ಯುದ್ಧಮಾಡಿ ಗೆಲ್ಲುವವ ʼಕ್ಷತ್ರಿಯʼ, ಯುದ್ಧಮಾಡದೆ ಗೆಲ್ಲುವವ ʼಮಹಾಕ್ಷತ್ರಿಯʼ; ʼದಾದಾʼರ ಅಭಿನಯಕ್ಕೆ ಸಾಟಿಯೇ ಇಲ್ಲ!!

Mahakshathriya: ಈ ಚಿತ್ರದಲ್ಲಿ ನಾಯಕಿ ಸೋನು ವಾಲಿಯಾ, ಸುಧಾರಾಣಿ, ರಾಮ್ ಕುಮಾರ್, ಶಂಕರ್ ಅಶ್ವಥ್, ಗುರುರಾಜ್ ಹೊಸಕೋಟೆ ಎಲ್ಲರೂ ಅತ್ಯುತ್ತಮ ಅಭಿನಯ ನೀಡಿದ್ದಾರೆ.

Written by - Puttaraj K Alur | Last Updated : Jan 25, 2025, 09:15 PM IST
  • ಯುದ್ಧಮಾಡಿ ಗೆಲ್ಲುವವ ʼಕ್ಷತ್ರಿಯʼ, ಯುದ್ಧಮಾಡದೆ ಗೆಲ್ಲುವವ ʼಮಹಾಕ್ಷತ್ರಿಯʼ
  • ʼಮಹಾಕ್ಷತ್ರಿಯʼ ತನ್ನದೇ ಆದ ಫ್ಯಾನ್ ಬೇಸ್ ಹೊಂದಿರುವ ಚಿತ್ರವಾಗಿದೆ
  • ಈ ಚಿತ್ರದಲ್ಲಿ ಡಾ.ವಿಷ್ಣುವರ್ಧನ್‌ ಅಭಿನಯಕ್ಕೆ ಸಾಟಿಯೇ ಇಲ್ಲ
ಯುದ್ಧಮಾಡಿ ಗೆಲ್ಲುವವ ʼಕ್ಷತ್ರಿಯʼ, ಯುದ್ಧಮಾಡದೆ ಗೆಲ್ಲುವವ ʼಮಹಾಕ್ಷತ್ರಿಯʼ; ʼದಾದಾʼರ ಅಭಿನಯಕ್ಕೆ ಸಾಟಿಯೇ ಇಲ್ಲ!! title=
ತನ್ನದೇ ಆದ ಫ್ಯಾನ್ ಬೇಸ್ ಹೊಂದಿರುವ ಚಿತ್ರ!!

Mahakshathriya Kannada Movie: ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು ಸಾಮಾನ್ಯವಾಗಿ ಒಂದು ಸಿನೆಮಾದಲ್ಲಿ ಬಳಸಿದ್ದನ್ನು ಇನ್ನೊಂದು ಸಿನೆಮಾದಲ್ಲಿ ಬಳಸಲ್ಲ. ವಿಭಿನ್ನ ಕಥಾವಸ್ತುಗಳನ್ನು ನೀಡಿದ ಹೆಗ್ಗಳಿಕೆ ಅವರದ್ದು. ಸಾಹಸಸಿಂಹ ಡಾ.ವಿಷ್ಣುವರ್ಧನ್‌ ಅವರ ನಾಯಕತ್ವದಲ್ಲಿ ʼಕಿಲಾಡಿ ಜೋಡಿʼ, ʼನಾಗರಹೊಳೆʼ, ʼಬಂಧನʼ, ʼಮುತ್ತಿನಹಾರʼ, ʼಹಿಮಪಾತʼ ಮತ್ತು ʼಮಹಾಕ್ಷತ್ರಿಯʼ ಇಂತಹ ಅಪರೂಪದ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ʼಮಹಾಕ್ಷತ್ರಿಯʼ ತನ್ನದೇ ಆದ ಫ್ಯಾನ್ ಬೇಸ್ ಹೊಂದಿರುವ ಚಿತ್ರವಾಗಿದೆ. ಈ ಚಿತ್ರದಲ್ಲಿ ನಾಯಕನು ತನ್ನ ಮುಂಗೋಪದ ಕಾರಣದಿಂದ ತನ್ನ ಜೀವನವನ್ನು ಕಾರಾಗೃಹದಲ್ಲಿ ಕಳೆಯುವಂತಾಗುತ್ತದೆ. ಒಂದು ಕ್ಷಣದ ಕೋಪವು ಮನುಷ್ಯನ ಜೀವನವನ್ನು ಯಾವ ರೀತಿಯಲ್ಲಿ ದಿಕ್ಕುತಪ್ಪಿಸುತ್ತದೆ ಎನ್ನುವುದನ್ನು ಸಾರಿ ಹೇಳುವ ಚಿತ್ರವಿದು. 

ಇದನ್ನೂ ಓದಿ: ಖ್ಯಾತ ನಿರ್ದೇಶಕ RGVಗೆ ಶಾಕ್‌ ಕೊಟ್ಟ ಮುಂಬೈ ಕೋರ್ಟ್..! ಮೂರು ತಿಂಗಳು ಜೈಲು..

ಜೈಲ್ ಸುಪರಿಟೆಂಡೆಂಟ್ ಸೋನುವಾಲಿಯಾ ಅವರು ದಾದಾ ಅವರಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಹೊರತರಲು ನೆರವಾಗುತ್ತಾರೆ. ಜೈಲಿನಲ್ಲಿದ್ದುಕೊಂಡು ದಾದಾ ಬರೆಯುವ ‘ಕ್ಷಣಕಾಲ’ ಪುಸ್ತಕವು ಅವರ ಜೀವನಕ್ಕೆ ಹೊಸ ತಿರುವನ್ನು ನೀಡುತ್ತದೆ.

ಉತ್ತಮ ನಡತೆಯ ಆಧಾರದಿಂದ ಜೈಲಿನಿಂದ ಹೊರಬರುವ ದಾದಾ, ದಾರಿತಪ್ಪಿದ ಸ್ನೇಹಿತರನ್ನು ಮನಃಪರಿವರ್ತನೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವ ರೀತಿ ನಿಜಕ್ಕೂ ಅರ್ಥವತ್ತಾಗಿ ಮೂಡಿಬಂದಿದೆ. ಯುದ್ಧ ಮಾಡಿ ಗೆಲ್ಲುವವ ʼಕ್ಷತ್ರಿಯʼ, ಯುದ್ಧಮಾಡದೆ ಗೆಲ್ಲುವವ ʼಮಹಾಕ್ಷತ್ರಿಯʼ. ಈ ಚಿತ್ರದ ಕಥಾವಸ್ತುವೇ ಇದಾಗಿದೆ.

ಇದನ್ನೂ ಓದಿ: "ನೀ ನಡೆದಂತೆ ನನ್ನ ದಾರಿ"..! ಸ್ಟಾರ್ ನಟನ ಜೊತೆ ಅಫೇರ್ ವದಂತಿ ನಡುವೆಯೇ ಸಿನಿಮಾ ಇಂಡಸ್ಟ್ರಿ ತೊರೆಯಲು ಮುಂದಾದ್ರಾ ನಟಿ ತ್ರಿಶಾ!?

ದಾದಾ ಅವರ ವಿಭಿನ್ನ ಅಭಿನಯ ಈ ಚಿತ್ರದ ಹೈಲೈಟ್ಸ್. ಈ ಚಿತ್ರದಲ್ಲಿ ನಾಯಕಿ ಸೋನು ವಾಲಿಯಾ, ಸುಧಾರಾಣಿ, ರಾಮ್ ಕುಮಾರ್, ಶಂಕರ್ ಅಶ್ವಥ್, ಗುರುರಾಜ್ ಹೊಸಕೋಟೆ ಎಲ್ಲರೂ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಹಂಸಲೇಖ ಅವರ ಸಂಗೀತ ನಿರ್ದೇಶನ ಅಮೋಘವಾಗಿದ್ದು, ಹಾಡುಗಳು ಎವರ್ ಗ್ರೀನ್ ಎನಿಸಿಕೊಂಡಿವೆ.

(✍ ಇದು ಫೇಸ್‌ಬುಕ್‌ನಲ್ಲಿ ಪ್ರಕಟವಾಗಿರುವ ಬರಹ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News