ಸಾಲದ ಸುಳಿಯಲ್ಲಿ ಸಿಲುಕಿದ್ದ ಅನಿಲ್ ಅಂಬಾನಿಯ ಅದೃಷ್ಟ ಬದಲಿಸಿದ ಪುತ್ರ ಇವನೇ ! ಮತ್ತೆ ಎದ್ದು ನಿಂತಿದೆ 2000 ಕೋಟಿಯ ಸಾಮ್ರಾಜ್ಯ

Anil Ambani Comback Plan: ವ್ಯಾಪಾರದಲ್ಲಿ ಸಂಪೂರ್ಣವಾಗಿ ದಿವಾಳಿಯಾಗಿದ್ದ ಅನಿಲ್ ಅಂಬಾನಿ ಅದೃಷ್ಟ ಮತ್ತೆ ನಿಧಾನವಾಗಿ ಕೈ ಹಿಡಿಯುತ್ತಿದೆ.ಅವರ ಪುತ್ರರು ಉದ್ಯಮಕ್ಕೆ ಪ್ರವೇಶಿಸಿದಾಗಿನಿಂದ,ಅನಿಲ್ ಅಂಬಾನಿ ಅವರ ಕಂಪನಿ ಆರ್ಥಿಕವಾಗಿ ಮತ್ತೆ ಎದ್ದು ನಿಲ್ಲುತ್ತಿದೆ.

Anil Ambani Comback Plan : ಅನಿಲ್ ಅಂಬಾನಿ ಹಿರಿಯ ಮಗ ಜೈ ಅನ್ಮೋಲ್ ಅಂಬಾನಿ ಸತತ ಪರಿಶ್ರಮದ ಮೂಲಕ ಸ್ವಂತವಾಗಿ 2000 ಕೋಟಿ ರೂಪಾಯಿ ವ್ಯವಹಾರವನ್ನು ಕಟ್ಟಿಕೊಂಡಿದ್ದಾರೆ. ಸಾಲವನ್ನು ಕಡಿಮೆ ಮಾಡುವುದರ ಜೊತೆಗೆ ಹೂಡಿಕೆಯನ್ನು ಹೆಚ್ಚಿಸುವುದರತ್ತ ಕೂಡಾ ಗಮನ ಹರಿಸುತ್ತಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

1 /7

ಅನಿಲ್ ಅಂಬಾನಿ ಪುತ್ರರಿಬ್ಬರೂ ಪ್ರಚಾರದಿಂದ ದೂರ ಉಳಿದಿದ್ದಾರೆ.ಎಲ್ಲೂ  ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಈಗ ಜೈ ಅನ್ಮೋಲ್ ಅಂಬಾನಿ ಮತ್ತು ಅನ್ಶುಲ್ ಅಂಬಾನಿ ತಮ್ಮ ತಂದೆಯ ವ್ಯವಹಾರವನ್ನು ಪುನರುಜ್ಜೀವನಗೊಳಿಸಲು ಶ್ರಮಿಸುತ್ತಿದ್ದಾರೆ. 

2 /7

ಅನಿಲ್ ಅಂಬಾನಿಯವರ ಕಂಪನಿ ರಿಲಯನ್ಸ್ ಪವರ್ 2024-25ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಸಾಲ ಮುಕ್ತ ಮಾಡುವ ಗುರಿಯನ್ನು ಹೊಂದಿದೆ. ಕಂಪನಿಯು ಈ ದಿಕ್ಕಿನಲ್ಲಿಯೇ ಸಾಗುತ್ತಿದೆ ಎನ್ನುವುದು ಕೂಡಾ ಗಮನಾರ್ಹ.    ರಿಲಯನ್ಸ್ ಪವರ್ ಇತ್ತೀಚೆಗೆ ಐಸಿಐಸಿಐ,ಡಿಬಿಎಸ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳಿಂದ ಪಡೆದಿರುವ ದೊಡ್ಡ ಮೊತ್ತದ ಸಾಲವನ್ನು  ತೀರಿಸಿದೆ

3 /7

ಸಾಲವನ್ನು ಕಡಿಮೆ ಮಾಡುವ ಜೊತೆಗೆ ಕಂಪನಿಯಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಒತ್ತು ನೀಡಲಾಗುತ್ತಿದೆ. ಜೂನಿಯರ್ ಅಂಬಾನಿ ತೆಗೆದುಕೊಂಡ ಮಹತ್ವದ ಹೆಜ್ಜೆಗಳಿಂದಾಗಿ ಅನಿಲ್ ಅಂಬಾನಿ ಕಂಪನಿಯ ಮೇಲೆ ಹೂಡಿಕೆದಾರರ ವಿಶ್ವಾಸ ಹೆಚ್ಚಾಗತೊಡಗಿದೆ. 

4 /7

ರಿಲಯನ್ಸ್ ಇನ್ಫ್ರಾ ನಾಲ್ಕು ಹೊಸ ಕಂಪನಿಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಅನಿಲ್ ಅಂಬಾನಿ ಮತ್ತು ಅವರ ಪುತ್ರರು ಕಂಪನಿಯನ್ನು ವಿಸ್ತರಿಸುವತ್ತ ದಾಪುಗಾಲು ಇಡುತ್ತಿದ್ದಾರೆ.  ಇವರು ಆರಂಭಿಸುವ ವ್ಯಾಪಾರ ಈಗಲೇ ಬಿಸ್ ನೆಸ್ ವಲಯದಲ್ಲಿ ಸದ್ದು ಮಾಡುತ್ತಿದೆ.   

5 /7

ಅನಿಲ್ ಅಂಬಾನಿ ಚೀನಾದ ಬ್ಯಾಂಕ್‌ಗಳಿಂದ ಸಾಲ ಪಡೆದ ಪ್ರಕರಣದಲ್ಲಿ ಲಂಡನ್ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು.ಅಲ್ಲಿ ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಳ್ಳಬೇಕಾಯಿತು. ನ್ಯಾಯಾಲಯಕ್ಕೆ ಹಾಜರಾಗಲು ವಕೀಲರ ಶುಲ್ಕವನ್ನು ಪಾವತಿಸಲು ತನ್ನ ಹೆಂಡತಿಯ ಆಭರಣಗಳನ್ನು ಮಾರಾಟ ಮಾಡಬೇಕಾಗಿತ್ತು.   

6 /7

ಅನಿಲ್ ಅಂಬಾನಿ ಅವರ ಹಿರಿಯ ಮಗ ಜೈ ಅನ್ಮೋಲ್ ತನ್ನ ಶಿಕ್ಷಣ ಮುಗಿಸಿ  ತಂದೆಯ ಕಂಪನಿಯ ಜವಾಬ್ದಾರಿಯಲ್ಲಿ ಹೆಗಲು ಕೊಡುತ್ತಿದ್ದಾರೆ. ರಿಲಯನ್ಸ್ ಮ್ಯೂಚುವಲ್ ಫಂಡ್‌ನಲ್ಲಿ ಇಂಟರ್ನ್‌ಶಿಪ್ ನಂತರ, ಅವರು 2014 ರಿಂದ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಕ್ರಮೇಣ ಕಂಪನಿಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ

7 /7

ಜೈ ಅನ್ಮೋಲ್ ಮತ್ತು ಅನ್ಶುಲ್ ಅಂಬಾನಿ ತಮ್ಮ ತಂದೆಯ ಕಳೆದುಹೋದ ವ್ಯಾಪಾರ ಸಾಮ್ರಾಜ್ಯವನ್ನು ಮರುನಿರ್ಮಾಣ ಮಾಡುವಲ್ಲಿ ನಿರತರಾಗಿದ್ದಾರೆ. ಅವರ ಮಗ ಕಷ್ಟಪಟ್ಟು ದುಡಿದು ಇಲ್ಲಿಯವರೆಗೆ ಸ್ವಂತವಾಗಿ 2000 ಕೋಟಿ ರೂ. ಸಾಮ್ರಾಜ್ಯವನ್ನು ಎದ್ದು ನಿಲ್ಲಿಸಿದ್ದಾರೆ.