Devara Twitter Review: ದ್ವಿಪಾತ್ರದಲ್ಲಿ ಜೂ.ಎನ್‌ಟಿಆರ್ ಅಬ್ಬರ.. ಪಕ್ಕಾ ಪೈಸಾ ವಸೂಲ್‌ ಎಂದ ನೆಟ್ಟಿಜನ್ಸ್‌ !

Devara Twitter Review: ಟ್ವಿಟರ್‌ನಲ್ಲಿ ಚಿತ್ರದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ವಿದೇಶದಲ್ಲಿ ಇದನ್ನು ನೋಡಿದವರೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.‌ 

Written by - Chetana Devarmani | Last Updated : Sep 27, 2024, 10:11 AM IST
  • ಜೂನಿಯರ್ ಎನ್ ಟಿಆರ್ ದೇವರ ಸಿನಿಮಾ ರಿಲೀಸ್‌
  • ಪಕ್ಕಾ ಪೈಸಾ ವಸೂಲ್‌ ಎಂದ ನೆಟ್ಟಿಜನ್ಸ್‌ !
  • ದೇವರ ಸಿನಿಮಾ ಟ್ವಿಟರ್‌ ರಿವೀವ್‌ ಇಲ್ಲಿದೆ ನೋಡಿ
Devara Twitter Review: ದ್ವಿಪಾತ್ರದಲ್ಲಿ ಜೂ.ಎನ್‌ಟಿಆರ್ ಅಬ್ಬರ.. ಪಕ್ಕಾ ಪೈಸಾ ವಸೂಲ್‌ ಎಂದ ನೆಟ್ಟಿಜನ್ಸ್‌ ! title=

Devara Twitter Review: ಜೂನಿಯರ್ ಎನ್ ಟಿಆರ್ ಇದೀಗ 'ದೇವರ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಮತ್ತು ಜಾನ್ವಿ ಕಪೂರ್ ಅಭಿನಯದ ದೇವರ ಅಬ್ಬರ ಮೊದಲ ದಿನವೇ ಬಲು ಜೋರಾಗಿದೆ. ಟ್ವಿಟರ್‌ನಲ್ಲಿ ಚಿತ್ರದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ವಿದೇಶದಲ್ಲಿ ಇದನ್ನು ನೋಡಿದವರೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.‌ 

ಬಾಲಿವುಡ್‌‌ ಲೇಡಿ ಸೂಪರ್‌ ಸ್ಟಾರ್ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕಲ್ಯಾಣ್ ರಾಮ್ ಮತ್ತು ಮಿಕ್ಕಿಲಿನೇನಿ ಸುಧಾಕರ್ ನಿರ್ಮಾಣದ ಈ ಚಿತ್ರವು 300 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. 

ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಸ್ಟಾರ್ ಧನುಶ್ರೀ ಆಸ್ಪತ್ರೆಗೆ ದಾಖಲು

ಸೈಫ್ ಅಲಿಖಾನ್, ಪ್ರಕಾಶ್ ರಾಜ್, ಶ್ರೀಕಾಂತ್, ಅಜಯ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಈಗಾಗಲೇ ವಿದೇಶಗಳಲ್ಲಿ ಪ್ರದರ್ಶನ ಕಾಣುತ್ತಿದೆ. NRI ಗಳಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ವರದಿಯಾಗಿದೆ. ವಿದೇಶದಲ್ಲಿ ಚಿತ್ರವನ್ನು ವೀಕ್ಷಿಸಿದ ಚಲನಚಿತ್ರ ವಿಮರ್ಶಕ ಉಮೈರ್ ಸಂಧು ವಿಮರ್ಶೆಯನ್ನು ನೀಡಿದ್ದಾರೆ.

ಎನ್ ಟಿಆರ್ ಹಿಂದೆಂದೂ ಕಾಣದ ರೀತಿಯಲ್ಲಿ ‘ದೇವರ’ ಚಿತ್ರದಲ್ಲಿ ತಮ್ಮೊಳಗಿನ ನಟನನ್ನು ಹೊರತಂದಿದ್ದಾರೆ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ. ಅವರ ನಟನೆಯ ವಿಶ್ವರೂಪವನ್ನು ಈ ಸಿನಿಮಾದಲ್ಲಿ ನೋಡಬಹುದು ಎಂದು ನೆಟ್ಟಿಗರು ಹೊಗಳುತ್ತಿದ್ದಾರೆ. ಅದೇ ಲೆವೆಲ್ ನಲ್ಲಿ ವಿಲನ್ ಪಾತ್ರಧಾರಿ ಸೈಫ್ ಅಲಿ ಖಾನ್ ಕೂಡ ನಟಿಸಿದ್ದು ಫುಲ್‌ ಪೈಸಾ ವಸೂಲ್‌ ಸಿನಿಮಾ ಎನ್ನುತ್ತಾರೆ ನೆಟಿಜನ್. 

 

 

 

 

 

 

ಫೈಟ್ ಸೀನ್ ಗಳಲ್ಲಿ ಇಬ್ಬರೂ ಹೊಡೆದಾಡಿದ ರೀತಿಯನ್ನು ಟ್ವಿಟರ್ ಬಳಕೆದಾರರು ಹಾಡಿ ಹೊಗಳಿ ಪೋಸ್ಟ್ ಮಾಡುತ್ತಿದ್ದಾರೆ. ಇವರಿಬ್ಬರ ಅಭಿನಯದಿಂದ ಚಿತ್ರ ರೇಂಜ್ ಹೆಚ್ಚಿದೆ ಎಂಬ ಚರ್ಚೆ ನಡೆಯುತ್ತಿದೆ. ಜಾನ್ವಿ ಕಪೂರ್ ಸೌಂದರ್ಯ ಕೂಡ ಚಿತ್ರದ ಪ್ಲಸ್‌ ಪಾಯಿಂಟ್‌ ಆಗಿದೆ ಎಂದು ಚಿತ್ರ ಪ್ರೇಮಿಗಳು ಕಾಮೆಂಟ್ ಮಾಡುತ್ತಿದ್ದಾರೆ.  

ಕೊರಟಾಲ ಶಿವ ಅವರ ಚಿತ್ರಕಥೆಯೇ ಸಿನಿಮಾದ ಪ್ರಮುಖ ಶಕ್ತಿ ಎನ್ನಲಾಗುತ್ತಿದೆ. ಸಿನಿಮಾದ ಹೈಲೈಟ್ ಯಂಗ್ ಟೈಗರ್. ಅನಿರುದ್ಧ್ ಅವರ ಬಿಜಿಎಂ ಪ್ರೇಕ್ಷಕರನ್ನು ಥಿಯೇಟರ್‌ಗಳಲ್ಲಿ ಕೇಕೆ ಹಾಕಿ ಕಿರುಚುವಂತೆ ಮಾಡುತ್ತಿದೆ ಎಂದು ಸಿನಿಮಾ ನೋಡಿದವರು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.

 

 

ಇದನ್ನೂ ಓದಿ: ಕನ್ನಡದ ಖಾಸಗಿ ವಾಹಿನಿಯಲ್ಲಿ ಶುರುವಾಗುತ್ತಿದೆ ಕಾಂಟ್ರಾಕ್ಟ್ ಮದುವೆಯ ಕಥೆಯನ್ನೊಳಗೊಂಡ ಹೊಸ ಧಾರಾವಾಹಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News