ಬೆಂಗಳೂರು : ರಾಜ್ಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಒಟ್ಟು 10 ವಿದ್ಯಾರ್ಥಿಗಳಿಗೆ ಇಂಗ್ಲೆಂಡ್, ಅಮೆರಿಕ ಪ್ರವಾಸ ಭಾಗ್ಯ ಲಭಿಸಿದೆ. ಈ ಮೂಲಕ ವಸತಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸ ಮಾಡುವ ಅವಕಾಶ ಒಲಿದು ಬಂದಿದೆ.
ವಿದೇಶ ಪ್ರವಾಸಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಬಹುತೇಕ ಎಲ್ಲರೂ ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದು ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲೇ ಪಿಯುಸಿ ಮಾಡುತ್ತಿದ್ದಾರೆ. ಈ ಅಂಕಗಳ ಆಧಾರದಲ್ಲಿ ವಿದೇಶ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ : ಅಮಾಯಕರ ಮೇಲೆ ಬಸವರಾಜ್ ದಡೇಸುಗೂರು ಧಮ್ಕಿ
ಹುಕ್ಕೇರಿ ತಾಲೂಕಿನ ನಿಡಸೋಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸವಿತಾ ಠಪಾಲ, ರಾಯಭಾಗ ತಾಲೂಕಿನ ಸುಟ್ಟಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸ್ಮಿತಾ ಧುಮಾಳೆ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಮೂವರು, ಹಾವೇರಿ ಜಿಲ್ಲೆಯಿಂದ ಇಬ್ಬರು, ಗದಗ-ಉಡುಪಿ-ಕೋಲಾರ ಜಿಲ್ಲೆಯಿಂದ ತಲಾ ಒಬ್ಬರು ಸೇರಿದಂತೆ ಒಟ್ಟು 10 ವಿದ್ಯಾರ್ಥಿಗಳು ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ.
ವಿದ್ಯಾರ್ಥಿಗಳ ಆಯ್ಕೆ, ಪಾಸ್ಪೋರ್ಟ್, ವೀಸಾ, ಪ್ರಯಾಣ, ವಸತಿ ಸಹಿತ ಸಂಪೂರ್ಣ ಖರ್ಚು ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆಯು ಕ್ರೈಸ್ನ ಮೂಲಕ ಭರಿಸಲಿದೆ. ಪ್ರಯಾಣ ಪೂರ್ವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಪೂರ್ಣ ಪ್ರಕ್ರಿಯೆ ಮುಗಿಯದ ಹಿನ್ನೆಲೆಯಲ್ಲಿ ಅಧಿಕೃತ ಆದೇಶ ಬಾಕಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ನಲ್ಲಿ ನಿಲ್ಲದ ಸಿದ್ದು..ಡಿಕೆ ಬಣ ಬಡಿದಾಟ
ಪ್ರವಾಸಕ್ಕೆ ತೆರಳಲಿರುವ 10 ವಿದ್ಯಾರ್ಥಿಗಳಲ್ಲಿ ಐವರು ವಿದ್ಯಾರ್ಥಿಗಳು ಮತ್ತು ಐವರು ವಿದ್ಯಾರ್ಥಿನಿಯರು ಇದ್ದಾರೆ. ಐವರು ವಿದ್ಯಾರ್ಥಿಗಳಲ್ಲೂ ಇಬ್ಬರು ಪರಿಶಿಷ್ಟ ಜಾತಿ, ಇಬ್ಬರು ಹಿಂದುಳಿದ ವರ್ಗ ಮತ್ತು ಒಬ್ಬರು ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದಾರೆ. ಇದು ಒಟ್ಟು 15 ದಿನಗಳ ಪ್ರವಾಸವಾಗಿದೆ. ಪ್ರಮುಖ ಸ್ಥಳಗಳ ಸಂದರ್ಶನ, ಮಾನವ ಸರಪಳಿಯ ವಿಶ್ವದಾಖಲೆಯ ಕಾರ್ಯಕ್ರಮ ವೀಕ್ಷಣೆ ಇರಲಿದೆ. ಕೆಲವು ಅಧಿಕಾರಿಗಳು ಜತೆಗಿರಲ್ಲಿದ್ದಾರೆ.
ಆರನೇ ತರಗತಿಯಿಂದಲೇ ಕ್ರೈಸ್ನ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದಿರಬೇಕು. ಅಷ್ಟೇ ಅಲ್ಲದೇ ಕ್ರೈಸ್ ನ ವಸತಿ ಶಾಲೆಯಲ್ಲಿಯೇ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವವರನ್ನು ವಿದೇಶ ಪ್ರಯಾಣಕ್ಕೆ ಆಯ್ಕೆ ಮಾಡುವ ಮಾನದಂಡ ಅನುಸರಿಸಲಾಗಿದೆ.
ಪಾಸ್ಪೋರ್ಟ್ ಸಮಸ್ಯೆ.:
ಮೊದಲ ಪಟ್ಟಿ ಪ್ರಕಾರ ಜ.7ರಂದು ಪ್ರಯಾಣ ಹೊರಡಬೇಕಿತ್ತು. ಅಷ್ಟರೊಳಗೆ ಪಾಸ್ಪೋರ್ಟ್, ವೀಸಾ ಆಗದಿರುವುದರಿಂದ ಪ್ರಯಾಣ ವಿಳಂಬವಾಗುತ್ತಿದೆ. ಪಾಸ್ಪೋರ್ಟ್ ಪ್ರಕ್ರಿಯೆ ಮಾಡಿಸುವ ಜವಾಬ್ದಾರಿಯನ್ನು ಎಂಎಸ್ಐಎಲ್ ಸಂಸ್ಥೆಗೆ ನೀಡಲಾಗಿದೆ. ಹೆಚ್ಚಿನ ಮಕ್ಕಳ ಪೋಷಕರು ಉತ್ತರ ಕರ್ನಾಟಕದವರಾಗಿದ್ದಾರೆ. ಕೆಲವರು ಅನಕ್ಷರಸ್ಥರು, ವಿದ್ಯಾರ್ಥಿಗಳು ಅಪ್ರಾಪ್ತರಾದ ಕಾರಣ ಮೊದಲು ಹೆತ್ತವರ ಜನನ ಪ್ರಮಾಣ ಪತ್ರ ಇಲ್ಲ. ಆಧಾರ್ ಮತ್ತು ಇತರ ದಾಖಲೆಗಳಲ್ಲಿ ಹೆಸರು, ದಿನಾಂಕ ವ್ಯತ್ಯಾಸವಿದೆ. ಹೆತ್ತವರ ಪಾಸ್ಪೋರ್ಟ್ ಆಗದ ಹಿನ್ನೆಲೆಯಲ್ಲಿ ಮಕ್ಕಳದ್ದೂ ಆಗದೆ, ಪ್ರಯಾಣ ವಿಳಂಬವಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.