ಸಂಜೆ ಹೊತ್ತು ಮನೆ ಬಾಗಿಲು ಮತ್ತು ಕಿಟಕಿ ಬಳಿ ಈ ಎಲೆಯನ್ನು ಕಿವುಚಿ ಇಟ್ಟರೆ ಒಂದೇ ಒಂದು ಸೊಳ್ಳೆಯೂ ಬರಲ್ಲ... ಅದರ ವಾಸನೆಗೇ ಓಡಿ ಹೋಗುತ್ತೆ! ಪರದೆ, ಸೊಳ್ಳೆಬತ್ತಿ ಯಾವುದೂ ಬೇಡ

Mosquito repellent home remedies: ಈ ಸಾರಭೂತ ತೈಲಗಳು ಮತ್ತು ಎಲೆಗಳು ಸೊಳ್ಳೆ ಕಾಟದಿಂದ ಮುಕ್ತಿ ನೀಡುತ್ತವೆ. ಈ ಎಣ್ಣೆ ಅಥವಾ ಎಲೆಯನ್ನು ಚೆನ್ನಾಗಿ ಕೈಗಳಿಗೆ ಉಜ್ಜಿಕೊಂಡರೆ ಅಥವಾ ಮನೆಬಾಗಿಲು- ಕಿಟಕಿಯ ಬಳಿ ಇಟ್ಟರೆ ಸಾಕು ಇವುಗಳ ಗಾಢ ಪರಿಮಳಕ್ಕೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ.  

Written by - Bhavishya Shetty | Last Updated : Sep 27, 2024, 08:05 PM IST
    • ಈ ಸಾರಭೂತ ತೈಲಗಳು ಮತ್ತು ಎಲೆಗಳು ಸೊಳ್ಳೆ ಕಾಟದಿಂದ ಮುಕ್ತಿ ನೀಡುತ್ತವೆ.
    • ಈ ಎಲೆಯನ್ನು ಬಾಗಿಲು- ಕಿಟಕಿಯ ಬಳಿ ಇಟ್ಟರೆ ಸೊಳ್ಳೆ ಬರುವುದಿಲ್ಲ
    • ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಲೆಮನ್‌ಗ್ರಾಸ್ ಎಲೆ ಅಥವಾ ಅದರ ಎಣ್ಣೆಯನ್ನು ಬಳಸಲಾಗುತ್ತದೆ
ಸಂಜೆ ಹೊತ್ತು ಮನೆ ಬಾಗಿಲು ಮತ್ತು ಕಿಟಕಿ ಬಳಿ ಈ ಎಲೆಯನ್ನು ಕಿವುಚಿ ಇಟ್ಟರೆ ಒಂದೇ ಒಂದು ಸೊಳ್ಳೆಯೂ ಬರಲ್ಲ... ಅದರ ವಾಸನೆಗೇ ಓಡಿ ಹೋಗುತ್ತೆ! ಪರದೆ, ಸೊಳ್ಳೆಬತ್ತಿ ಯಾವುದೂ ಬೇಡ title=
File Photo

How to get rid of mosquitoes inside the house naturally: ಸಂಜೆ ವೇಳೆ ಬಾಲ್ಕನಿಯಲ್ಲಿ ಕುಳಿತು ಚಹಾ ಕುಡಿಯೋಣ ಎಂದರೆ ಸೊಳ್ಳೆಗಳ ಕಾಟದಿಂದ ಸಾಧ್ಯವಾಗೋದಿಲ್ಲ. ಹೀಗಿರುವಾಗ ಕೆಲವೊಂದು ಟಿಪ್ಸ್‌ಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಬಹುದು.

ಇದನ್ನೂ ಓದಿ:  ಕೋಚ್‌ ಗೌತಮ್‌ ಗಂಭೀರ್‌ರನ್ನು ಅಪ್ಪಿಕೊಂಡು ಕಿಸ್ ಮಾಡಿದ ವಿರಾಟ್‌ ಕೊಹ್ಲಿ!?

ಈ ಸಾರಭೂತ ತೈಲಗಳು ಮತ್ತು ಎಲೆಗಳು ಸೊಳ್ಳೆ ಕಾಟದಿಂದ ಮುಕ್ತಿ ನೀಡುತ್ತವೆ. ಈ ಎಣ್ಣೆ ಅಥವಾ ಎಲೆಯನ್ನು ಚೆನ್ನಾಗಿ ಕೈಗಳಿಗೆ ಉಜ್ಜಿಕೊಂಡರೆ ಅಥವಾ ಮನೆಬಾಗಿಲು- ಕಿಟಕಿಯ ಬಳಿ ಇಟ್ಟರೆ ಸಾಕು ಇವುಗಳ ಗಾಢ ಪರಿಮಳಕ್ಕೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ.

ಲೆಮನ್‌ಗ್ರಾಸ್- ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಲೆಮನ್‌ಗ್ರಾಸ್ ಎಲೆ ಅಥವಾ ಅದರ ಎಣ್ಣೆಯನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಇದನ್ನು ಬಳಸುವುದರಿಂದ ಕೆಲವು ಗಂಟೆಗಳ ಕಾಲ ಸೊಳ್ಳೆಗಳು ನಿಮ್ಮಿಂದ ದೂರವಿರುತ್ತವೆ.

ತುಳಸಿ: ತುಳಸಿ ಎಲೆಗಳನ್ನು ಅನೇಕ ರೀತಿಯ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಈ ಗಿಡ ಮನೆ ಬಳಿ ಇದ್ದರೆ ಸೊಳ್ಳೆ ಕಾಟ ಇರುವುದಿಲ್ಲ. ಇದರ ಎಲೆಯನ್ನು ಚೆನ್ನಾಗಿ ಕಿವುಚಿ ಮನೆ ಬಾಗಿಲಿನಲ್ಲಿಟ್ಟರೆ ಸೊಳ್ಳೆಗಳು ಬರುವುದೇ ಇಲ್ಲ

ಪುದೀನಾ ಎಣ್ಣೆ: ಪುದೀನಾ ಎಣ್ಣೆಯ ವಾಸನೆಯು ಸೊಳ್ಳೆಗಳನ್ನು ನಿಮ್ಮಿಂದ ದೂರವಿರಿಸಲು ಸಹಾಯ ಮಾಡುತ್ತದೆ. ನೋವಿನಿಂದ ಪರಿಹಾರ ಪಡೆಯಲು ಸಹ ಇದನ್ನು ಬಳಸಬಹುದು.

ಲ್ಯಾವೆಂಡರ್ - ಸೊಳ್ಳೆಗಳನ್ನು ನಿವಾರಿಸಲು ಲ್ಯಾವೆಂಡರ್ ಸಹಾಯ ಮಾಡುತ್ತದೆ. ಇದರ ಹೂವನ್ನಾದರೂ ಬಳಸಬಹುದು ಅಥವಾ ಎಣ್ಣೆಯನ್ನು ಕೈ ಕಾಲುಗಳಿಗೆ ಹಚ್ಚಬಹುದು

ಪುದೀನಾ ರಸ-ತೆಂಗಿನೆಣ್ಣೆಯೊಂದಿಗೆ 3 ರಿಂದ 5 ಹನಿ ಪುದೀನಾ ರಸವನ್ನು ಬೆರೆಸಿ ಇಡೀ ದೇಹಕ್ಕೆ ಹಚ್ಚಿದರೆ ತ್ವಚೆಯ ಹೊಳಪು ಹೆಚ್ಚುವುದಲ್ಲದೆ ಸೊಳ್ಳೆಗಳ ಕಾಟವೂ ತಪ್ಪುತ್ತದೆ. ಚರ್ಮದ ಮೇಲೆ ಯಾವುದೇ ಕಲೆಗಳು ಇದ್ದರೂ ಸಹ ಗುಣವಾಗುತ್ತವೆ.

ಇದನ್ನೂ ಓದಿ:   ಗಂಟುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್‌ನ್ನು ಥಟ್ಟಂತ ಕರಗಿಸುತ್ತೆ ಈ ಹಣ್ಣು: ಕಿಡ್ನಿಸ್ಟೋನ್ ಕರಗಿಸಲು ಕೂಡ ಇದು ದಿವ್ಯೌಷಧವಿದ್ದಂತೆ

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News