omlet ಮಾಡಲು ಮೊಟ್ಟೆ ಒಡೆದರೆ ಕಾವಲಿ ಮೇಲೆ ಪುಟಿದೆದ್ದ ಕೋಳಿ ಮರಿ, ಇಲ್ಲಿದೆ ವಿಡಿಯೋ

ಅಂಗಡಿಯವನು ದೊಡ್ಡ ಬಾಣಲೆಯ ಮೇಲೆ ಮೊಟ್ಟೆ ಒಡೆದು ಆಮ್ಲೆಟ್ ಹಾಕುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಒಮ್ಲೆಟ್ ಹಾಕಲು ಮೊಟ್ಟೆ ಒಡೆಯುವಾಗ ಏನು ನಡೆಯಿತು ಎನ್ನುವುದೇ ಇಲ್ಲಿ ಆಶ್ಚರ್ಯಕವಾದ ಸಂಗತಿ.

Written by - Ranjitha R K | Last Updated : Jan 3, 2022, 11:23 AM IST
  • ಇಲ್ಲಿದೆ ಬೆರಗುಗೊಳಿಸುವ ವಿಡಿಯೋ
  • ಆಮ್ಲೆಟ್ ಹಾಕುವ ವೇಳೆ ಮೊಟ್ಟೆಯಿಂದ ಹೊರ ಬಂತು ಮರಿ
  • ವೈರಲ್ ಆಗುತ್ತಿದೆ ವಿಡಿಯೋ
 omlet ಮಾಡಲು ಮೊಟ್ಟೆ ಒಡೆದರೆ ಕಾವಲಿ ಮೇಲೆ ಪುಟಿದೆದ್ದ ಕೋಳಿ ಮರಿ, ಇಲ್ಲಿದೆ ವಿಡಿಯೋ   title=
ಇಲ್ಲಿದೆ ಬೆರಗುಗೊಳಿಸುವ ವಿಡಿಯೋ (photo instagram)

ನವದೆಹಲಿ : Chicken Viral Video: ಸಾಮಾಜಿಕ ಮಾಧ್ಯಮದಲ್ಲಿ (Social media) ನಾವು ಅನೇಕ ಆಘಾತಕಾರಿ ವೀಡಿಯೊಗಳನ್ನು ನೋಡುತ್ತಿರುತ್ತೇವೆ. ಈ ಕೆಲವು ವೀಡಿಯೋಗಳನ್ನು (Viral video) ನೋಡದ ತಕ್ಷಣ ಆಕರ್ಶಿಸಿ ಬಿಡುತ್ತವೆ. ಇಂತಹದೊಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Social media video) ಆಗುತ್ತಿದೆ.  ಈ ವಿಡಿಯೋವನ್ನು ನೋಡಿದರೆ ಒಂದು ಕ್ಷಣಕ್ಕೆ ನಮ್ಮ ಕಣ್ಣನ್ನು ನಾವೇ ನಂಬುವುದು ಸಾಧ್ಯವಾಗುವುದಿಲ್ಲ. 

ಮೊಟ್ಟೆಯೊಳಗಿಂದ ಚಂಗನೆ ಜಿಗಿಯಿತು ಕೋಳಿ ಮರಿ : 
ಅಂಗಡಿಯವನು ದೊಡ್ಡ ಬಾಣಲೆಯ ಮೇಲೆ ಮೊಟ್ಟೆ ಒಡೆದು ಆಮ್ಲೆಟ್ (Omlet video) ಹಾಕುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಒಮ್ಲೆಟ್ ಹಾಕಲು ಮೊಟ್ಟೆ ಒಡೆಯುವಾಗ ಏನು ನಡೆಯಿತು ಎನ್ನುವುದೇ ಇಲ್ಲಿ ಆಶ್ಚರ್ಯಕವಾದ ಸಂಗತಿ.  ಏಕೆಂದರೆ ಆಮ್ಲೆಟ್ ಹಾಕಲು ಮೊಟ್ಟೆ ಒಡೆದಾಗ, ಮೊಟ್ಟೆಯಿಂದ ಕೋಳಿ ಮರಿ ಜಿಗಿದು ಬಂದಿರುವುದುವನ್ನು ವಿಡಿಯೋದಲ್ಲಿ (Viral video) ಕಾಣಬಹುದು. 

ಇದನ್ನೂ ಓದಿ  : Watch:ಪುಟ್ಟ ಮಗುವಿನಂತೆ ಹಾವಿಗೆ ಸ್ನಾನ ಮಾಡಿಸುವ ವ್ಯಕ್ತಿ, ವಿಡಿಯೋ ವೈರಲ್

ಈ ವಿಡಿಯೋದಲ್ಲಿ (Video) ಕಾಣುವ ಹಾಗೆ ಮೊಟ್ಟೆಯನ್ನು ಒಡೆದಾಗ ಅದರಿಂದ ಮರಿ ಹೊರಬಂದಿರುವುದು ಕಾಣಿಸುತ್ತದೆ.  ಅಂಗಡಿಯವನು ಆಮ್ಲೆಟ್ ಮಾಡಲು ದೊಡ್ಡ ಬಾಣಲೆಯ ಮೇಲೆ ಮೊಟ್ಟೆಯನ್ನು ಒಡೆಯುತ್ತಿರುವುದನ್ನು ನೋಡಬಹುದು. ಮೊದಲು ಎರಡು ಮೊಟ್ಟೆಗಳನ್ನು (Egg) ಒಡೆಯುತ್ತಾನೆ. ಇದರ ನಂತರ, ಅವನು ಬಾಣಲೆಯ ಮೇಲೆ ಮತ್ತೊಂದು ಮೊಟ್ಟೆಯನ್ನು ಒಡೆದ ತಕ್ಷಣ, ಮೊಟ್ಟೆಯಿಂದ ಮರಿ ಹೊರಬರುತ್ತದೆ. 

 

ಮೊಟ್ಟೆಯಿಂದ ಮರಿ ಹೊರಬಂದ ತಕ್ಷಣ ಅಂಗಡಿಯವನು ಮರಿಯನ್ನು ಕೈಯಲ್ಲಿ ಹಿಡಿದುಕೊಂಡಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಈ ವೇಳೆ ಅಲ್ಲಿ ನಿಂತಿದ್ದವರಿಗೆ ಏನಾಗುತ್ತಿದೆ ಎನ್ನುವುದೇ ಅರ್ಥವಾಗುವುದಿಲ್ಲ. ರಾಬಿನ್‌ಹುಡ್_ಪ್ರೀತ್ ಎಂಬ ಖಾತೆಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು (Instagram video) ಹಂಚಿಕೊಳ್ಳಲಾಗಿದೆ. ಆದಾಗ್ಯೂ, ಈ ವೀಡಿಯೊ ಎಲ್ಲಿಂದ ಬಂದಿದೆ ಮತ್ತು ಇದರ ಸತ್ಯವೇನು ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ, ಈ ವೀಡಿಯೊ ಮಾತ್ರ ನೋಡುಗರನ್ನು ಬೆರಗುಗೊಳಿಸುತ್ತದೆ. 

( ಸೂಚನೆ : Zee Hinsustan ಕನ್ನಡ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಿಲ್ಲ. ) 

ಇದನ್ನೂ ಓದಿ  : Viral Video: ಹಾವು ಮರಿಗೆ ಜನ್ಮ ನೀಡುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲಿದೆ ಅಪರೂಪದ ವೈರಲ್ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News