನ್ನಬಹುದೇ? 
ಸಿಹಿ ಮತ್ತು ರಸಭರಿತ ಹಣ್ಣಾದ ಮಾವಿನ ಹಣ್ಣನ್ನು ಸೇವಿಸುವಾಗ, ಹೆಚ್ಚಿನ ಜನರು ಸಾಮಾನ್ಯವಾಗಿ ಅದರ ಸಿಪ್ಪೆಯನ್ನು ಎಸೆಯುತ್ತಾರೆ (Benefits of mango peel). ಮಾವಿನ ಸಿಪ್ಪೆಯನ್ನು ತಿಂದರೆ ಮಾವಿನಹಣ್ಣಿನ ರುಚಿ ಕೆಡುತ್ತದೆ ಎನ್ನುವ ಅಭಿಪ್ರಾಯ ಅನೇಕರದ್ದು.  ಆದರೆ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಾಗುತ್ತವೆ (Health benefits of mango peel).  

ಇದನ್ನೂ ಓದಿ : Belly Fat: ಜಿಮ್‌ಗೆ ಹೋಗದೆ ಹೊಟ್ಟೆಯ ಕೊಬ್ಬು ಕರಗಿಸಲು ಸಹಾಯಕಾರಿ ಈ ಡ್ರಿಂಕ್ಸ್

ಈ ರೋಗಗಳಲ್ಲಿ ಸಹಾಯಕ : 
ವರದಿಯ ಪ್ರಕಾರ, ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಮಾವಿನ ಸಿಪ್ಪೆಯಲ್ಲಿ ಕಂಡುಬರುತ್ತವೆ. ಇದು ಕ್ಯಾನ್ಸರ್ ನಿಂದ (Cancer) ನಮ್ಮನ್ನು ರಕ್ಷಿಸುತ್ತದೆ. ಮಾವಿನ ಸಿಪ್ಪೆಯು ಶ್ವಾಸಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ನಿಂದ ರಕ್ಷಿಸಲು ಸಹ ಉಪಯುಕ್ತವಾಗಿದೆ. ಮಾವಿನ ಸಿಪ್ಪೆಯು ಸಸ್ಯಗಳಲ್ಲಿ ಕಂಡುಬರುವ ಫೈಟೊನ್ಯೂಟ್ರಿಯೆಂಟ್‌ಗಳಲ್ಲಿ ಸಮೃದ್ಧವಾಗಿದೆ (Mango peel for cancer).  

ಮಾವಿನ ಸಿಪ್ಪೆಯು ತೂಕವನ್ನು ಕಡಿಮೆ ಮಾಡಲು ಸಹಾಯಕ :

ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಾದರೆ, ಮಾವಿನ ಸಿಪ್ಪೆಯನ್ನು ಸಹ ತಿನ್ನಬಹುದು (Mango peel for weight lose). ಇದರ ಸಿಪ್ಪೆಗಳು ತೂಕವನ್ನು ಕಡಿಮೆ ಮಾಡಲು ತುಂಬಾ ಉಪಯುಕ್ತವಾಗಿದೆ. ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವವರು ಖಂಡಿತವಾಗಿಯೂ ಮಾವಿನ ಸಿಪ್ಪೆಯನ್ನು ಎಸೆಯಬಾರದು. 

ಇದನ್ನೂ ಓದಿ : Belly Fat: ಜಿಮ್‌ಗೆ ಹೋಗದೆ ಹೊಟ್ಟೆಯ ಕೊಬ್ಬು ಕರಗಿಸಲು ಸಹಾಯಕಾರಿ ಈ ಡ್ರಿಂಕ್ಸ್

 

( ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News