ಮೆಗಾಸ್ಟಾರ್ ಚಿರಂಜೀವಿ ಮಾಜಿ ಅಳಿಯ ದಿಢೀರ್ ನಿಧನ..! ಕಾರಣ ಇದೇನಾ..?

Chiranjeevi son in law death : ಟಾಲಿವುಡ್‌ ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರಿ ಶ್ರೀಜಾ ಅವರ ಮಾಜಿ ಪತಿ ಸಿರೀಶ್ ಭಾರದ್ವಾಜ್ ನಿಧನರಾಗಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಶಿರೀಶ್ ಭಾರದ್ವಾಜ್ ಅವರ ಸಾವು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಕುರಿತು ವರದಿ ಇಲ್ಲಿದೆ ನೋಡಿ.. 

Written by - Krishna N K | Last Updated : Jun 19, 2024, 04:57 PM IST
    • ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರಿ ಶ್ರೀಜಾ ಅವರ ಮಾಜಿ ಪತಿ ನಿಧನ..
    • ಶಿರೀಶ್ ಭಾರದ್ವಾಜ್ ಅವರ ಸಾವು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
    • ಸಿರೀಶ್‌ ಶ್ವಾಸಕೋಶದ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ..
ಮೆಗಾಸ್ಟಾರ್ ಚಿರಂಜೀವಿ ಮಾಜಿ ಅಳಿಯ ದಿಢೀರ್ ನಿಧನ..! ಕಾರಣ ಇದೇನಾ..? title=

Sirish Bhardwaj died : ಹಿರಿಯ ನಟ ಚಿರಂಜೀವಿ ಪುತ್ರಿ ಶ್ರೀಜಾ ಮತ್ತು ಸಿರೀಶ್‌ ಪ್ರೀತಿಸಿ 2007ರಲ್ಲಿ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಈ ಸುದ್ದಿ ಆಗ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿತ್ತು. ಆದಾಗ್ಯೂ, ಅವರ ದಾಂಪತ್ಯ ಜೀವನವು ಹೆಚ್ಚು ಕಾಲ ಉಳಿಯಲಿಲ್ಲ. ಇಬ್ಬರ ನಡುವೆ ಮನಸ್ತಾಪ ಉಂಟಾಗಿ ವಿಚ್ಛೇದನ ಪಡೆದರು.

2012ರಲ್ಲಿ ಶ್ರೀಜಾ ತನಗೆ ಕಿರುಕುಳ ನೀಡಿದ್ದಕ್ಕಾಗಿ ಸಿರೀಶ್‌ ಭಾರದ್ವಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದು, 2014ರಲ್ಲಿ ಶ್ರೀಜಾ ವಿಚ್ಛೇದನ ಪಡೆದಿದ್ದರು. ಆ ನಂತರ ಇಬ್ಬರೂ ಬೇರೆ ಬೇರೆ ಮದುವೆಯಾಗಿ ಜೀವನದಲ್ಲಿ ನೆಲೆಯೂರಿದರು. ಸಧ್ಯ ಸಿರೀಶ್‌ ಶ್ವಾಸಕೋಶದ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು ಆಘಾತವನ್ನುಂಟು ಮಾಡಿದೆ.  

ಇದನ್ನೂ ಓದಿ:ಈ ಬಾರಿಯ ಬಿಗ್ ಬಾಸ್ ಮೊದಲ ಸ್ಪರ್ಧಿ ಈ ಮಹಿಳೆ... ಯಾರು ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!

ಕೆಲ ದಿನಗಳಿಂದ ಸಿರೀಶ್ ಭಾರದ್ವಾಜ್ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ಕಾಲಕಾಲಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಅವರ ಸ್ಥಿತಿ ಹದಗೆಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ವಿಚ್ಛೇದನದ ನಂತರ ಸಿರೀಶ್‌ ಮತ್ತೊಂದು ವಿವಾಹವಾಗಿದ್ದರು. ನಂತರ ಶ್ರೀಜಾ ಕಲ್ಯಾಣ್ ದೇವ್ ಎಂಬುವವರನ್ನು ಎರಡನೇ ವಿವಾಹವಾದರು. ಶ್ರೀಜಾ ಮತ್ತು ಸಿರೀಶ್‌ ಭಾದರ್ವಾಜ್ ಅವರಿಗೆ ಒಬ್ಬ ಹೆಣ್ಣು ಮಗಳಿದ್ದಾಳೆ. ಸದ್ಯ ಅವರು ಶ್ರೀಜಾ ಜೊತೆಗಿದ್ದಾರೆ. ಅಲ್ಲದೆ, ಕಲ್ಯಾಣ್ ದೇವ್ ಅವರೊಂದಿಗೆ ಶ್ರೀಜಾ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News