ಕನ್ನಡದ ಖಾಸಗಿ ವಾಹಿನಿಯಲ್ಲಿ ಶುರುವಾಗುತ್ತಿದೆ ಕಾಂಟ್ರಾಕ್ಟ್ ಮದುವೆಯ ಕಥೆಯನ್ನೊಳಗೊಂಡ ಹೊಸ ಧಾರಾವಾಹಿ!

KANNADA SERIAL: ಕನ್ನಡ ಕಿರುತೆರೆಯಲ್ಲಿ ಅದೆಷ್ಟೋ ಮದುವೆ ಆಧಾರಿತ ಕಥೆಗಳು ಬಂದು ಹೋಗಿವೆ. ಇದೀಗ 'ನಿನ್ನ ಜೊತೆ ನನ್ನ ಕಥೆ' ಎಂಬ ಹೊಸ ಧಾರಾವಾಹಿಯನ್ನು ಪರಿಚಯಿಸಲು ಮುಂದಾಗಿದೆ ಕನ್ನಡದ ಖ್ಯಾತ ಖಾಸಗಿ ವಾಹಿನಿ. ಕರ್ನಾಟಕದ ಸಕ್ಕರೆನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಈ ಕಥೆಯು ಕೇಂದ್ರೀಕೃತವಾಗಿರುತ್ತದೆ.   

Last Updated : Sep 26, 2024, 01:19 PM IST
  • 'ನಿನ್ನ ಜೊತೆ ನನ್ನ ಕಥೆ' ಎಂಬ ಹೊಸ ಧಾರಾವಾಹಿಯನ್ನು ಪರಿಚಯಿಸಲು ಮುಂದಾಗಿದೆ ಕನ್ನಡದ ಖ್ಯಾತ ಖಾಸಗಿ ವಾಹಿನಿ.
  • ಕರ್ನಾಟಕದ ಸಕ್ಕರೆನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಈ ಕಥೆಯು ಕೇಂದ್ರೀಕೃತವಾಗಿರುತ್ತದೆ.
ಕನ್ನಡದ ಖಾಸಗಿ ವಾಹಿನಿಯಲ್ಲಿ ಶುರುವಾಗುತ್ತಿದೆ ಕಾಂಟ್ರಾಕ್ಟ್ ಮದುವೆಯ ಕಥೆಯನ್ನೊಳಗೊಂಡ ಹೊಸ ಧಾರಾವಾಹಿ! title=

KANNADA SERIAL: ಕನ್ನಡ ಕಿರುತೆರೆಯಲ್ಲಿ ಅದೆಷ್ಟೋ ಮದುವೆ ಆಧಾರಿತ ಕಥೆಗಳು ಬಂದು ಹೋಗಿವೆ. ಇದೀಗ 'ನಿನ್ನ ಜೊತೆ ನನ್ನ ಕಥೆ' ಎಂಬ ಹೊಸ ಧಾರಾವಾಹಿಯನ್ನು ಪರಿಚಯಿಸಲು ಮುಂದಾಗಿದೆ ಕನ್ನಡದ ಖ್ಯಾತ ಖಾಸಗಿ. ಕರ್ನಾಟಕದ ಸಕ್ಕರೆನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಈ ಕಥೆಯು ಕೇಂದ್ರೀಕೃತವಾಗಿರುತ್ತದೆ. 

ಸಾಮಾನ್ಯವಾಗಿ ಮನಸು-ಮನಸುಗಳ ಬೆಸುಗೆಯಿಂದ ಮದುವೆಯಾಗುತ್ತದೆ. ಆದರೆ ಇದೊಂತರ ಡಿಫರೆಂಟ್ ಕಥೆ ಅಂತಾನೇ ಹೇಳಬಹುದು. ಕಥಾನಾಯಕಿ ಭೂಮಿ ಚಹಾ ಮಾರುವವಳಾಗಿದ್ದು, ಪೊಲೀಸ್ ಕಾನ್ಸ್ಟೇಬಲ್ ಆಗಬೇಕೆಂಬ ಕನಸನ್ನು ಹೊಂದಿರುತ್ತಾಳೆ. ಇನ್ನೊಂದು ಕಡೆ ಯಾರದ್ದೋ ಸಂಚಿಗೆ ಬಲಿಯಾಗಿ ಭೂಮಿಯ ತಾಯಿ ತಪ್ಪೇ ಮಾಡದಿದ್ರೂ ಜೈಲು ಸೇರಿರುತ್ತಾರೆ. 

ಇನ್ನು ಈ ಕಥೆಯ ನಾಯಕ ಆದಿತ್ಯ, ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ದು ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿರುತ್ತಾನೆ. ಮದುವೆ ಅಂದ್ರೇನೆ ಇಷ್ಟವಿರದ ಆದಿಗೆ ಮನೆಯಲ್ಲಿ ಮದುವೆಯ ತಯಾರಿ ಮಾಡುತ್ತಿರುತ್ತಾರೆ. ಅನಿವಾರ್ಯ ಕಾರಣಕ್ಕಾಗಿ ಭೂಮಿ ಹಾಗು ಆದಿ ಪರಸ್ಪರ ಷರತ್ತುಗಳ ಮೇರೆಗೆ ಒಂದು ವರ್ಷದ ಕಾಂಟ್ರಾಕ್ಟ್‌ಗೆ ಸಹಿ ಹಾಕಿ ಇಬ್ಬರು ಒಪ್ಪಂದದಂತೆ ಮದುವೆಯಾಗುತ್ತಾರೆ. ಅನಿವಾರ್ಯತೆಯ ಕಾರಣಕ್ಕೆ ಕಾಂಟ್ರಾಕ್ಟ್‌ ಮಾಡಿಕೊಂಡು ಮದುವೆ ಮಾಡಿಕೊಳ್ಳುವ ಈ ಜೋಡಿ ಮನಸ್ಸು ಕಾಂಟ್ರಾಕ್ಟ್‌ ಮುಗಿದ ಒಂದು ವರ್ಷದ ನಂತರ ಬದಲಾಗಿರುತ್ತಾ? ಒಂದು ವರ್ಷ ಸಂಸಾರ ನಡೆಸಿದ ನಂತರ ಒಬ್ಬರ ಮೇಲೆ ಇನ್ನೊಬ್ಬರಿಗೆ ಇರುವ ಅಭಿಪ್ರಾಯವೇನು? ಎಂಬುದೆ ಈ ಧಾರವಾಹಿಯ ಕಥೆ. 

ಈ ಕಥೆಯ ನಾಯಕನ ಪಾತ್ರದಲ್ಲಿ ನಟಿಸುತ್ತಿರುವ ನಟ ನಿರಂಜನ್ ವರ್ಷಗಳ ಬಳಿಕ "ನಿನ್ನ ಜೊತೆ ನನ್ನ ಕಥೆ" ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ. ನಾಯಕಿಯಾಗಿ ನಟಿ ನಿರುಷ ಗೌಡ ನಟಿಸುತ್ತಿದ್ದು ಕಥೆಯು ಅದ್ಬುತ ತಾರಾಬಳಗವನ್ನು ಹೊಂದಿದೆ. . ಶುರುವಾಗ್ತಿದೆ ಹೊಚ್ಚ ಹೊಸ ಧಾರಾವಾಹಿ "ನಿನ್ನ ಜೊತೆ ನನ್ನ ಕಥೆ" ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News